RCB ನಾಯಕನ ಸ್ಥಾನ ಹಾಗೂ ಮಿಡ್ಲ್‌ ಆರ್ಡರ್‌ಗೆ ಬಲ ತುಂಬುತ್ತಾರಾ ಮುಂಬೈಕರ್‌?

18ನೇ ಆವೃತ್ತಿಯ ಐಪಿಎಲ್‌ಗೆ ತೆರೆ ಮರೆಯ ಕಸರತ್ತು ಪ್ರಾರಂಭವಾಗಿವೆ. ಈ ನಿಟ್ಟಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸಹ ಭರ್ಜರಿ ಪ್ರಯತ್ನ ನಡೆಸಿದೆ. ಶತಾಯಗತಾಯ ಈ ಬಾರಿ ಟ್ರೋಫಿ ಎತ್ತಿ ಅಭಿಮಾನಿಗಳಿಗೆ ಬೆಸ್ಟ್‌ ಗಿಫ್ಟ್ ನೀಡಲು ಮ್ಯಾನೇಜ್ಮೆಂಟ್‌ ಪ್ಲ್ಯಾನ್ ಮಾಡಿಕೊಂಡಿದೆ.

ಆರ್‌ಸಿಬಿಗೆ ಕಳೆದ ಕೆಲವು ಆವೃತ್ತಿಗಳಲ್ಲಿ ತಲೆ ನೋವಾಗಿದ್ದು, ಮಿಡ್ಲ್ ಆರ್ಡರ್‌ ಸ್ಲಾಟ್‌.. ಈ ಸ್ಥಾನಕ್ಕೆ ಉತ್ತಮ ಆಟಗಾರನ ಹುಡುಕಾಟ ನಡೆದಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಆ ಒಬ್ಬ ಮುಂಬೈ ಇಂಡಿಯನ್ಸ್‌ ಆಟಗಾರನ ಮೇಲೆ ಕಣ್ಣು ನೆಟ್ಟಿದೆ. ಆತ, ತಂಡದ ನಾಯಕತ್ವ ಹಾಗೂ ಮಿಡ್ಲ್‌ ಆರ್ಡರ್‌ಗೆ ಬಲ ತುಂಬಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

Will Suryakumar Yadav strengthen RCB s captaincy and middle order

ಆರ್‌ಸಿಬಿ ನಾಯಕನ ಹುಡುಕಾಟ

ವರದಿಗಳನ್ನು ನಂಬುವುದಾದರೆ ಆರ್‌ಸಿಬಿ ಮುಂದಿನ ಆವೃತ್ತಿ ಐಪಿಎಲ್‌ಗೆ ನೂತನ ನಾಯಕನ ಹುಡುಕಾಟ ನಡೆಸಿದೆ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್‌ ಸಹ ಪ್ಲ್ಯಾನ್ ಮಾಡಿಕೊಂಡಿದೆ. ಅಂದಹಾಗೆ ಫಾಫ್‌ ಡುಪ್ಲೇಸಿಸ್‌ ಅವರನ್ನು ಆರ್‌ಸಿಬಿ ರಿಟೇನ್‌ ಮಾಡಿಕೊಳ್ಳುತ್ತೋ ಇಲ್ಲವೋ ಎಂಬ ಬಗ್ಗೆ ಅನುಮಾನ ಆರಂಭವಾಗಿದೆ. ಹೀಗಾಗಿ ನಾಯಕನ ಸ್ಥಾನಕ್ಕೆ ಉತ್ತಮ ಪ್ಲೇಯರ್‌ ಹುಡುಕಾಟ ನಡೆಸಿದೆ.

ನೂತನ ನಾಯಕನಿಗೆ ಆರ್‌ಸಿಬಿ ಹಾಕುತ್ತಾ ಗಾಳ?

ಶ್ರೀಲಂಕಾ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಟೀಮ್ ಇಂಡಿಯಾ ನಾಯಕತ್ವ ನೀಡಲಾಗುತ್ತದೆ ಎಂಬ ಮಾತಿತ್ತು. ಆದರೆ, ಎಲ್ಲರ ಊಹೆಗೂ ಮೀರಿ ಟಿ20 ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ಗೆ ಪಟ್ಟ ಕಟ್ಟಲಾಯಿತು. ದ್ವೀಪ ರಾಷ್ಟ್ರದಲ್ಲಿ ಸೂರ್ಯ ಮುಂದಾಳತ್ವದ ತಂಡ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು. ದ್ವೀಪ ರಾಷ್ಟ್ರದಲ್ಲಿ ಸೂರ್ಯಕುಮಾರ್‌ ಅವರ ನಾಯಕತ್ವದ ಗುಣಗಳು ಸಹ ಅವಾರಣವಾಗಿವೆ.

Will Suryakumar Yadav strengthen RCB s captaincy and middle order

ಸೂರ್ಯಕುಮಾರ್‌ ಯಾದವ್ ಅವರು ಮುಂಬೈ ಇಂಡಿಯನ್ಸ್‌ ತಂಡದಲ್ಲಿ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದರು. ಆದರೆ ಮ್ಯಾನೇಜ್ಮೆಂಟ್‌ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್‌ನಿಂದ ಟ್ರೆಡ್‌ ಮಾಡುವ ಮೂಲಕ ಅಚ್ಚರಿಯ ನಡೆ ಕೈಗೊಂಡಿತು. ಅಲ್ಲದೆ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ, ಹಾರ್ದಿಕ್‌ಗೆ ಪಟ್ಟ ಕಟ್ಟಲಾಯಿತು. ಇದರಿಂದ ರೋಹಿತ್‌ ಶರ್ಮಾ, ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಸೂರ್ಯ, ಜಸ್ಪ್ರಿತ್‌ ಬುಮ್ರಾ ಅವರಿಗೆ ಅಸಮಾಧಾನವಾಗಿತ್ತು.

ಆರ್‌ಸಿಬಿ ಜೆರ್ಸಿಯಲ್ಲಿ ಜೂನಿಯರ್ ಎಬಿಡಿ

ಇನ್ನು ಫಾಫ್‌ ಡುಪ್ಲೇಸಿಸ್‌ ಅವರಿಗೆ ಈಗ 40 ವರ್ಷ. ಅವರ ಫಿಟ್ನೆಸ್‌ ಬಗ್ಗೆ ಪ್ರಶ್ನೆ ಇಲ್ಲವೇ ಇಲ್ಲ. ಆದರೆ ಅವರು ಇನ್ನು ಹೆಚ್ಚು ದಿನ ಕ್ರಿಕೆಟ್ ಆಡಲು ಆಗದು. ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಆರ್‌ಸಿಬಿ ಸೂರ್ಯಕುಮಾರ್‌ ಯಾದವ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಮೂಲಕ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಸಿದ್ಧತೆ ನಡೆಸಿದೆ.

Will Suryakumar Yadav strengthen RCB s captaincy and middle order

ಸೂರ್ಯ ಒಂದು ವೇಳೆ ಆರ್‌ಸಿಬಿಗೆ ಬಂದಿದ್ದೇ ಆದಲ್ಲಿ, ನಾಯಕ ಪ್ಲಸ್‌ ಮಿಡ್ಲ್‌ ಆರ್ಡರ್‌ ಸ್ಲಾಟ್‌ಗೆ ನ್ಯಾಯ ಒದಗಿಸಬಲ್ಲ ಪ್ಲೇಯರ್‌ ಒಬ್ಬ ಸಿಕ್ಕಂತೆ ಆಗುತ್ತದೆ. ಅಲ್ಲದೆ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಬ್ಯಾಟರ್‌ ತಂಡಕ್ಕೆ ಎಂಟ್ರಿ ನೀಡಿದಂತೆ ಆಗುತ್ತದೆ. ಅಭಿಮಾನಿಗಳ ಈ ಆಸೆ ಈಡೇರುತ್ತಾ ಕಾದು ನೋಡಬೇಕಿದೆ.

ಟಿ20 ಕ್ರಿಕೆಟ್‌ನಲ್ಲಿ ಸುರ್ಯಕುಮಾರ್‌ ಯಾದವ್‌ ತಮ್ಮದೇ ಛಾಪು ಮೂಡಿಸಿದ ಆಟಗಾರ. ಒಂದೇ ವೇಳೆ ಇವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರಿಕೊಂಡಿದ್ದೇ ಆದಲ್ಲಿ ಗೆಲುವಿನ ಕನಸು ನನಸಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+