Gautam Gambhir: ಕೊಹ್ಲಿ, ರೋಹಿತ್ ನಿವೃತ್ತಿಗೆ ಗಂಭೀರ್ ಕಾರಣ?
17 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ ಕ್ರಿಕೆಟ್ ಅಭಿಮಾನಿಗಳು ಕಪ್ ಗೆದ್ದ ಖುಷಿಯಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ವಿಶ್ವಕಪ್ ಗೆಲುವಿನ ಖುಷಿಯಲ್ಲಿದ್ದ ಈ ಸುದ್ದಿ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ಉಂಟು ಮಾಡಿದೆ. ಆದರೂ ವಿಶ್ವಕಪ್ ಗೆದ್ದ ಬಳಿಕ ಇಬ್ಬರೂ ವಿದಾಯ ಹೇಳಿದ್ದು ಸರಿಯಾಗಿದೆ ಎನ್ನುವ ವಾದ ಕೂಡ ಕೇಳಿಬಂದಿದೆ.

ಯುವ ಆಟಗಾರರಿಗೆ ಅವಕಾಶ ಸಿಗಬೇಕು ಎಂದು ಟಿ20 ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದಾಗಿ ವಿರಾಟ್ ಕೊಹ್ಲಿ ಹೇಳಿದ್ದರು. ಆದರೆ ಇದೇ ನಿಜವಾದ ಕಾರಣವಾ? ಅಥವಾ ಇಬ್ಬರೂ ದಿಢೀರ್ ನಿವೃತ್ತಿ ಘೋಷಿಸಿದ್ದರ ಹಿಂದೆ ಬೇರೆ ಏನಾದರೂ ಕಾರಣ ಇದೆಯಾ ಎನ್ನುವ ಚರ್ಚೆ ಶುರುವಾಗಿದೆ.
ಗೌತಮ್ ಗಂಭೀರ್ ಕಾರಣ?
ಹಲವು ಅಭಿಮಾನಿಗಳು ರೋಹಿತ್ ಮತ್ತು ವಿರಾಟ್ ನಿವೃತ್ತಿಯಾಗಲು ಗಂಭೀರ್ ಕಾರಣ ಎನ್ನುತ್ತಿದ್ದಾರೆ. ಗಂಭೀರ್ ಭಾರತ ತಂಡದ ಮುಂದಿನ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಗಂಭೀರ್ ಬಂದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ.
Rohit Sharma: "I was not in the mood to retire from T20I, but the situation has arisen, so I decided to do so."
— Jod Insane (@jod_insane) June 30, 2024
Is he targeting Gambhir? Perhaps he is thinking of building a new team. He might have thought of retiring on his own. pic.twitter.com/bD47G9UXUV
ಯುವ ಆಟಗಾರರಿಗೆ ಅವಕಾಶ ಸಿಗಲಿ ಎಂದು ಕೊಹ್ಲಿ ಮತ್ತು ರೋಹಿತ್‌ರನ್ನು ತಂಡದಿಂದ ಕೈಬಿಟ್ಟರೂ ಅಚ್ಚರಿ ಇಲ್ಲ ಎನ್ನಲಾಗಿತ್ತು. ಇದೇ ಕಾರಣಕ್ಕೆ ಇಬ್ಬರು ದಿಗ್ಗಜರೂ, ಗೆಲುವಿನ ಖುಷಿಯಲ್ಲಿದ್ದಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ವಾದಿಸಲಾಗುತ್ತಿದೆ.
ಗಂಭೀರ್ ಹೇಳಿದ್ದೇನು?
ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಶ್ವಕಪ್ ಗೆಲುವಿನ ಬಳಿಕ ನಿವೃತ್ತಿ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.
ಇಬ್ಬರೂ ವಿಶ್ವಕಪ್ ಗೆಲುವಿನೊಂದಿಗೆ ನಿವೃತ್ತರಾಗಿದ್ದಾರೆ ಮತ್ತು ಇದು ಯಾವುದೇ ಸ್ಕ್ರಿಪ್ಟ್‌ಗಿಂತ ಉತ್ತಮವಾಗಿದೆ. ಇಬ್ಬರೂ ಆಟಗಾರರು ಶ್ರೇಷ್ಠರು. ಅವರು ಭಾರತೀಯ ಕ್ರಿಕೆಟ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ಅವರಿಗೆ ಅಭಿನಂದನೆಗಳು ಮತ್ತು ಅವರಿಗೆ ಶುಭ ಹಾರೈಸುತ್ತೇನೆ ಎಂದು ಗಂಭೀರ್ ತಿಳಿಸಿದ್ದಾರೆ.
ಇಬ್ಬರು ಆಟಗಾರರು ಕೂಡ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಅಮೋಘ ಪ್ರದರ್ಶನ ಮುಂದುವರೆಸಲಿ ಎಂದು ಗಂಭೀರ್ ಹೇಳಿದ್ದಾರೆ. ಟಿ20 ಮಾದರಿಯಿಂದ ನಿವೃತ್ತಿಯಾದರೂ, ಟೆಸ್ಟ್ ಮತ್ತು ಏಕದಿನ ಕ್ರಿಕಟ್‌ನಲ್ಲಿ ಅವರು ದೇಶ ಮತ್ತು ತಂಡಕ್ಕೆ ಕೊಡುಗೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನೇ ಇದ್ದರೂ, ಭಾರತೀಯ ಟಿ20 ಕ್ರಿಕೆಟ್‌ಗೆ ಕೊಹ್ಲಿ ಮತ್ತು ರೋಹಿತ್ ಅವರ ಕೊಡುಗೆ ಮರೆಯಲಾಗದು. ಇಬ್ಬರು ಈಗ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವತ್ತ ಗುರಿ ಹೊಂದಿದ್ದಾರೆ. ಇವರಿಬ್ಬರೂ ಭಾರತಕ್ಕೆ ಮತ್ತಷ್ಟು ಐಸಿಸಿ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications