ಡಬ್ಲ್ಯೂಪಿಎಲ್ 2026: ಆರ್‌ಸಿಬಿ ಸೇರಿದಂತೆ ಐದು ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿ
WPL 2026 All Teams Retained Players: ಡಬ್ಲ್ಯೂಪಿಎಲ್ 2025 ಫೈನಲ್ ಪಂದ್ಯದಲ್ಲಿ ಮುಂಬೈ ಟೀಂ ಚಾಂಪಿಯನ್ ಆಗಿದ್ದು, ಇದೀಗ ಎಲ್ಲರ ಚಿತ್ತ 2026ರ ಸೀಸನ್‌ನತ್ತ ನೆಟ್ಟಿದೆ. ಇದೀಗ ಮುಂದಿನ ಸೀಸನ್ ಮೆಗಾ ಹರಾಜಿಗೂ ಮುನ್ನ ಕೆಲ ಆಟಗಾರ್ತಿಯನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಬಿಡುಗಡೆಗೊಳಿಸಿದೆ. ಹಾಗಾದ್ರೆ, ಯಾವ ತಂಡ ಯಾರನ್ನೆಲ್ಲಾ ಉಳಿಸಿಕೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಡಬ್ಲ್ಯೂಪಿಎಲ್‌ನ ಮೂರು ಸೀಸನ್ ಮುಕ್ತಾಯವಾಗಿವೆ. ಆರಂಭದ 2023ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆದರೆ, 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಪಟ್ಟ ಅಲಂಕರಿಸಿತು. 2025ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಇದೀಗ ಎಲ್ಲರ ಚಿತ್ತ 2026ರ ಡಬ್ಲ್ಯೂಪಿಎಲ್‌ನತ್ತ ನೆಟ್ಟಿದೆ.

2026ರ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ಐದು ತಂಡಗಳು ನಿಯಮದಂತೆ ಕೆಲ ಆಟಗಾರ್ತಿಯನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಉಳಿಸಿಕೊಂಡಿವೆ. ಸಾಮಾನ್ಯವಾಗಿ ಮೆಗಾ ಹಾರಾಜಿನ ವೇಳೆ ಒಂದು ತಂಡ ಗರಿಷ್ಠ ಐವರು ಆಟಗಾರ್ತಿಯನ್ನು ಉಳಿಸಿಕೊಳ್ಳುವ ಅವಕಾಶ ಇರುತ್ತದೆ. ಹಾಗಾದ್ರೆ ಐದು ತಂಡಗಳನ್ನು ಯಾವೆಲ್ಲಾ ಪ್ಲೇಯರ್ಸ್ ಅನ್ನು ಉಳಿಸಿಕೊಂಡಿವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
2026ರ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಬಿಸಿಸಿಐ ನಿಯಮದಂತೆ ಎಲ್ಲಾ 5 ತಂಡಗಳು ಯಾವ ಆಟಗಾರ್ತಿಯರನ್ನು ಎಷ್ಟು ಹಣಕ್ಕೆ ಉಳಿಸಿಕೊಂಡಿದ್ದೇವೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
* ಆರ್‌ಸಿಬಿ ಉಳಿಸಿಕೊಂಡ ಆಟಗಾರ್ತಿಯರು: ಆರ್‌ಸಿಬಿಯು ಸ್ಮೃತಿ ಮಂಧಾನ ಅವರನ್ನು ಉಳಿಸಿಕೊಂಡಿದ್ದು, ಅವರಿಗೆ 3.5 ಕೋಟಿ ರೂಪಾಯಿ ನೀಡಿದೆ. ರಿಚಾ ಘೋಷ್ ಅವರಿಗೆ 2.75 ಕೋಟಿ ರೂಪಾಯಿ, ಎಲ್ಲಿಸ್ ಪೆರಿಗೆ 2 ಕೋಟಿ ರೂಪಾಯಿ, ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ 60 ಲಕ್ಷ ರೂಪಾಯಿ ನೀಡಿ ಉಳಿಸಿಕೊಳ್ಳಲಾಗಿದೆ. ಇದೀಗ ಆರ್‌ಸಿಬಿ ಬಳಿ 6.15 ಕೋಟಿ ರೂಪಾಯಿ ಉಳಿದುಕೊಂಡಿದೆ.
* ಮುಂಬೈ ಇಂಡಿಯನ್ಸ್ ಆರ್‌ಸಿಬಿ ಬ್ರಂಟ್‌ಗೆ 3.5 ಕೋಟಿ ನೀಡಿದರೆ, ಹರ್ಮನ್‌ಪ್ರೀತ್ ಕೌರ್‌ಗೆ 2.5 ಕೋಟಿ ರೂಪಾಯಿ, ಹೇಲಿ ಮ್ಯಾಥ್ಯೂಸ್‌ಗೆ 1.75 ಕೋಟಿ ರೂಪಾಯಿ, ಅಮನ್‌ಜೋತ್ ಕೌರ್‌ಗೆ 1 ಕೋಟಿ ರೂಪಾಯಿ, ಗುಣಳನ್ ಕಮಲಿನಿಗೆ 50 ಲಕ್ಷ ರೂಪಾಯಿ ನೀಡಿ ಉಳಿಸಿಕೊಂಡಿದೆ. ಇದೀಗ ಮುಂಬೈ ಇಂಡಿಯನ್ಸ್ ಬಳಿ 5.75 ಕೋಟಿ ಉಳಿದುಕೊಂಡಿದೆ.
* ಡೆಲ್ಲಿ ಕ್ಯಾಪಿಟಲ್ಸ್ ಜೆಮಿಮಾ ರೊಡ್ರಿಗ್ಸ್ 2.2 ಕೋಟಿ ರೂಪಾಯಿ, ಮಾರಿಜಾನ್ ಕಾಪ್ 2.2 ಕೋಟಿ ರೂಪಾಯಿ, ಶಫಾಲಿ ವರ್ಮಾ 2.2 ಕೋಟಿ ರೂಪಾಯಿ, ಆನಾಬೆಕ್ ಸದರ್‌ಲ್ಯಾಂಡ್ 2.2 ಕೋಟಿ ರೂಪಾಯಿ, ನಿಕಿ ಪ್ರಸಾಸ್‌ಗೆ 50 ಲಕ್ಷ ರೂಪಾಯಿ ನೀಡಿ ಉಳಿಸಿಕೊಂಡಿದೆ. ಇದೀಗ ಡಿಸಿ ಬಳಿ 5.7 ಕೋಟಿ ಉಳಿದುಕೊಂಡಿದೆ.
* ಗುಜರಾತ್ ಜೈಂಟ್ಸ್ ಆಶ್ಲೀ ಗಾರ್ಡ್‌ನರ್ 3.5 ಕೋಟಿ, ಬೆತ್ ಮೂನಿಗೆ 2.5 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದೆ. ಇದೀಗ 9 ಕೋಟಿ ರೂಪಾಯಿ ಉಳಿದುಕೊಂಡಿದೆ.
* ಯುಪಿ ವಾರಿಯರ್ಸ್ ಶ್ವೇತಾ ಶೆರಾವತ್‌ಗೆ 50 ಲಕ್ಷ ರೂಪಾಯಿ ನೀಡಿ ಉಳಿಸಿಕೊಂಡಿದೆ. ಇದೀಹ ತಂಡ ಹರಾಜಿಗೆ 14.50 ಕೋಟಿ ರೂಪಾಯಿ ಉಳಿಸಿಕೊಂಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಒಟ್ಟಿನಲ್ಲಿ ಇದೀಗ ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ಬಿಟ್ಟರೆ, ಇನ್ನುಳಿದ ತಂಡಗಳ ಬಳಿ ಕಡಿಮೆ ಹಣ ಇದೆ. ಯಾಕಂದ್ರೆ ಹೆಚ್ಚು ಆಟಗಾರ್ತಿಯನ್ನು ಆ ತಂಡಗಳು ಉಳಿಸಿಕೊಂಡಿವೆ. ಆದರೆ, ಈ ಎರಡು ತಂಡಗಳು ಮಾತ್ರ ಇಬ್ಬರು, ಒಬ್ಬರು ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಂಡಿದ್ದು, ಉಳಿದ ಎಲ್ಲಾರನ್ನು ಬಿಡುಗಡೆಗೊಳಿಸಿವೆ.












Click it and Unblock the Notifications