WPL 2026 RCB Playing 11: ಇಂದಿನ ಉದ್ಘಾಟನಾ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11
WPL 2026 RCB Playing 11: ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದ ಡಬ್ಲ್ಯೂಪಿಎಲ್ 2026 ಹಬ್ಬ ಇಂದು (ಜನವರಿ 9) ಕಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಹಾಗಾದ್ರೆ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡಬ್ಲ್ಯೂಪಿಎಲ್ 2023ರಲ್ಲಿ ಚೊಚ್ಚಲ ಟ್ರೋಫಿಯನ್ನು ಮುಂಬೈ ಇಂಡಿಯನ್ಸ್ ಗೆದ್ದುಕೊಂಡಿತು. 2024ರಲ್ಲಿ ಆರ್‌ಸಿಬಿ ಚಾಂಪಿಯನ್ ಆದರೆ, ಮತ್ತೆ 2025ರಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು. ಇನ್ನೂ ಇಂದಿನಿಂದ ಅಂದರೆ 2026ರ ಜನವರಿ 9ರಿಂದ ನಾಲ್ಕನೇ ಆವೃತ್ತಿ ಆರಂಭ ಆಗಲಿದ್ದು, ಈ ಬಾರಿ ಟ್ರೋಫಿ ಗೆಲ್ಲುವ ಸಾಲಿನಲ್ಲಿ ಇವೆರಡೂ ತಂಡಗಳು ಮುಂಚೂಣಿಯಲ್ಲಿ.

ಆದರೂ ಕಳೆದ ಬಾರಿ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ಈ ಬಾರಿ ಟ್ರೋಫಿ ಎತ್ತಲೇಬೇಕು ಎನ್ನುವ ಹಠ ತೊಟ್ಟು ನಿಂತಿದೆ. ಇನ್ನೂ 2026ರ ಜನವರಿ 9 ಶುಕ್ರವಾರ ಮುಂಬೈ ವಿರುದ್ಧ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗೆಲ್ಲಲ್ಲು ಸಕಲ ತಯಾರಿ ನಡೆಸಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆರ್‌ಸಿಬಿಗೆ ಬೆನ್ನೆಲುಬಾಗಿದ್ದ ಸ್ಟಾರ್ ಆಲ್‌ರೌಂಡರ್ ಇತ್ತೀಚೆಗಷ್ಟೇ ವೈಯಕ್ತಿಕ ಕಾರಣಗಳಿಂದ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಎದುರಾಳಿ ತಂಡಗಳಿಗೆ ನಡುಕ ತರಿಸಿದ್ದರು. ಅಷ್ಟರ ಪಟ್ಟಿಗೆ ಪ್ರದರ್ಶನ ತೋರಿದ್ದರು. ಇದೀಗ ಅವರ ಸ್ಥಾನದಲ್ಲಿ ಬೇರೆ ಯಾರೇ ಕಣಕ್ಕಿಳಿದರು ಅಷ್ಟು ಪ್ರದರ್ಶನ ಕಂಡುಬರುತ್ತದೆಯೋ ಗೊತ್ತಿಲ್ಲ. ಆದರೆ, ಪಂದ್ಯ ಆರಂಭವಾದ ಬಳಿಕ ಇವರ ಸ್ಥಾನಕ್ಕೆ ಯಾರು ಸೂಕ್ತ ಎಂಬುದು ಗೊತ್ತಾಗಲಿದೆ.
ಆರ್‌ಸಿಬಿ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕ ಪಾಟೀಲ್, ನಡಿನ್ ಡಿ ಕ್ಲರ್ಕ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್, ರಾಧಾ ಯಾದವ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ.
ಮುಂಬೈ ಇಂಡಿಯನ್ಸ್: ಹೇಲಿ ಕ್ರಿಸ್ಟನ್ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜನಾ, ಅಮನ್‌ಜೋತ್ ಕೌರ್, ಜಿ ಕಮಲಿನಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ನಿಕೋಲಾ ಕ್ಯಾರಿ, ಪೂನಮ್ ಖೆಮ್ನಾರ್.
ಈ ಬಾರಿ ಆರ್‌ಸಿಬಿಯಲ್ಲಿ ಆಲ್‌ರೌಂಡರ್‌ಗಳ ದಂಡೇ ಇದೆ. ಅದರಲ್ಲೂ ಸ್ಫೋಟಕ ಬ್ಯಾಟ್ ಬೀಸಬಲ್ಲ ಆಟಗಾರ್ತಿಯರು ತುಂಬಾ ಜನ ಇದ್ದಾರೆ. ಬೌಲಿಂಗ್ ವಿಭಾಗದಲ್ಲೂ ಸಹ ಅಷ್ಟೇ ಮಾರಕ ಬೌಲಿಂಗ್ ದಾಳಿ ಮಾಡುವವರು ಇದ್ದಾರೆ. ಆದ್ದರಿಂದ ಈ ಬಾರಿ ಎಲ್ಲಾ ಬಲಿಷ್ಠ ತಂಡಗಳನ್ನು ಬಗ್ಗುಬಡಿಯುವುದಂತೂ ಖಚಿತ ಎನ್ನಲಾಗುತ್ತಿದೆ. ಇನ್ನೂ ಪ್ರಪಂಚದಾದ್ಯಂತದ ನೇರ ಪ್ರಸಾರ ಆಗಲಿದೆ.
ನೇರಪ್ರಸಾರದ ವಿವರ
* ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1) ಅಲ್ಲದೆ, ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ವೀಕ್ಷಣೆ ಮಾಡಬಹುದು.
* ಸಮಯ: ಸಂಜೆ 7:30
* ಸ್ಥಳ: ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ












Click it and Unblock the Notifications