ಕಾಶ್ಮೀರದಲ್ಲಿ ಉಗ್ರರಿಂದ ಮಾಜಿ ಪೊಲೀಸ್ ಅಧಿಕಾರಿಯ ಅಪಹರಣ, ಹತ್ಯೆ
ಶ್ರೀನಗರ, ನವೆಂಬರ್ 24: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಮಾಜಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರ ಬುಲೆಟ್ ನಿಂದ ಆವೃತವಾದ ಮೃತದೇಹ ಪತ್ತೆಯಾಗಿದೆ. ಅವರನ್ನು ಉಗ್ರರು ಅಪಹರಿಸಿ ಕೊಂದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಮಾಜಿ ಎಸ್ ಪಿಒ ಬಶ್ರತ್ ಅಹ್ಮದ್ ವಾಗೆ ಅವರನ್ನು ಅಪಹರಿಸಿದ ಒಂದು ಗಂಟೆಯ ನಂತರ ಅವರ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ನಡೆದ ಈ ಘಟನೆಯಲ್ಲಿ ಶಂಕಿತ ಉಗ್ರರು ಜಾಹಿದ್ ಅಹ್ಮದ್ ವಾಗೆ ಮತ್ತು ರಿಯಾಜ್ ಅಹ್ಮದ್ ವಾಗೆ ಎಂಬ ಇನ್ನಿಬ್ಬರನ್ನು ಅಪಹರಿಸಿದ್ದರು. ಆದರೆ ಅವರನ್ನು ಬಿಡುಗಡೆಗೊಳಿಸಿದ್ದು, ಬಶ್ರತ್ ಅವರನ್ನು ಹತ್ಯೆ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆಯಷ್ಟೇ ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸೆಕಿಪೊರಾ ಎಂಬ ಹಳ್ಳಿಯಲ್ಲಿ ಅಡಗಿದ್ದ ಆರು ಉಗ್ರರನ್ನು ಎನ್ ಕೌಂಟರ್ ದಾಳಿಯಲ್ಲಿ ಹತ್ಯೆಗೈಯ್ಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.
ಅದಕ್ಕೂ ಮುನ್ನ ಶೋಪಿಯಾನ್ ನಲ್ಲಿ ನಾಲ್ವರು ಉಗ್ರರನ್ನು ಎನ್ ಕೌಂಟರ್ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಓರ್ವ ಸೇನಾ ಸಿಬ್ಬಂದಿಯೂ ಹುತಾತ್ಮರಾಗಿದ್ದರು.












Click it and Unblock the Notifications