Shreyanka Patil: ಡಬ್ಲ್ಯೂಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಆಲ್‌ರೌಂಡರ್ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೇಳಿಕೆ ಭಾರೀ ವೈರಲ್
Shreyanka Patil: ಡಬ್ಲ್ಯೂಪಿಎಲ್ 2026 ಹಬ್ಬ ಜನವರಿ 9ರ ಶುಕ್ರವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಕರ್ನಾಟಕದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಇದಕ್ಕೂ ಮುನ್ನ ಇದೀಗ ಬೆಂಗಳೂರು ತಂಡದ ಆಲ್‌ರೌಂಡರ್ ಕನ್ನಡತಿ ಶ್ರೇಯಾಂಕ ಪಾಟೀಲ್ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶ್ರೇಯಾಂಕ ಪಟೀಲ್ ಕಳೆದ ಆವೃತ್ತಿಯಲ್ಲಿ ಗಾಯದಿಂದ ಹೊರಗುಳಿದಿದ್ದರು. ಆದ್ದರಿಂದ ಇವರನ್ನು ಈ ಬಾರಿ ಬೆಂಗಳೂರು ತಂಡ ರಿಟೇನ್ ಮಾಡಿಕೊಳ್ಳುತ್ತದೆಯೋ ಇಲ್ಲವೋ ಎಂಬ ಗೊಂದಲವಿತ್ತು. ಆದರೆ, ಕೊನೆಗೂ ಇವರನ್ನು ಕೈಬಿಡದೇ, ತಂಡದಲ್ಲೇ ಉಳಿಸಿಕೊಂಡಿತು. ಯಾಕಂದ್ರೆ 2024ರಲ್ಲಿ ಆರ್‌ಸಿಬಿ ಟ್ರೋಫಿ ಎತ್ತಲು ಇವರ ಪಾತ್ರ ಕೂಡ ಪ್ರಮುಖವಾಗಿತ್ತು.

ಅಭಿಮಾನಿಗಳ ಮನ ಗೆದ್ದ ಶ್ರೇಯಾಂಕಾ: ಇವರು 2024ರಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ವಿಶೇಷವಾಗಿ ಇವರು ಕರ್ನಾಟಕದವರಾಗಿದ್ದು, ಇವರಿಗೆ ಅಭಿಮಾನಿಗಳು 'ಟಗರು ಪುಟ್ಟಿ'ಯಂತಲೇ ಪ್ರೀತಿಯಿಂದ ಹೆಸರಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ತೋರು ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು.
ಆದರೆ, ಕಳೆದ ಆವೃತ್ತಿಯಲ್ಲಿ ಇವರು ಗಾಯದ ಕಾರಣ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳು ಸಹ ಇವರು ಯಾಕೆ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿಲ್ಲ ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೆಲ್ಲದಕ್ಕೂ ಉತ್ತರ ಎಂಬಂತೆ ಮತ್ತೆ ಆರ್‌ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಶುಕ್ರವಾರದಿಂದ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಕ್ಷಣಕ್ಕಾಗಿ ಇಡೀ ಕರ್ನಾಟಕವೇ ಎದುರು ನೋಡುತ್ತಿದೆ. ಇದಕ್ಕೂ ಮುನ್ನ ತಾವು ಕಮ್ ಬ್ಯಾಕ್ ಮಾಡಿರುವ ಬಗ್ಗೆ ಭಾವನಾತ್ಮಕ ಮಾಹಿತಿಯನ್ನು ಶ್ರೇಯಾಂಕಾ ಬಿಚ್ಚಿಟ್ಟಿದ್ದಾರೆ.
ಶುಕ್ರವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ಕನ್ನಡತಿ ಶ್ರೇಯಾಂಕಾ ಪಾಟೀಲ್ ಆಡಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು, ಈ ಋತುವಿಗಾಗಿ ಕಾತರದಿಂದ ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಬ್ಲ್ಯುಪಿಎಲ್‌ಗೆ ನಡೆಸಿದ ಸಿದ್ಧತೆ, ಭಾರತ ತಂಡಕ್ಕೆ ಕಮ್‌ಬ್ಯಾಕ್, ಪದೇ ಪದೇ ಗಾಯಗೊಂಡಿದ್ದರಿಂದ ಅನುಭವಿಸಿದ ಮಾನಸಿಕ ಯಾತನೆ ಸೇರಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?: "ಆರ್‌ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ, ರೀಟೈನ್ ಆಗಿದ್ದೇನೆ ಎಂದು ವಿಷಯ ತಿಳಿದಾಗ ನಾನು ಭಾವುಕಳಾದೆ. ನನಗೆ ಕೆಲ ಹೊತ್ತು ಮಾತೇ ಬರದಂತಾಗಿತ್ತು. ಅಷ್ಟರ ಮಟ್ಟಿಗೆ ಖುಷಿಯಾಯಿತು," ಎಂದು ಹೇಳಿದರು.
ಬುಮ್ರಾ ನೀಡಿದ ಸಲಹೆ ಏನು?: 2025ರಲ್ಲಿ ಬಹುತೇಕ ಸಮಯವನ್ನು ಗಾಯಾದಿಂದ ಹೊರಗುಳಿದಿದ್ದೆ. ಶ್ರೇಯಾಂಕಾ ಆರಂಭದಲ್ಲಿ ತಮ್ಮ ಕೊಠಡಿಯೊಳಗೇ ಬಂಧಿ ಆಗಿದ್ದರಂತೆ. ಬಳಿಕ ನಿಧಾನಕ್ಕೆ ಪುನಶ್ಚೇತನ ಶಿಬಿರಕ್ಕೆ ಕಾಲಿಟ್ಟಿದ್ದು, ಈ ವೇಳೆ ಜಸ್ಪ್ರೀತ್ ಬುಮ್ರಾ ನೀಡಿದ ಸಲಹೆಗಳು ನೆರವಿಗೆ ಬಂದವು ಎಂದು ಶ್ರೇಯಾಂಕಾ ಅವರು ತಿಳಿಸಿದ್ದಾರೆ.
ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಹಲವು ಸಲಹೆಗಳನ್ನು ನೀಡಿದರಂತೆ. "ಒತ್ತಡ, ಗಾಯದ ಸಮಸ್ಯೆಯನ್ನು ನಿಭಾಯಿಸುವುದನ್ನು ಬೂಮ್ರಾ ತುಂಬಾ ಚೆನ್ನಾಗಿ ವಿವರಿಸಿದರು," ಎಂದು ಶ್ರೇಯಾಂಕಾ ಪಾಟೀಲ್ ಅವರು ಹೇಳಿದರು. ಇದೇ ಮಾತನ್ನು ಸ್ಫರ್ತಿಯಾಗಿ ತೆಗೆದುಕೊಂಡ ಶ್ರೇಯಾಂಕಾ ಡಬ್ಯುಪಿಎಲ್‌ನಲ್ಲಿ ಆರ್‌ಸಿಬಿ ಪರ ಉತ್ತಮವಾಗಿ ಆಡಲು ಸಜ್ಜಾಗಿದ್ದಾರೆ. ಅಲ್ಲದೆ, ಅವರು ಭಾರತ ತಂಡಕ್ಕೆ ಮತ್ತೆ ಕಮ್‌ಬ್ಯಾಕ್ ಮಾಡುವ ಭರವಸೆಯನ್ನು ಕೂಡ ನೀಡಿದ್ದಾರೆ.












Click it and Unblock the Notifications