ಪುಲ್ವಾಮಾ ದಾಳಿಯಲ್ಲಿ RDX ಬಳಸಲಾಗಿಲ್ಲ: ಪ್ರಾಥಮಿಕ ತನಿಖೆ

ಜಮ್ಮು, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರದಾಳಿಯಲ್ಲಿ ಅಪಾಯಕಾರಿ ಸ್ಫೋಟಕವಾದ RDK ಅನ್ನು ಬಳಸಲಾಗಿಲ್ಲ ಎಂದು ತನಿಖೆ ತಿಳಿಸಿದೆ.

ಘಟನೆ ಕುರಿತು ನಡೆದ ಪ್ರಾಥಮಿಕ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

RDX not used in Pulwama attack, says Preliminary probe

ಗುರುವಾರ ಸಂಜೆ ನಡೆದ ದಾಳಿಯ ನಂತರ ಸ್ಥಳದಲ್ಲಿ ಸ್ಫೋಟಕಗಳ ಮಾದರಿಯನ್ನು ಸಂಗ್ರಹಿಸಿದ್ದ ರಾಷ್ಟ್ರೀಯ ತನಿಖಾ ದಳದ ತಂಡ ಫಾರೆನ್ಸಿಕ್ ತಜ್ಞರ ಮೂಲಕ ಅವುಗಳ ತನಿಖೆ ನಡೆಸಿದೆ. ಇದರಿಂದಾಗಿ ಈ ದಾಳಿಯಲ್ಲಿ ಆರ್ ಡಿಎಕ್ಸ್ ಅನ್ನು ಬಳಸಲಾಗಿಲ್ಲ ಎಂಬುದು ದೃಢವಾಗಿದೆ.

ಸ್ಥಳೀಯವಾಗಿಯೇ ಖರೀದಿಸಲಾದ ಕೆಲವು ಸ್ಫೋಟಕಗಳನ್ನು ಈ ಘಟನೆಯಲ್ಲಿ ಬಳಸಲಾಗಿದ್ದು, ಇವು ತಪಾಸಣಾಧಿಕಾರಿಗಳಿಗೂ ಅನುಮಾನ ಬಾರದಂಥವಾಗಿದ್ದಿರಬಹುದು ಎನ್ನಲಾಗಿದೆ.

ಅದೂ ಅಲ್ಲದೆ, ಆತ್ಮಾಹುತಿ ದಾಳಿಕೋರ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಆದಿಲ್ ಅಹ್ಮದ್ ದಾರ್ ನ ಶವದ ಮರಣೋತ್ತರ ಪರೀಕ್ಷಿಯನ್ನೂ ಮಾಡಲಾಗಿದ್ದು, ಸ್ಫೋಟಕದ ಮಾದರಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+