ವಿಡಿಯೋ: ಪುಲ್ವಾಮಾ ಘಟನೆ ನೆನೆದು ಭಾವುಕರಾಗಿ ಅತ್ತ ಯೋಗಿ ಆದಿತ್ಯನಾಥ್
ಜಮ್ಮು, ಫೆಬ್ರವರಿ 23: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾವುಕರಾಗಿ ಅತ್ತ ಘಟನೆ ಶುಕ್ರವಾರ ನಡೆದಿದೆ.
ಭಯೋತ್ಪಾದನೆಯ ದಮನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವೆಲ್ಲ ಕ್ರಮ ಕೈಗೊಂಡಿದೆ ಎಂದು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಭಾವುಕರಾದರು.
ಅವರು ಭಾವುಕರಾಗಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
#WATCH CM Yogi Adityanath answers a student's question on #PulwamaTerrorAttack pic.twitter.com/HEAdz1cN07
— ANI UP (@ANINewsUP) February 22, 2019
ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, "ನರೇಂದ್ರ ಮೋದಿ ಅವರ ಸರ್ಕಾರ ಭಯೋತ್ಪಾದನೆಯ ದಮನಕ್ಕೆ ಸಾಧ್ಯವಿರುವ ಎಲ್ಲಾ ಕಾರ್ಯಗಳನ್ನೂ ಮಾಡುತ್ತಿದೆ. ಕಾಶ್ಮೀರದಲ್ಲಿ ಏನಾಗುತ್ತಿದೆ ಗೊತ್ತೆ? ಆರುವ ಸಮಯದಲ್ಲಿ ದೀಪ ಜೋರಾಗಿ ಉರಿದಂತೆ, ಅಲ್ಲೂ ಉಗ್ರರು ಸಾಯುವ ಮುನ್ನ ಉರಿಯುತ್ತಿದ್ದಾರೆ. ಭಯೋತ್ಪಾದನೆ ಸದ್ಯವೇ ಕೊನೆಯಾಗಲಿದೆ. ನರೇಂದ್ರ ಮೋದಿ ಸರ್ಕಾರ ಅದಕ್ಕೆ ಕಂಕಣಬದ್ಧವಾಗಿದೆ" ಎಂದರು.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು. ಈ ದಾಳಿಯನ್ನು ತಾನೇ ನಡೆಸಿದ್ದಾಗಿ ಜೈಷ್ ಇ ಮೊಹಮ್ಮದ್ ಉಗ್ರದಂಘಟನೆ ಹೇಳಿಕೊಂಡಿತ್ತು.












Click it and Unblock the Notifications