ಡಬ್ಲ್ಯೂಪಿಎಲ್‌ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಮಹತ್ವದ ಸಲಹೆ..

WPL 2027 Auction: ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ಅಕ್ಟೋಬರ್ 28ರಂದು ನಡೆಯಲಿದೆ. ಇದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಟೀಮ್ ಇಂಡಿಯಾ ಕ್ರಿಕೆಟರ್ ಮಹತ್ವದ ಸಲಹೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟ್‌ಗಾರ್ತಿ ರೀಮಾ ಮಲ್ಹೋತ್ರಾ ಸಲಹೆ ನೀಡಿದ್ದಾರೆ. ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ಆರ್‌ಸಿಬಿ, ಈ ಹರಾಜಿನಲ್ಲಿ ಮುಖ್ಯವಾಗಿ ಭಾರತೀಯ ಬ್ಯಾಟರ್‌ಗಳು ಮತ್ತು ಆಲ್ ರೌಂಡರ್‌ಗಳ ಮೇಲೆ ಕಣ್ಣಿಡಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

WPL 2027 Auction Reema Malhotra Advises Royal Challengers Bengaluru to Fix Middle-Order Woes

ರೀಮಾ ಮಲ್ಹೋತ್ರಾ ಹೇಳಿದ್ದೇನು?

'ಆರ್‌ಸಿಬಿ ತಂಡದಲ್ಲಿ ಸದ್ಯ ನಾಯಕಿ ಸ್ಮೃತಿ ಮಂಧನಾ ಆರಂಭಿಕರಾಗಿ ಮತ್ತು ರಿಚಾ ಘೋಷ್ ಮಧ್ಯಮ ಕ್ರಮಾಂಕದ ಪ್ರಮುಖ ಭಾರತೀಯ ಬ್ಯಾಟರ್‌ಗಳಾಗಿ ಉಳಿದುಕೊಂಡಿದ್ದಾರೆ. ಹೀಗಾಗಿ ನಾಲ್ಕನೇ ಹಾಗೂ ಏಳನೇ ಕ್ರಮಾಂಕದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಅತ್ಯಗತ್ಯವಾಗಿದೆ,' ಎಂದು ರೀಮಾ ಮಲ್ಹೋತ್ರಾ ಹೇಳಿದ್ದಾರೆ.

ರಿಚಾ ಘೋಷ್‌ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು?

'ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಿಚಾ ಘೋಷ್ ಅವರನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಬೇಕು. ಇದರಿಂದ 5ನೇ ಕ್ರಮಾಂಕ ಖಾಲಿಯಾಗಲಿದ್ದು, ಅಲ್ಲಿ ಕಳೆದ ಬಾರಿಯಂತೆ ರಾಧಾ ಯಾದವ್ ಅವರನ್ನು ಬಳಸಿಕೊಳ್ಳಬಹುದು,' ಎಂದು ರೀಮಾ ಸಲಹೆ ನೀಡಿದ್ದಾರೆ.

ಫಿನಿಷರ್ ಹಾಗೂ ಆಲ್ ರೌಂಡರ್ ಅಗತ್ಯ

6ನೇ ಕ್ರಮಾಂಕದಲ್ಲಿ ನಾಡಿನ್ ಡಿ ಕ್ಲರ್ಕ್ ಫಿನಿಷರ್ ಜವಾಬ್ದಾರಿ ವಹಿಸಿದರೆ, 7ನೇ ಕ್ರಮಾಂಕಕ್ಕೆ ಮತ್ತೊಬ್ಬ ಭಾರತೀಯ ಆಲ್ ರೌಂಡರ್ ಅಗತ್ಯವಿದೆ. ಅಲ್ಲದೆ ರಿಚಾ ಘೋಷ್‌ಗೆ ಪರ್ಯಾಯವಾಗಿ ಸುಷ್ಮಾ ವರ್ಮಾ ಅಥವಾ ಉಮಾ ಚೆಟ್ರಿ ಅವರಂತಹ ಬ್ಯಾಕಪ್ ವಿಕೆಟ್ ಕೀಪರ್ ಅವರನ್ನು ಆರ್‌ಸಿಬಿ ಖರೀದಿಸಬೇಕಾಗಿದೆ ಎಂದು ಅವರ ಅಭಿಪ್ರಾಯವಾಗಿದೆ.

ವಿದೇಶಿ ಆಟಗಾರ್ತಿಯರ ಮೇಲೆ ಕಣ್ಣು

ಆರ್‌ಸಿಬಿ ತನ್ನ ಹಳೆಯ ಪ್ರಮುಖ ಆಟಗಾರ್ತಿಯರಾದ ಆಸ್ಟ್ರೇಲಿಯಾದ ಗ್ರೇಸ್ ಹ್ಯಾರಿಸ್ ಅಥವಾ ಸೋಫಿ ಮೊಲಿನಾಕ್ಸ್ ಅವರನ್ನು ಮರಳಿ ಖರೀದಿಸಲು ಪ್ರಯತ್ನಿಸಬಹುದು ಎಂದು ರೀಮಾ ತಿಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ರಮುಖ 237 ರನ್ ಕಲೆಹಾಕಿ ಆರ್‌ಸಿಬಿ ಯಶಸ್ಸಿಗೆ ಕಾರಣರಾಗಿದ್ದ ಗ್ರೇಸ್ ಹ್ಯಾರಿಸ್ ಬೆಂಗಳೂರು ತಂಡದ ಮೊದಲ ಆಯ್ಕೆ ಆಗಲಿದ್ದಾರೆ.

2024ರಲ್ಲಿ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಎಡಗೈ ಸ್ಪಿನ್ನರ್ ಸೋಫಿ ಮೊಲಿನಾಕ್ಸ್ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳುವುದು ರಾಯಲ್‌ ಚಾಲೆಂಜರ್ಸ್‌ ಬೆಮಗಳೂರು ತಂಡಕ್ಕೆ ಅತ್ಯಂತ ಉಪಯುಕ್ತವಾಗಲಿದೆ. ಆದರೆ ಮಿನಿ ಹರಾಜಿನಲ್ಲಿ ಫ್ರಾಂಚೈಸಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

ಮಿನಿ ಹರಾಜಿನಲ್ಲಿ ಪರ್ಸ್ ಮೊತ್ತ ಕಡಿಮೆ ಇರುವುದರಿಂದ ಆರ್‌ಸಿಬಿಗೆ ಸೂಕ್ತ ಆಟಗಾರ್ತಿಯರನ್ನು ಖರೀದಿಸುವುದು ಸವಾಲಿನ ಕೆಲಸವಾಗಲಿದೆ. ಆದರೂ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಆಗಿರುವುದರಿಂದ ಆರ್‌ಸಿಬಿಗಿಂತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಈ ಬಾರಿಯ ಹರಾಜಿನಲ್ಲಿ ಹೆಚ್ಚಿನ ಒತ್ತಡ ಇರಲಿದೆ ಅಂತಲೂ ರೀಮಾ ಮಲ್ಹೋತ್ರಾ ಹೇಳಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಪ್ರಕ್ರಿಯೆಯು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಟೂರ್ನಿಯು ಜನವರಿ 14 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಇದೀಗ ಹಾಲಿ ಚಾಂಪಿಯನ್‌ ಆರ್‌ಸಿಬಿಯೂ ನಾಲ್ವರು ಆಟಗಾರ್ತಿಯರನ್ನು ಕೈಬಿಟ್ಟಿದೆ.

ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರ್ತಿಯರು

* ಗ್ರೇಸ್ ಹ್ಯಾರಿಸ್
* ಲಿನ್ಸೆ ಸ್ಮಿತ್
* ಹೇಮಲತಾ
* ಗೌತಮಿ ನಾಯಕ್

ಆರ್‌ಸಿಬಿ ಉಳಿಸಿಕೊಂಡಿರುವ ಪ್ರಮುಖ ಆಟಗಾರ್ತಿಯರು

* ಸ್ಮೃತಿ ಮಂಧನಾ (ನಾಯಕಿ)
* ಎಲಿಸ್ ಪೆರ್ರಿ (ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್)
* ರಿಚಾ ಘೋಷ್ (ವಿಕೆಟ್ ಕೀಪರ್, ಬ್ಯಾಟರ್)
* ಶ್ರೇಯಾಂಕಾ ಪಾಟೀಲ್
* ರಾಧಾ ಯಾದವ್
* ಪೂಜಾ ವಸ್ತ್ರಾಕರ್
* ಅರುಂಧತಿ ರೆಡ್ಡಿ
* ನಾಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾದ ಆಲ್‌ರೌಂಡರ್)
* ಲಾರೆನ್ ಬೆಲ್ (ಇಂಗ್ಲೆಂಡ್‌ನ ವೇಗಿ)
* ಜಾರ್ಜಿಯಾ ವೋಲ್ (ಆಸ್ಟ್ರೇಲಿಯಾದ ಯುವ ಬ್ಯಾಟರ್)
* ಪ್ರತ್ಯೂಷಾ ಕುಮಾರ್
* ಪ್ರೇಮಾ ರಾವತ್
* ಸಯಾಲಿ ಸತ್ಘರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+