• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡಿಮೆ ಬಡ್ಡಿದರಕ್ಕೆ ಗೃಹಸಾಲ ವರ್ಗಾವಣೆಯ ಮುನ್ನ ಈ ಅಂಶಗಳು ತಿಳಿದಿರಲಿ

|

2019ರ ಫೆಬ್ರವರಿ ಹಾಗೂ ಏಪ್ರಿಲ್ ತಿಂಗಳಲ್ಲಿ ಆರ್‌ಬಿಐ ಎರಡು ಬಾರಿ 0.25 ಮೂಲ ಅಂಕಗಳಷ್ಟು ರೆಪೊ ದರಗಳನ್ನು ಕಡಿತ ಮಾಡಿದೆ. ಸಹಜವಾಗಿಯೇ ಇದರಿಂದ ಗೃಹಸಾಲಗಳ ಬಡ್ಡಿದರಗಳು ಕಡಿಮೆಯಾಗಲಿವೆ. ನಿಮಗೆ ಸಾಲ ನೀಡಿದ ಸಂಸ್ಥೆಯು ಆರ್‌ಬಿಐ ನಿಯಮಾವಳಿಗಳ ಪ್ರಕಾರ ರೆಪೊ ದರಗಳ ಕಡಿತಕ್ಕನುಗುಣವಾಗಿ ಬಡ್ಡಿದರಗಳನ್ನು ಇಳಿಸಿದಾಗ ನಿಮ್ಮ ಗೃಹಸಾಲದ ಮಾಸಿಕ ಇಎಂಐ ಸಹಜವಾಗಿಯೇ ಕಡಿಮೆಯಾಗುತ್ತದೆ. ಆದರೆ ಒಂದು ವೇಳೆ ನೀವು ಸಾಲ ಪಡೆದ ಸಂಸ್ಥೆ ಅಥವಾ ಬ್ಯಾಂಕ್ ಬಡ್ಡಿದರಗಳನ್ನು ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಮಾಡದಿದ್ದಲ್ಲಿ ನೀವು ಬೇರೊಂದು ಹಣಕಾಸು ಸಂಸ್ಥೆಗೆ ಗೃಹಸಾಲವನ್ನು ವರ್ಗಾಯಿಸಿಕೊಳ್ಳಬಹುದು. ಅಂದರೆ ನಿಮ್ಮ ಸಾಲದ ಬಡ್ಡಿದರ ಕಡಿಮೆ ಮಾಡಿಕೊಳ್ಳಲು ಸಾಲವನ್ನು ಬೇರೊಂದು ಹಣಕಾಸು ಸಂಸ್ಥೆಗೆ ವರ್ಗಾವಣೆ ಮಾಡುವುದೇ ಆಗಿದೆ.

ಆದರೆ ಸಾಲದ ವರ್ಗಾವಣೆಯ ಮುನ್ನ ಕೆಲವೊಂದು ಮಹತ್ವದ ಅಂಶಗಳನ್ನು ಪರಿಶೀಲಿಸುವುದು ಅಗತ್ಯ. ಸಾಲ ವರ್ಗಾವಣೆ ಮುಂಚೆ ಯಾವೆಲ್ಲ ಅಂಶಗಳತ್ತ ಗಮನಹರಿಸಬೇಕು ಎಂಬುದನ್ನು ಇಲ್ಲಿ ತಿಳಿಸಿದ್ದು, ನೀವೂ ನೋಡಿ.

ರೆಪೊ ದರ ಕಡಿತದಿಂದ ಎಷ್ಟು ಉಳಿತಾಯ ಮಾಡಬಹುದು

ಉದಾಹರಣೆಗೆ ನೋಡುವುದಾದರೆ, ನೀವು ವಾರ್ಷಿಕ ಶೇ.10 ರ ಬಡ್ಡಿದರದಲ್ಲಿ 20 ವರ್ಷದ ಅವಧಿಗೆ 30 ಲಕ್ಷ ರೂಪಾಯಿ ಗೃಹಸಾಲ ಪಡೆದಿರುವಿರಿ ಎಂದಿಟ್ಟುಕೊಳ್ಳೋಣ. ಈ ಲೆಕ್ಕದಲ್ಲಿ ನಿಮ್ಮ ಮಾಸಿಕ ಇಎಂಐ 28,951 ರೂ.ಗಳಾಗುತ್ತದೆ. ಪ್ರಸ್ತುತ ಎರಡು ಬಾರಿ ಶೇ. 0.25 ರಂತೆ ಶೇ. 0.5 ರಷ್ಟು ರೆಪೊ ದರ ಕಡಿತ ಮಾಡಲಾಗಿದೆ. ಒಂದು ವೇಳೆ ಈ ರೆಪೊ ದರದ ಕಡಿತದ ಸಂಪೂರ್ಣ ಲಾಭವನ್ನು ನಿಮ್ಮ ಸಾಲ ನೀಡಿದ ಸಂಸ್ಥೆ ನಿಮಗೆ ವರ್ಗಾಯಿಸಿದಲ್ಲಿ ನಿಮ್ಮ ಗೃಹಸಾಲದ ಬಡ್ಡಿದರ ಶೇ. 9.5 ಕ್ಕೆ ಇಳಿಕೆಯಾಗುತ್ತದೆ. ಅಂದರೆ ನಿಮ್ಮ ಇಎಂಐ 27,964 ರೂ.ಗಳಿಗೆ ಬಂದು ನಿಲ್ಲುತ್ತದೆ. ಹೀಗಾಗಿ ಇದು 1 ಸಾವಿರ ರೂ. ಇಎಂಐ ಕಡಿಮೆಯಾದಂತೆ. ಪ್ರತಿ ತಿಂಗಳು 1 ಸಾವಿರ ರೂ. ಉಳಿತಾಯ ಅಂದರೆ ದೀರ್ಘಾವಧಿಯಲ್ಲಿ ಇದು ಬಹುದೊಡ್ಡ ಮೊತ್ತವಾಗುತ್ತದೆ.

ಇಲ್ಲಿ ತಿಳಿಸಲಾದ ಲೆಕ್ಕಾಚಾರಗಳು ನಿರ್ದಿಷ್ಟ ಸಾಲದ ಮೊತ್ತ, ಅವಧಿ ಹಾಗೂ ಬಡ್ಡಿದರಗಳಿಗೆ ಅನ್ವಯಿಸುತ್ತವೆ ಎಂಬುದು ಗಮನದಲ್ಲಿರಲಿ. ನಿಮ್ಮ ಸಾಲದ ಲೆಕ್ಕಾಚಾರಗಳಿಗೆ ಅನುಗುಣವಾಗಿ ರೆಪೊ ದರ ಕಡಿತದಿಂದ ನೀವೆಷ್ಟು ಉಳಿಸಬಹುದು ಎಂಬುದನ್ನು ಆನ್ಲೈನ್ ಕ್ಯಾಲ್ಕುಲೇಟರ್ ಮೂಲಕ ಲೆಕ್ಕ ಹಾಕಬಹುದು. ಒಂದು ವೇಳೆ ಗಣನೀಯ ಮೊತ್ತದ ವ್ಯತ್ಯಾಸ ಕಂಡು ಬಂದಲ್ಲಿ ನೀವು ನಿಮ್ಮ ಗೃಹಸಾಲ ವರ್ಗಾವಣೆಗೆ ಮುಂದಾಗಬಹುದು.

ಸಾಲ ವರ್ಗಾವಣೆಯ ಒಟ್ಟು ಶುಲ್ಕಗಳು

ಬೇರೊಂದು ಹಣಕಾಸು ಸಂಸ್ಥೆಗೆ ಸಾಲ ವರ್ಗಾಯಿಸುವ ಮುನ್ನ ಅದರಲ್ಲಿ ಅಡಗಿರುವ ವರ್ಗಾವಣೆ ಶುಲ್ಕಗಳ ಬಗ್ಗೆ ಅರಿತುಕೊಳ್ಳಿ. ಹೊಸ ಸಂಸ್ಥೆಯ ಸಾಲ ವರ್ಗಾವಣೆ ಶುಲ್ಕಗಳು ಸಾಲ ವರ್ಗಾವಣೆಯಿಂದಾಗಬಹುದಾದ ಉಳಿತಾಯವನ್ನು ಮೀರಕೂಡದು ಎಂಬುದು ಗಮನದಲ್ಲಿರಲಿ. ಒಂದು ವೇಳೆ ಇತ್ತೀಚೆಗೆ ನೀವು ಸಾಲ ಪಡೆದುಕೊಂಡಿದ್ದಲ್ಲಿ ಸಾಲ ವರ್ಗಾವಣೆ ಮಾಡುವುದು ಅತಿ ಸಮಂಜಸ. ಏಕೆಂದರೆ ದೀರ್ಘಾವಧಿಯಲ್ಲಿ ನೀವು ಪಾವತಿಸಬೇಕಾದ ಬಡ್ಡಿ ಇನ್ನೂ ಸಾಕಷ್ಟಿರುವುದರಿಂದ ಕಡಿಮೆ ಬಡ್ಡಿ ದರಕ್ಕೆ ಸ್ವಿಚ್ ಆದಲ್ಲಿ ಸಾಕಷ್ಟು ಮೊತ್ತ ಉಳಿಸಬಹುದು. ಆದರೆ ನೀವು ಸಾಲದ ಅವಧಿಯ ಕೊನೆಯ ಹಂತದಲ್ಲಿದ್ದರೆ ಸಾಲ ವರ್ಗಾವಣೆ ಕೆಲವೊಮ್ಮೆ ಉಳಿತಾಯದ ಬದಲಾಗಿ ದುಬಾರಿಯಾಗಿ ಪರಿಣಮಿಸಬಹುದು.

ಗೃಹಸಾಲವನ್ನು ಎಂಸಿಎಲ್‌ಆರ್‌ಗೆ ವರ್ಗಾಯಿಸುವ ಲಾಭಗಳು

ಸಾಮಾನ್ಯವಾಗಿ ಗೃಹಸಾಲಗಳು 20 ವರ್ಷಗಳ ಅವಧಿಯನ್ನು ಹೊಂದಿರುವುದರಿಂದ ಅವು ನಿಮ್ಮ ಸಾಲ ನೀಡಿದ ಸಂಸ್ಥೆಯ ಬಿಪಿಎಲ್‌ಆರ್ (ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್) ದರಗಳನ್ನು ಆಧರಿಸಿರಬಹುದು. ಆದರೆ ಬಿಪಿಎಲ್‌ಆರ್ ಬದಲಾಗಿ ಎಂಸಿಎಲ್‌ಆರ್ (ಮಾರ್ಜಿನಲ್ ಕಾಸ್ಟ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್) ಆಧರಿತ ಸಾಲಗಳು ಉತ್ತಮ ಹಾಗೂ ರೆಪೊ ರೇಟ್ ಕಡಿತವಾದಾಗ ಅದರ ಲಾಭಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಸೂಕ್ತವಾಗಿವೆ. ಹೀಗಾಗಿ ಈಗ ರೆಪೊ ದರ ಕಡಿತವಾದಾಗ ಎಂಸಿಎಲ್‌ಆರ್ ಆಧರಿತ ಸಾಲಗಳ ಬಡ್ಡಿದರಗಳ ಕಡಿತವಾಗುವುದನ್ನು ನಿರೀಕ್ಷೆ ಮಾಡಬಹುದು. ಮುಂದಿನ ಎಂಎಸಿಎಲ್‌ಆರ್ ದರಗಳ ರೆಸೆಟ್ ದಿನಾಂಕದಿಂದ ನಿಮ್ಮ ಸಾಲದ ಬಡ್ಡಿದರಗಳು ಕಡಿಮೆಯಾಗಬಹುದು.

ಬಾಹ್ಯ ಅಂಶಗಳನ್ನು ಆಧರಿಸಿ ಬಡ್ಡಿದರ ನಿರ್ಧಾರದ ಪ್ರಕ್ರಿಯೆಯನ್ನು ಕಳೆದ ವರ್ಷ ತೊಡೆದು ಹಾಕಿರುವ ಹಿನ್ನೆಲೆಯಲ್ಲಿ ಈಗ ನಿಮ್ಮ ಸಾಲವನ್ನು ಎಂಸಿಎಲ್‌ಆರ್ ಆಧರಿತ ಸಾಲ ಯೋಜನೆಗೆ ಮಾರ್ಪಡಿಸಿಕೊಳ್ಳುವತ್ತ ನೀವು ಚಿಂತಿಸಬಹುದು.

ಟಾಪ್ ಅಪ್ ಸೌಲಭ್ಯದ ಲಾಭಗಳು

ಕಡಿಮೆ ಬಡ್ಡಿದರ ಆಕರಿಸುವ ಹಣಕಾಸು ಸಂಸ್ಥೆಗೆ ನಿಮ್ಮ ಸಾಲವನ್ನು ವರ್ಗಾಯಿಸುವ ಸಂದರ್ಭದಲ್ಲಿ ಹೊಸ ಸಂಸ್ಥೆ ನಿಮಗೆ ಟಾಪ್ ಅಪ್ ಲೋನ್ ಸೌಲಭ್ಯ ನೀಡಿದಲ್ಲಿ ನಿಮಗೆ ಮತ್ತೂ ಅನುಕೂಲಕರ. ಗೃಹಸಾಲವಲ್ಲದೆ ನಿಮ್ಮ ವೈಯಕ್ತಿಕ ಹಾಗೂ ವ್ಯವಹಾರದ ಹಣಕಾಸು ಅವಶ್ಯಕತೆಗಳನ್ನು ಈ ಟಾಪ್ ಅಪ್ ಲೋನ್‌ನಿಂದ ಪೂರೈಸಿಕೊಳ್ಳಬಹುದು. ಈ ರೀತಿಯ ಟಾಪ್ ಅಪ್ ಸಾಲಗಳು ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದ್ದು ವೈಯಕ್ತಿಕ ಸಾಲಕ್ಕಿಂತ ಕಡಿಮೆ ಬಡ್ಡಿದರ ವಿಧಿಸುತ್ತವೆ. ನಿಮಗೆ ಉಳಿತಾಯವಾಗುವ ರೀತಿಯಲ್ಲಿ ಹೊಸ ಹಣಕಾಸು ಸಂಸ್ಥೆ ನಿಮಗೆ ಸೌಲಭ್ಯಗಳನ್ನು ನೀಡುತ್ತಿದ್ದಲ್ಲಿ ಸಾಲ ವರ್ಗಾವಣೆ ಮಾಡಲು ಮುಂದಾಗಬಹುದು.

ಪ್ರಸ್ತುತ ದಿನಮಾನಗಳಲ್ಲಿ ಬಜಾಜ್ ಫಿನಸರ್ವ್ ಕಂಪನಿಯಿಂದ ಅತಿ ಕಡಿಮೆ ಬಡ್ಡಿದರಗಳಲ್ಲಿ ನೀವು ಗೃಹಸಾಲ ಪಡೆಯಬಹುದಾಗಿದೆ. ಯಾವುದೇ ಹೆಚ್ಚುವರಿ ದಾಖಲೆಗಳ ಪ್ರಕ್ರಿಯೆ ಇಲ್ಲದೆ 3.5 ಕೋಟಿ ರೂ. ಮೊತ್ತದ ಸಾಲ ಮಾತ್ರವಲ್ಲದೆ ಸುಲಭವಾಗಿ ಬ್ಯಾಲೆನ್ಸ್ ಟ್ರಾನ್ಸಫರ್ ಹಾಗೂ ಅತಿ ಕಡಿಮೆ ಬಡ್ಡಿದರದಲ್ಲಿ ಟಾಪ್ ಅಪ್ ಸಾಲ ಸೌಲಭ್ಯಗಳನ್ನು ಸಹ ನಿಮ್ಮದಾಗಿಸಿಕೊಳ್ಳಬಹುದು.

ನಿಮ್ಮ ಸಾಲದ ಅವಧಿ ಎಷ್ಟು ಪೂರ್ಣಗೊಂಡಿದೆ?

ಗೃಹಸಾಲದ ಇಎಂಐ ಬಡ್ಡಿ ಹಾಗೂ ಸಾಲದ ಮೊತ್ತ ಎರಡನ್ನೂ ಒಳಗೊಂಡಿರುತ್ತದೆ. ಸಾಲದ ಅವಧಿಯ ಆರಂಭದಲ್ಲಿ ಸಾಮಾನ್ಯವಾಗಿ ಇಎಂಐ ಅತಿ ಹೆಚ್ಚು ಬಡ್ಡಿ ಮೊತ್ತವನ್ನು ಹಾಗೂ ಅವಧಿಯ ಕೊನೆಯಲ್ಲಿ ಹೆಚ್ಚು ಬಾಕಿ ಮೊತ್ತವನ್ನು ಒಳಗೊಂಡಿರುತ್ತದೆ. ಹೀಗಾಗಿ ಸಾಲ ಪಡೆದ ಆರಂಭಿಕ ದಿನಗಳಲ್ಲಿ ಕಡಿಮೆ ಬಡ್ಡಿದರದ ಸಾಲ ಸಂಸ್ಥೆಗೆ ವರ್ಗಾವಣೆಯಾಗುವುದರಿಂದ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಉಳಿಸಲು ಸಾಧ್ಯ. ಇಂಥ ಸಂದರ್ಭಗಳಲ್ಲಿ ಬಜಾಜ್ ಫಿನಸರ್ವ್ ನಂಥ ಹಣಕಾಸು ಸಂಸ್ಥೆಗೆ ಸಾಲ ವರ್ಗಾಯಿಸುವುದು ನಿಮಗೆ ಅತ್ಯಂತ ಲಾಭದಾಯಕವಾಗಿದೆ. ಬಜಾಜ ಫಿನಸರ್ವ್ ನಿಮಗೆ ಪೂರ್ವ ಪಾವತಿ ಶುಲ್ಕ ಹಾಗೂ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಖಾತೆ ಬಂದ್ ಮಾಡುವ ಸೌಲಭ್ಯಗಳನ್ನು ನೀಡುತ್ತಿದೆ. ಅಂದರೆ ಈ ಸೌಲಭ್ಯವನ್ನು ಬಳಸಿಕೊಂಡು ನೀವು ಸಾಲದ ಮೊತ್ತದ ಒಂದು ಭಾಗವನ್ನು ತೀರಿಸಿ ನಿಮ್ಮ ಇಎಂಐ ಮೊತ್ತವನ್ನು ಕಡಿಮೆ ಮಾಡಿಕೊಳ್ಳಬಹುದು.

English summary
Switching a Home Loan to Get a Better Rate? Evaluate These 5 Points First. You can get some of the lowest home loan interest rates in the country by availing of a Home Loan from Bajaj Finserv.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X