ವಿಡಿಯೋ: 'ಗಲ್ಲಿ ಬಾಯ್'ನಂತೆ Rapper ಆದ ಪೊಲೀಸ್ ಕಾನ್ಸ್ ಟೇಬಲ್

ಶ್ರೀನಗರ, ಮಾರ್ಚ್ 9: ಕರ್ನಾಟಕದ ಪೊಲೀಸ್ ಕಾನ್ಸ್ ಟೇಬಲ್ ಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಡಿನ ಮೂಲಕ ಜನಪ್ರಿಯತೆ ಪಡೆದು, ಈಗ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಪೊಲೀಸ್ ಪೇದೆಯೊಬ್ಬರು Rapper ಆಗಿದ್ದಾರೆ.

ಖಾಕಿ ಹಾಕಿ ಕೆಲಸಕ್ಕೆ ಹಾಜರ್ ಆಗುವ ಈ ಪೇದೆ ಅದೇ ರೀತಿ ಹಾಡು ಹಾಡುವುದರಲ್ಲಿಯೂ ಎತ್ತಿದ ಕೈ. ಮುಕೇಶ್ ಸಿಂಗ್ ಎನ್ನುವವರು ಪೇದೆಯ ಹಾಡಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಪೇದೆಗೆ ಜನಪ್ರಿಯತೆ ತಂದುಕೊಡುತ್ತಿದೆ.

ಈ ಪೊಲೀಸ್ ಪೇದೆ ಹೆಸರು ತಿಳಿದಿಲ್ಲ. ಆದರೆ, ಅವರ ಟ್ವಿಟ್ಟರ್ ಖಾತೆಯಲ್ಲಿ ಸೂಪರ್ ಬಾಯ್ ಜಿ ಒನ್ ಎಂದು ಹೆಸರಿದೆ. ತಮ್ಮ ವಿಡಿಯೋ ಹಂಚಿಕೊಂಡಿದ್ದಕ್ಕೆ ಅವರು ಮುಕೇಶ್‌ಗೆ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋಗೆ ಅನೇಕರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

Police Constable Sings Rap Song

ಪೊಲೀಸ್ ಪೇದೆ ತನ್ನ ಜೀವನದ ಅನುಭವವನ್ನೇ ಸಾಹಿತ್ಯವಾಗಿ ಮಾಡಿಕೊಂಡಿದ್ದಾರೆ. ತಾನು ಪಟ್ಟ ಕಷ್ಟ, ತಾನು ಕಂಡ ಜೀವನ, ಮುಂದಿನ ಕನಸು ಈ ವಿಷಯಗಳನ್ನು ಇಟ್ಟುಕೊಂಡು ಹಾಡು ಮಾಡಿದ್ದಾರೆ. ತುಂಬ ಚೆನ್ನಾಗಿ ಹಾಡಿದ್ದಾರೆ.

ಪೊಲೀಸ್ ಪೇದೆಯ ವಿಡಿಯೋ ನೋಡಿದರೆ, 'ಗಲ್ಲಿ ಬಾಯ್' ಸಿನಿಮಾ ನೆನಪಿಗೆ ಬರುತ್ತದೆ. ಆ ಸಿನಿಮಾದಲ್ಲಿಯೂ ಒಬ್ಬ ಸಾಮಾನ್ಯ ಹುಡುಗ Rapper ಆದ ಕಥೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+