WPL Auction: ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ, ಜನವರಿ ತಿಂಗಳಲ್ಲೇ ಕ್ರಿಕೆಟ್ ಹಬ್ಬ ಶುರು!
ಭಾರತ ಕ್ರಿಕೆಟ್ ಪಾಲಿಗೆ ಸ್ವರ್ಗವಾಗಿದ್ದು, ಭಾರತೀಯರು ಕ್ರಿಕೆಟ್ ಆಟವಾಗಿ ಮಾತ್ರವಲ್ಲ ಒಂದು ಧರ್ಮವಾಗಿ ಕೂಡ ಸ್ವೀಕಾರ ಮಾಡಿದ್ದಾರೆ. ಕ್ರಿಕೆಟ್ ಆಟಕ್ಕೆ ಪ್ರಾಣ ಬೇಕಾದರೂ ಕೊಡಲು ಸಿದ್ಧ ಇರುವ ಅಭಿಮಾನಿಗಳು ಸಿಗುವುದು ಭಾರತದಲ್ಲಿ ಮಾತ್ರ. ಹೀಗೆ ಕ್ರಿಕೆಟ್ ಆಟ ಭಾರತವನ್ನ ಭಾರಿ ಗಟ್ಟಿಯಾಗಿ ಆಕ್ರಮಿಸಿಕೊಂಡ ಕಾರಣಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಆದಾಯ ಕೂಡು ಬಿಸಿಸಿಐ ಪಾಲಿಗೆ ಹರಿದು ಬರುತ್ತಿದೆ. ಹೀಗಿದ್ದಾಗ ವರ್ಷದ ಕೊನೆಯಲ್ಲಿ ಮತ್ತೊಂದು ಭರ್ಜರಿಯಾದ ಸುದ್ದಿ ಕೂಡ ಸಿಕ್ಕಿದ್ದು, ಜನವರಿ ತಿಂಗಳಲ್ಲೇ ಕ್ರಿಕೆಟ್ ಹಬ್ಬ ಶುರುವಾಗುತ್ತಿದೆ!
ಮೊದಲೇ ಹೇಳಿದಂತೆ ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮವಾಗಿದ್ದು, ಕ್ರಿಕೆಟ್ ಆಟವನ್ನು ದೇವರು & ಧರ್ಮ ಎಂದು ಪೂಜಿಸುವುದು ವಾಡಿಕೆ. ಇಷ್ಟು ದಿನಗಳ ಕಾಲ ಪುರುಷರು ಅಂದ್ರೆ ಹುಡುಗರ ಕ್ರಿಕೆಟ್ ತಂಡ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡಿ ದೊಡ್ಡ ಹೆಸರು ಸಂಪಾದಿಸಿ, ಲಕ್ಷಾಂತರ ಕೋಟಿ ರೂಪಾಯಿ ಹಣ ಹರಿದು ಬರುವಂತೆ ಮಾಡುತ್ತಿದ್ದರು. ಆದರೆ ಇದೀಗ ಹುಡುಗರನ್ನೂ ಮೀರಿಸಲು ಮಹಿಳಾ ಕ್ರಿಕೆಟ್ ತಂಡ ಎಂಟ್ರಿ ಕೊಟ್ಟಿದ್ದು, ಮೊನ್ನೆ ಮೊನ್ನೆಯಷ್ಟೇ ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದು ಕೊಟ್ಟಿದ್ದರು ವೀರ ನಾರಿಯರು. ಇದೀಗ ಮಹಿಳಾ ಪ್ರಿಮಿಯರ್ ಲೀಗ್ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಮಹಿಳಾ ಪ್ರಿಮಿಯರ್ ಲೀಗ್‌ಗೆ ಕೌಂಟ್‌ಡೌನ್!
ಅಂದಹಾಗೆ ಮಹಿಳಾ ಪ್ರೀಮಿಯರ್ ಲೀಗ್ ಅಂದರೆ WPL 4ನೇ ಆವೃತ್ತಿಯ ಟೈಮ್ ಟೇಬಲ್ ಈಗ ಅಂತಿಮವಾಗಿದೆ. ಹಾಗೇ ಪಂದ್ಯ ನಡೆಯಲಿರುವ ನಗರಗಳ ಹೆಸರನ್ನೂ ಈಗ ಬಿಸಿಸಿಐ ಪ್ರಕಟಿಸಿದೆ. 2026ರ ಜನವರಿ 9 ಟು ಫೆಬ್ರವರಿ 5 ತನಕ ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಮ್ಯಾಚ್ ನಡೆಯಲಿವೆ. ನವಿ ಮುಂಬೈ & ವಡೋದರಾ ಮೈದಾನಗಳಲ್ಲಿ ಈ ಪಂದ್ಯಗಳು ನಡೆಯಲಿದ್ದು, ಈ ಬಗ್ಗೆ WPL ಅಧ್ಯಕ್ಷ ಜಯೇಶ್ ಜಾರ್ಜ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅತ್ತ ಪುರುಷರ ಪ್ರಿಮಿಯರ್ ಲೀಗ್ ಆರಂಭ ಆಗುವ ಮೊದಲೇ ಭಾರತದಲ್ಲಿ ಮಹಿಳಾ ಕ್ರಿಕೆಟ್ ಹಬ್ಬವು ಶುರು ಆಗಲಿದೆ.
ಮೆಗಾ ಹರಾಜು ಪ್ರಕ್ರಿಯೆ ಕೂಡ ಪ್ರಾರಂಭ!
ಮತ್ತೊಂದು ಕಡೆ, ಮಹಿಳಾ ಪ್ರೀಮಿಯರ್ ಲೀಗ್ ಅಂದರೆ WPL 4ನೇ ಆವೃತ್ತಿಯ ವೇಳಾಪಟ್ಟಿಯ ಘೋಷಣೆ ನಂತರ ಮೆಗಾ ಹರಾಜು ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಭಾರತದ ವಿಶ್ವಕಪ್ ವಿಜೇತ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರಿಗೆ ಭಾರಿ ಭರ್ಜರಿಯೇ ಡಿಮ್ಯಾಂಡ್ ಇತ್ತು. ಈ ಮೂಲಕ ಸುಮಾರು 3 ಕೋಟಿ ರೂಪಾಯಿ ಮೀರಿ ಹರಾಜು ಕೂಗಿದ್ದು ಗಮನ ಸೆಳೆಯಿತು. ಅಂತಿಮವಾಗಿ ಯುಪಿ ವಾರಿಯರ್ಸ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನ ಉಳಿಸಿಕೊಂಡಿದೆ. ಹೀಗೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಕೂಡ ಕೋಟಿ, ಕೋಟಿ ರೂಪಾಯಿ ಹಣದ ಮಳೆಯೇ ಸುರಿದಿದೆ.












Click it and Unblock the Notifications