Yuvraj Singh: ಧೋನಿಯನ್ನು ಯೋಗರಾಜ್ ಸಿಂಗ್ ನಿಂದಿಸಿದ ಬೆನ್ನಲ್ಲೇ ಯುವರಾಜ್ ಹಳೆ ವಿಡಿಯೋ ವೈರಲ್!
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿಯಿಂದಾಗಿ ನನ್ನ ಮಗನಿಗೆ ಭಾರತ ತಂಡದಲ್ಲಿ ಅವಕಾಶಗಳು ಸಿಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಧೋನಿ ಮಾತ್ರವಲ್ಲದ ಈ ಬಾರಿ ಅವರು ಕಪಿಲ್ ದೇವ್ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಯುವರಾಜ್ ಸಿಂಗ್ ತಮ್ಮ ತಂದೆಯ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಯುವರಾಜ್ ಸಿಂಗ್ ತಮ್ಮ ತಂದೆಯ ಮಾನಸಿಕ ಆರೋಗ್ಯ ಸರಿಯಿಲ್ಲ ಎಂದಿದ್ದಾರೆ. ಹಳೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಯುವರಾಜ್ ಸಿಂಗ್ 'ನನ್ನ ತಂದೆಗೆ ಮಾನಸಿಕ ಸಮಸ್ಯೆಗಳಿವೆ' ಎಂದು ಹಳಿದ್ದಾರೆ. ಎಂಎಸ್ ಧೋನಿ ವಿರುದ್ಧ ಅಪ್ಪ ಯೋಗರಾಜ್ ಸಿಂಗ್ ವಾಗ್ದಾಳಿದ ನಂತರ ಹಳೆಯ ವೀಡಿಯೊ ವೈರಲ್ ಆಗಿದೆ

ಯೋಗರಾಜ್ ಸಿಂಗ್ ಹೇಳಿದ್ದೇನು?
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಯೋಗರಾಜ್ ಸಿಂಗ್ ಯಾವಾಗಲೂ ಕಿಡಿಕಾರುತ್ತಲೇ ಬಂದಿದ್ದಾರೆ. ಇದೀಗ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಧೋನಿ ಭಾರತ ತಂಡಕ್ಕೆ ನಾಯಕರಾಗಿದ್ದ ಸಂದರ್ಭದಲ್ಲಿ ತಮ್ಮ ಮಗ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ 4-5 ವರ್ಷಗಳನ್ನು ಕಳೆದುಕೊಂಡರು ಎಂದು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ರಣವೀರ್ ಅಲ್ಲಾಬ್ಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಯುವರಾಜ್ ಸಿಂಗ್, "ನನ್ನ ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರನ್ನು ಒಪ್ಪಿಕೊಳ್ಳುವುದಿಲ್ಲ, ಇದು ಪರಿಹರಿಸಬೇಕಾದ ಸಮಸ್ಯೆ, ಆದರೆ ನನ್ನ ತಂದೆ ತಮ್ಮ ಸಮಸ್ಯೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ" ಎಂದಿದ್ದಾರೆ.
My Father has mental issues : Yuvraj #MSDhoni #YuvrajSingh #YograjSingh pic.twitter.com/zTs3i3QVIV
— 𝐑𝐨𝐬𝐡𝐚𝐧 𝐘𝐚𝐝𝐚𝐯 (@roshan0777_) September 3, 2024
ಧೋನಿಯನ್ನು ಕ್ಷಮಿಸಲ್ಲ ಎಂದ ಯೋಗರಾಜ್
ಧೋನಿ ವಿರುದ್ಧ ಯೋಗರಾಜ್ ಸಿಂಗ್ ಮತ್ತೆ ಆಕ್ರೋಶ ಹೊರಹಾಕಿದ್ದು ಸಖತ್ ವೈರಲ್ ಆಗಿದೆ. ಯುವರಾಜ್ ಸಿಂಗ್ ಎರಡು ವರ್ಷಗಳ ಕಾಲ ಅವಕಾಶ ಸಿಗದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು ಎಂದು ಅವರು ಹೇಳಿದ್ದಾರೆ.
ನಾನು ಎಂಎಸ್ ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ, ಆತ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲಿ, ಅವನು ದೊಡ್ಡ ಕ್ರಿಕೆಟಿಗ, ಆದರೆ ನನ್ನ ಮಗನ ವಿರುದ್ಧ ಏನು ಮಾಡಿದ್ದಾನೆ, ಎಲ್ಲವೂ ಈಗ ಹೊರಬರುತ್ತಿದೆ, ಅದನ್ನು ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನನ್ನ ಮಗ ಇನ್ನೂ ನಾಲ್ಕೈದು ವರ್ಷ ಕ್ರಿಕೆಟ್ ಆಡಬಹುದಿತ್ತು, ಆದರೆ ಎಂಎಸ್ ಧೋನಿ ಅದನ್ನು ನಾಶಪಡಿಸಿದ್ದಾನೆ ಎಂದು ಯೋಗರಾಜ್ ಸಿಂಗ್ ಸ್ವಿಚ್ ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಭಾರತ ರತ್ನ ನೀಡುವಂತೆ ಒತ್ತಾಯ
ಕ್ಯಾನ್ಸರ್ ನಡುವೆಯೂ 2011ರ ಏಕದಿನ ವಿಶ್ವಕಪ್‌ನಲ್ಲಿ ಕ್ಯಾನ್ಸರ್ ನಡುವೆಯೂ ಭಾರತಕ್ಕಾಗಿ ಆಡಿ, ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ತನ್ನ ಮಗ ಯುವರಾಜ್ ಸಿಂಗ್‌ಗೆ ಭಾರತ ರತ್ನ ನೀಡಬೇಕು ಎಂದು ಯೋಗರಾಜ್ ಸಿಂಗ್ ಒತ್ತಾಯಿಸಿದ್ದಾರೆ.












Click it and Unblock the Notifications