ಯೋಧನ ಶವ ಪೆಟ್ಟಿಗೆಗೆ ಹೆಗಲು ನೀಡಿದ ರಾಜನಾಥ್ ಸಿಂಗ್: ವಿಡಿಯೋ

Recommended Video

      Pulwama : ಹುತಾತ್ಮರಾದ ಯೋಧರ ಶವಪೆಟ್ಟಿಗೆಗೆ ಹೆಗಲಾದ ಗೃಹ ಸಚಿವ ರಾಜನಾಥ್ ಸಿಂಗ್ | Oneindia Kannada

      ಶ್ರೀನಗರ, ಫೆಬ್ರವರಿ 15: ಭಯೋತ್ಪಾದನಾ ದಾಳಿ ನಡೆದ ಪುಲ್ವಾಮಾ ಜಿಲ್ಲೆಗೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ ಗೃಹಸಚಿವ ರಾಜನಾಥ್ ಸಿಂಗ್, ಯೋಧರೊಬ್ಬರ ಶವಕ್ಕೆ ಹೆಗಲು ನೀಡಿದರು.

      ಬುದ್ಗಾಮ್‌ಗೆ ಭೇಟಿ ಕೊಟ್ಟ ರಾಜನಾಥ್ ಸಿಂಗ್, ಉಗ್ರರ ದಾಳಿಯಲ್ಲಿ ಛಿದ್ರಗೊಂಡಿದ್ದ ಸಿಆರ್‌ಪಿಎಫ್ ಯೋಧರೊಬ್ಬರ ದೇಹದ ತುಣುಕುಗಳನ್ನು ಇರಿಸಿದ ಶವಪೆಟ್ಟಿಗೆಯನ್ನು ಹೊತ್ತುಕೊಂಡು ಸ್ವಲ್ಪ ದೂರ ನಡೆದರು. ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಕೂಡ ಪೆಟ್ಟಿಗೆಯ ಇನ್ನೊಂದು ಭಾಗದಲ್ಲಿ ಹೆಗಲು ನೀಡಿದರು.

      ಪುಲ್ವಾಮಾ ಭೀಕರ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಗೃಹಸಚಿವ ರಾಜನಾಥ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಸೇನೆಯ ಉತ್ತರ ಕಮಾಂಡರ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅಂತಿಮ ನಮನ ಸಲ್ಲಿಸಿದರು.

      ಪಾಕಿಸ್ತಾನ ಪ್ರಾಯೋಜಕತ್ವದ ಜೈಶ್ ಎ ಮೊಹಮ್ಮದ್ ಸಂಘಟನೆ ಈ ದಾಳಿ ನಡೆಸಿದ್ದು, ಇದಕ್ಕೆ ಸರಿಯಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

      pulwama suicide bomber attack union minister Rajnath Singh lend a shoulder to mortal remains of crpf soldier

      ಮುಂದಿನ ಸೇನಾ ಕಾರ್ಯಚಟುವಟಿಕೆಗಳ ಬಗ್ಗೆ ಅವರು ಅಲ್ಲಿನ ಹಿರಿಯ ಭದ್ರತಾ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಪರಾಮರ್ಶನ ಸಭೆ ನಡೆಸಿದರು.

      ಉಗ್ರರ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳಲು ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡುವ ಅವಕಾಶವನ್ನು ಸೇನಾ ಪಡೆಗಳಿಗೇ ಬಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

      ತನ್ನ ದೈನಂದಿನ ಖರ್ಚು ತುಂಬಿಸಿಕೊಳ್ಳಲು ಭಿಕ್ಷಾಪಾತ್ರೆ ಹಿಡಿದು ವಿವಿಧ ದೇಶಗಳಿಗೆ ಹೊರಡುವ ಸ್ಥಿತಿಯಲ್ಲಿರುವ ನೆರೆಯ ದೇಶವು ತನ್ನ ಹತಾಶೆಯ ಉತ್ತುಂಗದಲ್ಲಿ ಈ ಕೃತ್ಯ ಎಸಗಿದೆ ಎಂದು ಪಾಕಿಸ್ತಾನದ ಕುರಿತು ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+