Year Ender 2025: ಈ ವರ್ಷ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸಾಧನೆಗಳು
Year Ender 2025: ಕೆಲವೇ ದಿನಗಳಲ್ಲಿ 2026ನೇ ವರ್ಷ ಎಂಟ್ರಿ ಕೊಡಲಿದೆ. ಆದರೂ 2025ರಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮೆಲುಕು ಹಾಕಲೇಬೇಕಾಗುತ್ತದೆ. ಹಾಗೆಯೇ ಈ ವರ್ಷ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸಾಧನೆಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರತಿ ವರ್ಷನೂ ಸಹ ಕೆಲವು ಘಟನೆಗಳು ದೊಟ್ಟ ಮಟ್ಟದಲ್ಲಿ ಸದ್ದುಮಾಡುತ್ತಲಿರುತ್ತವೆ. ಹಾಗೆಯೇ ಈ ಬಾರಿ ಕ್ರೀಡಾ ಕ್ಷೇತ್ರದಲ್ಲಿ ಅದರಲ್ಲೂ ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ಏನು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ಮಹಿಳಾ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಕ್ರಿಕೆಟ್, ಅಂಧ ಮಹಿಳೆಯರ ವಿಶ್ವಕಪ್ ಗಮನ ಸೆಳೆದಿವೆ.

ಚಾಂಪಿಯನ್ಸ್ ಟ್ರೋಫಿ ಗೆಲುವು: ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿತು. ಈ ವೇಳೆ ಟೀಂ ಇಂಡಿಯಾ ಒಂದೇ ಒಂದು ಪಂದ್ಯ ಸೋಲದೇ ಹೊಸ ಇತಿಹಾಸ ನಿರ್ಮಾಣ ಮಾಡಿದೆ.
ಏಷ್ಯಾಕಪ್ ಗೆಲುವು: ಪೆಹಲ್ಗಾಂನಲ್ಲಿ ಪಾಕ್ ಉಗ್ರರ ದಾಳಿ ಹಿನ್ನೆಲೆ ಅವರ ವಿರುದ್ಧ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿ ಆಡುವುದೇ ಬೇಡ ಎನ್ನುವ ಮಾತುಗಳು ಕೇಳಿಬಂದಿದ್ದವು. ಇವೆಲ್ಲ ಆಕ್ರೋಶಗಳ ನಡುವೆಯೂ ಭಾರತ ತಂಡ ಟೂರ್ನಿ ಆಡಿ ಫೈನಲ್‌ನಲ್ಲಿ ಬದ್ಧವೈರಿ ಪಾಕ್ ತಂಡವನ್ನು ಬಗ್ಗುಬಡಿದು ಗೆಲುವಿನ ನಗೆ ಬೀರಿತು. ಇದೇ ವೇಳೆ ನಡೆದ ಪ್ರಮುಖ ಘಟನೆಯೊಂದು ಇಡೀ ವಿಶ್ವದ ಗಮನವೂ ಸೆಳೆಯಿತು.
ಆದರೆ, ಟ್ರೋಫಿ ಮಾತ್ರ ಪಡೆಯಲಿಲ್ಲ. ಇದಕ್ಕೆ ಕಾರಣವೂ ಇದೆ. ಭಾರತಕ್ಕೆ ಪಾಕಿಸ್ತಾನದ ಗೃಹ ಸಚಿವ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ತಾನೇ ಟ್ರೊಫಿ ಕೊಡಬೇಕು ಎಂದು ಹಠ ಹಡಿದರು. ಆದರೆ, ನಮ್ಮ ಟೀಂ ಇಂಡಿಯಾ ಇವರ ಬಳಿ ಮಾತ್ರ ನಾವು ಟ್ರೋಫಿ ಸ್ವೀಕಾರ ಮಾಡುವುದಿಲ್ಲ ಎಂದು ಹಿಂದೆ ಸರಿದು. ಬರಿ ಕೈಯಲ್ಲೇ ಟ್ರೋಫಿ ಹಿಡಿದ ರೀತಯಲ್ಲಿ ಸಂಭ್ರಮಿಸಿ ಪಾಪಿ ಪಾಕ್‌ಗೆ ಉರಿಸಿದ ಘಟನೆ ನಡೆಯಿತು.
ಭಾರತೀಯರು ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ನಂತರ ನಖ್ವಿ ಅವರು ಟ್ರೋಫಿಯನ್ನೇ ಹೊತ್ತೊಯ್ದು ಅಪಹಾಸ್ಯಕ್ಕೆ ಒಳಗಾದರು. ಅಲ್ಲದೆ, ತಾವೇ ಗೆದ್ದಿದ್ದೇವೆ ಎನ್ನುವ ಪೋಸ್ಟರ್‌ಗಳನ್ನಯ ಹಾಕಿಕೊಂಡು ಪಾಕಿಸ್ತಾನ ತಂಡ ಅವಮಾನದ ಜ್ವಾಲೆಯಲ್ಲಿ ಬೆಂದುಹೋಯಿತು. ಈ ಘಟನೆ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈಗಲೂ ಕೂಡ ಟ್ರೋಫಿಯನ್ನು ಭಾರತಕ್ಕೆ ನೀಡದಿರುವುದು ಅಸಹ್ಯಕರ ಸಂಗತಿಯಾಗಿದೆ. ಇದು ಇಡೀ ವಿಶ್ವದ ಗಮನ ಸೆಳೆದಿದೆ.
ವಿಶ್ವಕಪ್ ಮುಡಿಗೇರಿಸಿಕೊಂಡ ಮಹಿಳಾ ತಂಡ: ಮಹಿಳಾ ಟೀಂ ಇಂಡಿಯಾವು ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ 52 ರನ್ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 47 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.
ಅಂಧ ಮಹಿಳೆಯರ ಸಾಧನೆ: ಕೊಲಂಬೊದಲ್ಲಿ ನಡೆದ ಅಂಧರ ಟಿ-20 ವಿಶ್ವಕಪ್‌ನಲ್ಲಿ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಫೈನಲ್‌ನಲ್ಲಿ ನೇಪಾಳವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ತಂಡದಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು. ತುಮಕೂರಿನ ದೀಪಿಕಾ ಟಿ.ಸಿ. (ನಾಯಕಿ), ಕಾವ್ಯ ಎನ್.ಆರ್, ಶಿವಮೊಗ್ಗದ ರಿಪ್ಪನ್‌ಪೇಟೆಯ ಕಾವ್ಯ ವಿ. ಅವರಿದ್ದರು. ಹೀಗೆ ಕ್ರಿಕೆಟ್‌ನಲ್ಲಿ ಭಾರತದ ಈ ಬಾರಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ.












Click it and Unblock the Notifications