ಒಮರ್ ಅಬ್ದುಲ್ಲಾ ಇತ್ತೀಚಿನ ಚಿತ್ರ ಹೇಳುತ್ತಿದೆ ಕಾಶ್ಮೀರ ನಾಯಕರ ಕತೆ

ಶ್ರೀನಗರ, ಜನವರಿ 25: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ-ಮಾನ ರದ್ದು ಮಾಡುವ ಸಮಯ ಜಮ್ಮು-ಕಾಶ್ಮೀರದ ನೂರಾರು ನಾಯಕರನ್ನು ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿರಿಸಿತ್ತು.

ಕಳೆದ ಆಗಸ್ಟ್ ತಿಂಗಳಿನಿಂದಲೂ ಜಮ್ಮು ಮತ್ತು ಕಾಶ್ಮೀರದ ಹಲವು ನಾಯಕರು, ಮಾಜಿ ಸಿಎಂಗಳು ಬಾಹ್ಯ ಪ್ರಪಂಚದ ಸಂಪರ್ಕವಿಲ್ಲದೆ ಗೃಹ ಬಂಧನದಲ್ಲಿದ್ದಾರೆ. ಅವರಿಗೆ ಫೋನ್, ಇಂಟರ್ನೆಟ್ ಸಂಪರ್ಕಗಳು ಸಹ ಇಲ್ಲ, ಹೊರಗಿನವರ ಭೇಟಿ ಅಸಾಧ್ಯವಾಗಿದೆ.

ಹೀಗೆ ಬಂಧನದಲ್ಲಿರುವವರಲ್ಲಿ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಸಹ ಒಬ್ಬರು, ಐದು ತಿಂಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿರುವ ಅವರ ಇತ್ತೀಚಿನ ಭಾವಚಿತ್ರವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

Omar Abdullahs Recent Photo Viral In Social Media

ಯಾವಾಗಲೂ ಕ್ಲೀನ್ ಶೇವ್ ಮಾಡಿಕೊಂಡು ಜಂಟಲ್‌ಮನ್‌ ನಂತೆ ಇರುತ್ತಿದ್ದ ಒಮರ್ ಅಬ್ದುಲ್ಲಾ ಗಡ್ಡ ಬಿಟ್ಟು ಗುರುತೇ ಸಿಗದಂತೆ ಕಾಣುತ್ತಿದ್ದಾರೆ. ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಒಮರ್ ಅಬ್ದುಲ್ಲಾ ಅವರ ಕುಟುಂಬದವರು ನೀಡಿರುವ ಮಾಹಿತಿಯಂತೆ, ಒಮರ್ ಅಬ್ದುಲ್ಲಾ ಗೃಹ ಬಂಧನದಿಂದ ಬಿಡುಗಡೆ ಆಗುವವರೆಗೂ ಗಡ್ಡ ತೆಗೆಯುವುದಿಲ್ಲವಂತೆ. ಈ ಹಿಂದೆಯೂ ಅವರ ಚಿತ್ರವೊಂದು ಬಿಡುಗಡೆ ಆಗಿತ್ತು, ಅದರಲ್ಲಿ ಸ್ವಲ್ಪ ಗಡ್ಡ ಕಾಣುತ್ತಿತ್ತು. ಈಗದು ದೊಡ್ಡದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+