ಮಳೆಯಲ್ಲಿ ಸಿಲುಕಿಕೊಂಡಿದ್ದ ಕುಸ್ತಿ ಪಟುಗಳು: ಒಲಿಂಪಿಕ್ಸ್‌ ಕೋಟಾ ಕನಸಿಗೆ ಪೆಟ್ಟು ಸಾಧ್ಯತೆ

ಭಾರತ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಪದಕದ ಬೇಟೆಯನ್ನು ನಡೆಸುವ ಇರಾದೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತ ತನ್ನ ಕುಸ್ತಿ ಪಟುಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ಈಗ ಬಂದಿರುವ ಸುದ್ದಿ ನಿಜಕ್ಕೂ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಬೇಸರ ತಂದಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾಗಿದ್ದ ದೀಪಕ್ ಪುನಿಯಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆಯನ್ನು ಚಿಗುರಿಸಿದ್ದರು. ಆದರೆ ಇವರ ಪದಕ ಗೆಲ್ಲುವ ಕನಸಿಗೆ ಪೆಟ್ಟು ಬಿದ್ದಿದೆ. ವರದಿಯ ಪ್ರಕಾರ, ಅವರು ಮತ್ತು ಸಹ ಕುಸ್ತಿಪಟು ಸುಜಿತ್ ಕಲ್ಕಲ್ ಶುಕ್ರವಾರ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲು ಅವಕಾಶ ಲಭಿಸಲಿಲ್ಲ.

Wrestlers stuck in rain Olympics quota dream likely to be hit

ಮಂಗಳವಾರದಿಂದ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಈ ಇಬ್ಬರು ಕುಸ್ತಿಪಟುಗಳು ಶುಕ್ರವಾರ ಬೆಳಗ್ಗೆ 8 ಗಂಟೆಯ ಮೇಲೆ, ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳ ಆತಿಥೇಯ ನಗರ ಬಿಷ್ಕೆಕ್ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಆ ಹೊತ್ತಿಗೆ, ಇವರಿಬ್ಬರು ಪ್ರತಿನಿಧಿಸುವ ತೂಕದ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಇದರಲ್ಲಿ ಕುಸ್ತಿಪಟುಗಳು ತಮ್ಮ ತೂಕವನ್ನು ನೋಂದಾಯಿಸಿಕೊಳ್ಳಬೇಕಾಗಿತ್ತು. ಮತ್ತು ಕುಸ್ತಿ ಪಟುಗಳು ಎಲ್ಲ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಸಾಬೀತು ಪಡಿಸಬೇಕಿತ್ತು.

ಅವಕಾಶ ನಿರಾಕರಣೆ

ಭಾರತೀಯ ಕುಸ್ತಿಪಟುಗಳು ಆಗಮಿಸಿದಾಗ, ಸಂಘಟಕರು ಅವರಿಗೆ ಅವಕಾಶ ನೀಡಲು ನಿರಾಕರಿಸಿದರು. ದುಬೈನಲ್ಲಿ ಪ್ರವಾಹದಿಂದಾಗಿ ಇದು ಸಂಭವಿಸಿದೆ ಎಂದು ಭಾರತೀಯ ಕುಸ್ತಿ ಪಟುಗಳು ಕೇಳಿ ಕೊಂಡರು. ಆದರೆ ಸಂಘಟಕರು ಇನ್ನೂ ಯಾವುದೇ ವಿನಾಯಿತಿ ನೀಡಿಲ್ಲ. ಪೂನಿಯಾ ಮತ್ತು ಕಲ್ಕಲ್ ಈಗ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇನ್ನೊಂದು ಅವಕಾಶವನ್ನು ಹೊಂದಿದ್ದಾರೆ.

ಕುಸ್ತಿಪಟುಗಳು ಕೋಚ್ ಕಮಲ್ ಮಾಲಿಕೋವ್ ಮತ್ತು ಫಿಸಿಯೋ ಶುಭಂ ಗುಪ್ತಾ ಅವರು ಮಂಗಳವಾರದಿಂದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆ ಮಲಗಿದ್ದ ಅವರು ಸರಿಯಾದ ಆಹಾರವೂ ಸಿಗದೆ ಒದ್ದಾಡಿದ್ದಾರೆ ಎಂದು ಕಲ್ಕಲ್ ಅವರ ತಂದೆ ದಯಾನಂದ್ ಅವರು ಹೇಳಿದ್ದಾರೆ.

ಭಾರತದ ಅರ್ಹತಾ ಅಭಿಯಾನ ಶುಕ್ರವಾರದಿಂದ ಆರಂಭವಾಗಲಿದೆ. ಇದರಲ್ಲಿ ಪುರುಷರ ಫ್ರೀಸ್ಟೈಲ್ ಪಂದ್ಯಗಳು ನಂತರ ನಡೆಯಲಿವೆ. ಪುನಿಯಾ ಅನುಪಸ್ಥಿತಿಯಲ್ಲಿ 57 ಕೆಜಿ ವಿಭಾಗದ ಯುವ ತಾರೆ ಅಮನ್ ಸೆಹ್ರಾವತ್ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.

ದಾಖಲೆಯ ಮಳೆ

ದುಬೈನಲ್ಲಿ ದಾಖಲೆಯ ಮಳೆ ಆಗುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿಯೇ ಭಾರತೀಯ ಕುಸ್ತಿಪಟುಗಳು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಯುಎಇ ಸರ್ಕಾರದ ಮಾಹಿತಿಯಂತೆ ಕಳೆದ 75 ವರ್ಷದಲ್ಲೇ ಗರಿಷ್ಠ ಮಳೆ ದಾಖಲಾಗಿದೆ.

ಭಾರತದ ಸ್ಟಾರ್‌ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ (50 ಕೆಜಿ), ರಿತಿಕಾ ಹೂಡಾ (76 ಕೆಜಿ), ಹಾಲಿ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಅಂಶು (57 ಕೆಜಿ), ಮಾನ್ಸಿ (62 ಕೆಜಿ) ಮತ್ತು ನಿಶಾ (68 ಕೆಜಿ) ಪ್ಯಾರಿಸ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+