RCB Gautami Naik: ಆರ್‌ಸಿಬಿ ಪ್ಲೇ ಆಫ್ ತಲುಪಲು ಕಾರಣಕರ್ತೆಯಾದ ಗೌತಮಿ ನಾಯ್ಕ್ ಯಾರು ಗೊತ್ತಾ? ಇಲ್ಲಿದೆ ಮಾಹಿತಿ
RCB Gautami Naik: ಆರ್‌ಸಿಬಿಯು ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ ಮಾಡಿ ಬೆಂಗಳೂರು ತಂಡದ ಗೆಲುವಿಗೆ ಪ್ರಮುಖ ಕಾರಣಕರ್ತೆಯಾದ ಗೌತಮಿ ನಾಯಕ್ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಉತ್ತಮ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ತೋರುವ ಮೂಲಕ 61 ರನ್‌ಗಳ ಜಯ ಸಾಧಿಸಿತು. ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳಲ್ಲೂ ಗೆಲುವು ಕಂಡ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಮಾಡಿದೆ. ಹಾಗಾದ್ರೆ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಲು ಪ್ರಮುಖ ಕಾರಣಕರ್ತೆಯಾದ ಗೌತಮಿ ನಾಯಕ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಗುಜರಾತ್ ಜೈಂಟ್ಸ್ ಹೀನಾಯ ಸೋಲು: ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿ ಗುಜರಾತ್ ತಂಡಕ್ಕೆ 179 ರನ್‌ಗಳ ಗುರಿ ನೀಡಿತು. ಆದರೆ, ಇದನ್ನು ತಲುಪುವಲ್ಲಿ ವಿಫಲವಾಗುವ ಮೂಲಕ ಗುಜರಾತ್ ಹೀನಾಯ ಸೋಲನುಭವಿಸಿತು.
ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದ ಗೌತಮಿ: ಗುಜರಾತ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಬರೀ 117 ರನ್‌ಗಳನ್ನಷ್ಟೇ ಕಲೆಹಾಕಿ ಆರ್‌ಸಿಬಿ ವಿರುದ್ಧ ಸೋಲು ಕಂಡಿತು. ಇನ್ನೂ ಆರ್‌ಸಿಬಿ ಗೆಲುವಿಗೆ ಗೌತಮಿ ನಾಯಕ್ ಅವರ ಪಾತ್ರವೂ ಪ್ರಮುಖವಾಗಿದೆ. ಸ್ಫೋಟಕ ಬ್ಯಾಟ್ ಬೀಸಿದ ಗೌತಮಿ ಅವರು ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದರು.
ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ: ಗೌತಮಿ ನಾಯಕ್ ಅವರು 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 73 ರನ್ ಸಿಡಿಸಿ ಗರಿಷ್ಠ ಮೊತ್ತ ಕಲೆಹಾಕಿದ್ದಲ್ಲದೆ, ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣರಾದರು. ಈ ಮೂಲಕ ಸತತ 5 ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಅಂಕಪಟ್ಟಿಯಲ್ಲಿ 10 ಅಂಕ ಗಳಿಸಿ ಮೊದಲ ಸ್ಥಾನ ಭದ್ರಪಡಿಸಿಕೊಂಡಿದೆ. ಅಲ್ಲದೆ, ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಗುಜರಾತ್ ಜೈಂಟ್ಸ್ 5 ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಒಂದರ ಒಂದು ವಿಕೆಟ್ ಕಳೆದುಕೊಂಡು ಜೈಂಟ್ಸ್ ತಂಡ ಸಂಕಷ್ಟಕ್ಕೆ ಸಿಲುಕಿತು. ಗುಜರಾತ್ ಪರ ಅನುಷ್ಕಾ ಶರ್ಮಾ ಅವರು 18 ರನ್‌ಗಳಿಸಿ ಔಟಾದರೆ, ನಾಯಕಿ ಆಶ್ಲೀ ಗಾರ್ಡ್ನರ್ 54 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಸಯಾಲಿ ಸತ್ಘರೆ 3, ನಾಡಿನ್ ಡಿ ಕ್ಲರ್ಕ್ 2 ವಿಕೆಟ್ ಪಡೆದುಕೊಂಡರೆ, ಲಾರೆನ್ಸ್ ಬೆಲ್, ರಾಧಾ ಯಾದವ್ ಹಾಗೂ ಶ್ರೇಯಾಂಕಾ ಪಾಟೀಲ್ ತಲಾ ಒಂದು ವಿಕೆಟ್ ಕಬಳಿಸಿದರು. ಗುಜರಾತ್ ಜೈಂಟ್ಸ್ ತಂಡ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಹೀಗೆ ಆರ್‌ಸಿಬಿ ಭರ್ಜರಿಗೆ ಗೆಲುವಿಗೆ ಇವರ ಪಾತ್ರವು ಕೂಡ ಅಷ್ಟೇ ಪ್ರಮುಖವಾಗಿದೆ.
ಆರ್‌ಸಿಬಿ ಬೌಲಿಂಗ್ ವಿಚಾರಕ್ಕೆ ಬಂದರೆ, ಲಾರೆನ್ಸ್ ಬೆಲ್ 4 ಓವರ್ ಬೌಲಿಂಗ್ ಎಸೆದು 23 ರನ್ ಬಿಟ್ಟು ಕೊಡುವ ಮೂಲಕ 1 ವಿಕೆಟ್ ಕಬಳಿಸಿದರು. ಸಯಾಲಿ ಸತ್ಘರೆ 21 ರನ್ ಕೊಟ್ಟು 3 ವಿಕೆಟ್ ಪಡೆದರೆ, ನಾಡಿನ್ ಡಿ ಕ್ಲರ್ಕ್ 17 ರನ್ ನೀಡಿ 2 ವಿಕೆಟ್ ಪಡೆದರು ಮಿಂಚಿದರು. ರಾಧಾ ಯಾದವ್ ಹಾಗೂ ಶ್ರೇಯಾಂಕಾ ಪಾಟೀಲ್ ತಲಾ ಒಂದು ವಿಕೆಟ್ ಪಡೆದರು. ಹೀಗೆ ಬೌಲಿಂಗ್ ವಿಭಾಗದಲ್ಲೂ ಸಹ ತಂಡ ಉತ್ತಮ ಪ್ರದರ್ಶನ ನೀಡಿತು.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ 9 ರನ್‌ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತ್ತು. ನಂತರ ಸ್ಮೃತಿ ಮಂಧಾನ ಮತ್ತು ಗೌತಮಿ ನಾಯ್ಕ್ ಮೂರನೇ ವಿಕೆಟಿಗೆ 45 ಎಸೆತಗಳಲ್ಲಿ 60 ರನ್ ಜೊತೆಯಾಟ ಆಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಸ್ಮೃತಿ ಮಂಧಾನ 26 (23) ರನ್ ಬಾರಿಸಿ ಔಟ್ ಆದರು. ಆಗ ಗೌತಮಿ ನಾಯ್ಕ್ ಮತ್ತು ರಿಚಾ ಘೋಷ್ 45 ಎಸೆತಗಳಲ್ಲಿ 69 ಜೊತೆಯಾಟ ಆಡಿದರು. ಸ್ಫೋಟಕ ಬ್ಯಾಟ್ ಬೀಸಿದ ಗೌತಮಿ 73 ರನ್ (55) ರನ್ ಸಿಡಿಸಿದರು. ರಿಚಾ ಘೋಷ್ 27 ರನ್(20), ರಾಧಾ ಯಾದವ್ 17 ರನ್(8), ಶ್ರೇಯಾಂಕ ಪಾಟೀಲ್ ಕೊನೆಯಲ್ಲಿ ಎರಡು ಬೌಂಡರಿ ಬಾರಿಸಿ 8 ರನ್‌ಗಳನ್ನು ಕಲೆಹಾಕು ಮೂಲಕ ತಂಡದ ಮೊತ್ತವನ್ನು 178ರ ಗಡಿ ಮುಟ್ಟಿಸಿದರು. ಇಲ್ಲಿವರೆಗೂ ರನ್‌ಗಳು ಬರುವುದಕ್ಕೆ ಪ್ರಮುಖ ಕಾರಣವೇ ಗೌತಮಿ ನಾಯ್ಕ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಅಂದ್ರೆ ತಪ್ಪಾಗಲಾರದು.
ಗೌತಮಿ ನಾಯ್ಕ್ ಯಾರು?: ಆರ್‌ಸಿಬಿ ತಂಡದ ಗೌತಮಿ ನಾಯ್ಕ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಅವರು ಮುಖ್ಯವಾಗಿ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದು, ಬಲಗೈ ಬ್ಯಾಟ್ಸ್‌ವುಮನ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಲೇ ಬಂದಿದ್ದಾರೆ.
ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ನಿರಂತರ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಗೌತಮಿ ನಾಯ್ಕ್, ಆರ್‌ಸಿಬಿ ತಂಡದಲ್ಲಿ ಯುವ ಪ್ರತಿಭೆಯಾಗಿ ಅವಕಾಶ ಪಡೆದಿದ್ದು, ಶಿಸ್ತಿನ ಆಟ, ಧೈರ್ಯ ಮತ್ತು ತಂಡದ ಅವಶ್ಯಕತೆಗೆ ತಕ್ಕಂತೆ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಭರವಸೆಯ ಆಟಗಾರ್ತಿಯರಲ್ಲಿ ಅವರು ಒಬ್ಬರಾಗಿದ್ದಾರೆ.
ಆರ್‌ಸಿಬಿ ಎಷ್ಟಕ್ಕೆ ಖರೀದಿ ಮಾಡಿದೆ?: ಆರ್‌ಸಿಬಿ ಗೌತಮಿ ನಾಯ್ಕ್ ಅವರನ್ನು ಡಬ್ಲ್ಯೂಪಿಎಲ್ 2026 ಮೆಗಾ ಹರಾಜಿನಲ್ಲಿ 10,00,000 ರೂಪಾಯಿಗೆ ಖರೀದಿ ಮಾಡಿದೆ. ಇವರು ಭಾರತದ ಆಲ್-ರೌಂಡರ್ ಆಗಿದ್ದು, ತಮ್ಮ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಇವರು ಬ್ಯಾಟಿಂಗ್ ಆಲ್-ರೌಂಡರ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರದ ಪರ ಆಡಿದವರಾಗಿದ್ದಾರೆ.
ಗೌತಮಿ ನಾಯ್ಕ್ ಅವರ ಹಿನ್ನೆಲೆ: ಇದೀಗ ಆರ್‌ಸಿಬಿ ತಂಡದ ಪರ ಆಡುತ್ತಿರುವ ಗೌತಮಿ ನಾಯ್ಕ್ ಅವರ ಹಿನ್ನೆಲೆ ನೋಡುವುದಾದರೆ, ಅವರು ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ಹಂತ ಹಂತವಾಗಿ ಬೆಳೆದು ಬಂದ ಆಟಗಾರ್ತಿಯಾಗಿದ್ದಾರೆ. ಬಾಲ್ಯದಿಂದಲೇ ಕ್ರಿಕೆಟ್ ಮೇಲಿನ ಆಸಕ್ತಿ ಹೊಂದಿದ್ದ ಅವರು ಸ್ಥಳೀಯ ಹಾಗೂ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಗಮನ ಸೆಳೆದರು.
ಶಿಸ್ತುಬದ್ಧ ತರಬೇತಿ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸದ ಆಟವೇ ಅವರ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಬ್ಯಾಟಿಂಗ್‌ನಲ್ಲಿ ಸ್ಥಿರತೆ ಹಾಗೂ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ನೆರವಾಗುವ ಮನೋಭಾವ, ಜೊತೆಗೆ ಉಪಯುಕ್ತ ಬೌಲಿಂಗ್ ಸಾಮರ್ಥ್ಯವು ಅವರನ್ನು ಆಲ್‌ರೌಂಡರ್ ಆಗಿ ರೂಪಿಸಿದೆ. ಈ ಸಾಧನೆಗಳ ಫಲವಾಗಿ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಭಾಗವಾಗಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.












Click it and Unblock the Notifications