ಜಮ್ಮು-ಕಾಶ್ಮೀರದಲ್ಲಿ 6 ಉಗ್ರರನ್ನು ಬಲಿಹಾಕಿದ ಭಾರತೀಯ ಸೇನೆ
ಶ್ರೀನಗರ, ಡಿಸೆಂಬರ್ 22: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ 6 ಉಗ್ರರನ್ನು ಬಲಿಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಕಣಿವೆ ರಾಜ್ಯದ ಪುಲ್ವಾಮಾದ ಟ್ರಾಲ್ ಎಂಬಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಶನಿವಾರ ಬೆಳಗ್ಗಿನ ಜಾವದಿಂದಲೂ ಗುಂಡಿನ ಚಕಮಕಿ ನಡೆಯುತ್ತಿತ್ತು. ಉಗ್ರರು ಟ್ರಾಲ್ ನಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ ದಾಳಿ ನಡೆಸಿತು.
ಉಗ್ರರನ್ನು ಬಲಿಹಾಕಿದ ನಂತರ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿ.15 ರಂದು ಖಾರ್ಪೊರಾ ಸಿರ್ನೂ ಎಂಬ ಹಳ್ಳಿಯಲ್ಲಿ ಅಡಗಿ ಕುಳಿತಿದ್ದ ಉಗ್ರರ ಮೇಲೆ ದಾಳಿ ನಡೆಸಿದ್ದ ಬಾರತೀಯ ಸೇನೆ 3 ಉಗ್ರರನ್ನು ಹತ್ಯೆಗೈದಿತ್ತು. ಈ ಘಟನೆಯಲ್ಲಿ 8 ನಾಗರಿಕರೂ ಮೃತರಾಗಿದ್ದರು.
ಅದಕ್ಕೂ ಮುನ್ನ ಡಿ.13 ರಂದು ಸೇನಾ ನೆಲೆಯ ಮೇಲೆದಾಳಿ ಮಾಡಿ ಇಬ್ಬರು ಯೋಧರನ್ನು ಹತ್ಯೆಗೈದಿದ್ದ ಇಬ್ಬರು ಉಗ್ರರನ್ನು ಅಂದೇ ರಾತ್ರಿ ಹೊಡೆದುರುಳಿಸಲಾಗಿತ್ತು.












Click it and Unblock the Notifications