Yuvraj Singh: ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಯುವರಾಜ್ ಸಿಂಗ್

Yuvraj Singh: ಐಪಿಎಲ್‌ 2027ಕ್ಕೆ ಮುನ್ನ ಕೆಲವು ಫ್ರಾಂಚೈಸಿಗಳು ಈಗಾಗಲೇ ಹೊಸ ಕೋಚ್‌ಗಳನ್ನು ನೇಮಕ ಮಾಡಿಕೊಂಡಿವೆ. ಇದೀಗ ಎಸ್‌ಆರ್‌ಎಚ್‌ನಲ್ಲಿರುವ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಗುರು ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಕೋಚ್ ಹುದ್ದೆ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟೀಮ್ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಭಾರತದ ಈ ಮಾಜಿ ತಾರೆಗೆ ಸಿಗುತ್ತಿರುವ ಮೊದಲ ಅಧಿಕೃತ ತರಬೇತುದಾರ ಹುದ್ದೆ ಇದಾಗಿದೆ.

Yuvraj Singh Appointed Delhi Capitals Assistant and Batting Coach for Indian Premier League 2027

ಡೆಲ್ಲಿ ಕ್ಯಾಪಿಟಲ್‌ನಲ್ಲಿ ಯುವಿಗೆ ಕೋಚ್‌ ಹುದ್ದೆ

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮಂಗಳವಾರ (ಅಕ್ಟೋಬರ್ 13) ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ವಿಡಿಯೋದಲ್ಲಿ ತಂಡದ ನೂತನ ಮುಖ್ಯ ಕೋಚ್ ಸೌರವ್ ಗಂಗೂಲಿ ಅವರಯ ಸಹ ಕೂಡ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಹೊಸ ಜವಾಬ್ದಾರಿ ಕುರಿತು ಯುವರಾಜ್ ಸಿಂಗ್ ಹೇಳಿದ್ದೇನು?

ಹೊಸ ಹುದ್ದೆಯ ಕುರಿತು ಸಂತೋಷ ವ್ಯಕ್ತಪಡಿಸಿರುವ ಯುವರಾಜ್ ಸಿಂಗ್ ಅವರು, 'ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ನನ್ನ ಈ ಹೊಸ ಅಧ್ಯಾಯವನ್ನು ಆರಂಭಿಸಲು ಉತ್ಸುಕನಾಗಿದ್ದೇನೆ. ಈ ಫ್ರಾಂಚೈಸಿ ಮತ್ತು ಇದರ ಮಾಲೀಕರೊಂದಿಗೆ ನನಗೆ ಹಳೆಯ ಒಡನಾಟವಿದೆ. ಈ ಹಿಂದೆ ಆಟಗಾರನಾಗಿ ಪ್ರತಿನಿಧಿಸಿದ್ದ ತಂಡಕ್ಕೆ ಈಗ ತರಬೇತುದಾರನಾಗಿ ಮರಳಿರುವುದು ವಿಶೇಷ ಅನುಭವ. ಸೌರವ್ ಗಂಗೂಲಿ ಅವರೊಂದಿಗೆ ತರಬೇತಿ ವಿಭಾಗದಲ್ಲಿ ಕೆಲಸ ಮಾಡಲು ಕಾಯುತ್ತಿದ್ದೇನೆ. ಈ ಕರ್ಯವ್ಯ ನಿರ್ವಹಿಸುವುದು ನನ್ನ ಆಸಕ್ತಿಯ ವಿಷಯವಾಗಿದ್ದು, ತಂಡಕ್ಕೆ ಮಾರ್ಗದರ್ಶನ ನೀಡಿ ಯಶಸ್ಸಿಗೆ ನೆರವಾಗುವುದು ನನ್ನ ಗುರಿ,' ಎಂದು ಹೇಳಿದ್ದಾರೆ.

ಸೌರವ್ ಗಂಗೂಲಿ ವಿಡಿಯೋದಲ್ಲಿ ಯುವರಾಜ್ ಅವರನ್ನು ಶ್ಲಾಘಿಸುತ್ತಾ, 'ಗೆಲುವಿನ ಹಸಿವು, ನಾಯಕತ್ವದ ಗುಣ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಅವರು ತಂಡಕ್ಕೆ ದೊಡ್ಡ ಬಲ ತರಲಿದ್ದಾರೆ,' ಎಂದು ಹೇಳುವ ಮೂಲಕ ಸ್ವಾಗತಿಸಿದ್ದಾರೆ. ಇದು ಇವರಿಬ್ಬರ ನಡುವೆ ಎಂತಹ ಉತ್ತಮ ಬಾಂಧವ್ಯ ಇದೆ ಎಂಬುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌, ಐಪಿಎಲ್‌ನಲ್ಲಿ ಯುವಿ ಸಾಧನೆ

2000ರಿಂದ 2017 ರವರೆಗೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಯುವರಾಜ್ ಸಿಂಗ್, ದೇಶಕ್ಕಾಗಿ 304 ಏಕದಿನ (ODI), 40 ಟೆಸ್ಟ್ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ಗಳಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಯುವರಾಜ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್ ಟೂರ್ನಿಯಲ್ಲಿಯೂ ದೀರ್ಘ ಅನುಭವ ಹೊಂದಿರುವ ಅವರು ಒಟ್ಟು 132 ಪಂದ್ಯಗಳನ್ನು ಆಡಿ, 2,750 ರನ್ ಹಾಗೂ 36 ವಿಕೆಟ್‌ಗಳನ್ನು ಪಡೆದಿದ್ದಾರೆ. 2015ರಲ್ಲಿ ಡಿಸಿ (ಆಗಿನ ಡೆಲ್ಲಿ ಡೇರ್‌ಡೆವಿಲ್ಸ್) ತಂಡವು ಯುವರಾಜ್ ಅವರನ್ನು 16 ಕೋಟಿ ರೂಪಾಯಿಗೆ ಖರೀದಿಸಿತ್ತು, ಇದು ಆಗಿನ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತವಾಗಿತ್ತು. ಇದೀಗ ಸುಮಾರು 11 ವರ್ಷಗಳ ನಂತರ ಅವರು ಮತ್ತೆ ಅದೇ ಫ್ರಾಂಚೈಸಿಗೆ ಕೋಚ್ ಆಗಿ ಮರಳಿರುವುದು ವಿಶೇಷವಾಗಿದೆ.

ಈವರೆಗೆ ಐಪಿಎಲ್ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ, ಸೌರವ್ ಗಂಗೂಲಿ ಮತ್ತು ಯುವರಾಜ್ ಅವರ ಅನುಭವ ಹಾಗೂ ಮಾರ್ಗದರ್ಶನ ಮುಂಬರುವ ಋತುವಿನಲ್ಲಿ ಹೊಸ ಚೈತನ್ಯ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಇವರ ಮಾರ್ಗದರ್ಶನ ಹೇಗಿರಲಿದೆ ಎಂದು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+