ವಿಶ್ವಕಪ್ 2023: ಕೇಳ್ರಪ್ಪೋ.. ಕೇಳ್ರಿ.... ಭಾರತದೊಂದಿಗೆ ಪಾಕಿಸ್ತಾನ ಸೋಲಲು ಮಾಟಮಂತ್ರ ಕಾರಣವಂತೆ....!
ಒಂದು ಗಾದೆ ಮಾತಿದೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋದು. ಈ ಗಾದೆ ಮಾತು ಪಾಕಿಸ್ತಾನದ ಹೇಳಿಕೆಗೆ ಸರಿಹೊಂದುವಂತಿದೆ. ಈ ಬಾರಿ ಪಾಕಿಸ್ತಾನ ತಂಡದ ಸೋಲಿಗೆ ಕಾರಣ ಭಾರತ ಮಾಡಿದ ಮಾಟಮಂತ್ರವೇ ಕಾರಣವಂತೆ. ತಂಡದ ಉತ್ತಮ ಆಟದ ಪ್ರದರ್ಶನದಿಂದ ಭಾರತ ಗೆದ್ದಿಲ್ಲ ಬದಲಿಗೆ ಮಾಟಮಂತ್ರ ಮಾಡುವ ಮೂಲಕ ಗೆಲುವು ಸಾಧಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಈ ವಿಶ್ವಕಪ್‌ನಲ್ಲಿ (ODI ವಿಶ್ವಕಪ್ 2023) ಪಾಕಿಸ್ತಾನ ಮತ್ತೊಮ್ಮೆ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದೆ. 8ನೇ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ಮುಂದೆ ಜಯಗಳಿಸಲು ಸಾಧ್ಯವಾಗಲಿಲ್ಲ. ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಒಮ್ಮೆಯೂ ಗೆಲುವು ದಾಖಲಿಸದ ಪಾಕ್ ಈ ಬಾರಿ ತನ್ನ ಸೋಲಿಗೆ ಕಾರಣವನ್ನು ಹಂಚಿಕೊಂಡಿದೆ.

ಪಾಕಿಸ್ತಾನ ಈ ಬಾರಿ ಕಠಿಣ ಸ್ಪರ್ಧೆ ನೀಡಿದರೂ ಸೋಲನ್ನು ಕಂಡಿದೆ. ಆದೆರೆ ಪಾಕ್ ಪ್ರಕಾರ ಈ ಬಾರಿ ಅದರ ಸೋಲಿಗೆ ಕಾರಣ ಮಾಟಮಂತ್ರ ಅಂತೆ. ಪಾಕಿಸ್ತಾನದ ಖ್ಯಾತ ಟಿಕ್‌ಟಾಕರ್ ಹರೀಮ್ ಶಾ (Tiktoker Hareem Shah) ಪ್ರಕಾರ, ಈ ಬಾರಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಫೇರ್ ಪ್ಲೇ ಮೂಲಕ ಅಲ್ಲ, ಬ್ಲ್ಯಾಕ್ ಮ್ಯಾಜಿಕ್ ಮೂಲಕ ಸೋಲಿಸಿದೆ ಎಂದು ಹೇಳಿದ್ದಾರೆ. ಈ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದು ಬೇರೆ ಯಾರೂ ಅಲ್ಲ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಅವರು ಎಂದು ಹರೀಮ್ ಶಾ ಆರೋಪ ಮಾಡಿದ್ದಾರೆ.
ಪಾಕಿಸ್ಥಾನವನ್ನು ಸೋಲಿಸಲು ಜೈ ಶಾ ಬ್ಲಾಕ್ ಮ್ಯಾಜಿಕ್ ಮಾಡಿದ್ದಾನೆ. ಈ ಬಗ್ಗೆ ಐಸಿಸಿಯಿಂದ ತನಿಖೆ ಆಗಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಪಾಕಿಸ್ತಾನದ ಪ್ರಸಿದ್ಧ ಟಿಕ್‌ಟಾಕರ್ ಹರೀಮ್ ಶಾ ಸಾಮಾಜಿಕ ವೆಬ್‌ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಬ್ಲ್ಯಾಕ್ ಮ್ಯಾಜಿಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಐಸಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ತಂತ್ರಿಕರ ಚಿತ್ರವನ್ನು ಸಹ ಹರೀಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ಪೋಸ್ಟ್ ಮಾಡಿ -'ವಿಶ್ವಾಸಾರ್ಹ ಮೂಲಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಪಾಕಿಸ್ತಾನಿ ತಂಡದ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಲು ಕಪ್ಪು ಜಾದೂ ತಜ್ಞ ಮತ್ತು ತಂತ್ರಿಕ ಕಾರ್ತಿಕ್ ಚಕ್ರವರ್ತಿ ಅವರಿಗೆ ಈ ಕೆಲಸವನ್ನು ನೀಡಿದ್ದಾರೆ. ಈ ಬಗ್ಗೆ ಐಸಿಸಿ ತನಿಖೆ ನಡೆಸಬೇಕು. ಇದು ಸ್ವೀಕಾರಾರ್ಹವಲ್ಲ' ಎಂದು ಬರೆದಿದ್ದಾರೆ.
ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮೂರನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ಆಡಿದಾಗ ಪಾಕಿಸ್ತಾನ ತಂಡ ಬಲವಾಗಿ ಮುನ್ನಡೆಯುತ್ತದೆ. ಇದರ ನಂತರ ಬಾಬರ್ ಔಟಾದ ತಕ್ಷಣ, ಮುಂದಿನ 36 ರನ್‌ಗಳ ಒಳಗೆ ಅವರ ಸಂಪೂರ್ಣ ಬ್ಯಾಟಿಂಗ್ ಪ್ರದರ್ಶನ ಕುಸಿಯಿತು ಎಂದು ಹರೀಮ್ ಹೇಳಿದ್ದಾರೆ. ಇದಕ್ಕೆ ಬ್ಲ್ಯಾಕ್ ಮ್ಯಾಜಿಕ್ ಮಾಡಿರುವುದೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಇದರ ಹಿಂದೆ ಭಾರತೀಯ ಬೌಲರ್‌ಗಳ ಕೈಚಳಕ ಮತ್ತು ಅವರ ಆಟದ ಅತ್ಯುತ್ತಮ ಪ್ರದರ್ಶನ ಎಂದು ಹರೀಮ್ ಒಪ್ಪಿಕೊಂಡಿಲ್ಲ. ಅವರು ಇದಕ್ಕೆ ಮಾಟಮಂತ್ರದ ಬಣ್ಣ ಬಡೆದಿದ್ದಾರೆ.
ಪಾಕಿಸ್ತಾನ ತಂಡ ಆರಂಭದಲ್ಲಿ 2 ವಿಕೆಟ್‌ಗೆ 155 ರನ್‌ಗಳಲ್ಲಿ ಗಳಿಸಿತ್ತು. ಇದಾದ ನಂತರ ಪಾಕಿಸ್ತಾನದ ಬ್ಯಾಟಿಂಗ್ ಕೇವಲ 191 ರನ್‌ಗಳಿಗೆ ತೃಪ್ತಿಯಾಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ 2-2 ವಿಕೆಟ್ ಪಡೆದರು.
ರೋಹಿತ್ ಶರ್ಮಾ (86) ಮತ್ತು ಶ್ರೇಯಸ್ ಅಯ್ಯರ್ (53) ಅವರ ಅತ್ಯುತ್ತಮ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ ಪಂದ್ಯವನ್ನು ಗೆದ್ದಿತು. ಭಾರತ ಇದುವರೆಗೆ ಆಡಿದ ಎಲ್ಲಾ 3 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಪಾಕಿಸ್ತಾನ ತಂಡ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಗುರುವಾರ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಪಂದ್ಯವನ್ನು ಆಡಲಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ನಾಲ್ಕನೇ ಪಂದ್ಯವನ್ನು ಆಡಲಿದೆ.












Click it and Unblock the Notifications