RCB: ಆರ್‌ಸಿಬಿ ಸೇರ್ತಾರ ಕರ್ನಾಟಕದ ಸ್ಫೋಟಕ ಬ್ಯಾಟರ್?

ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2024 ಪಂದ್ಯಾವಳಿಯಲ್ಲಿ ಹಲವು ಆಟಗರಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆರ್ ಸಿಬಿ ತಂಡದ ಆಟಗಾರ ಮನೋಜ್ ಭಾಂಡಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಆಡಿರುವ 2 ಪಂದ್ಯಗಳಲ್ಲಿ 100 ರನ್ ಕಲೆಹಾಕಿದ್ದಾರೆ. ಕಳೆದ ಎರಡು ವರ್ಷದಿಂದ ಆರ್ ಸಿಬಿ ತಂಡದಲ್ಲಿದ್ದರೂ ಅವರಿಗೆ ಒಮ್ಮೆಯೂ ಕೂಡ ಅವಕಾಶ ಸಿಕ್ಕಿಲ್ಲ.

ಮನೋಜ್ ಭಾಂಡಗೆ ಅವರನ್ನು ಮೆಗಾಹರಾಜಿನಲ್ಲಿ ಆರ್ ಸಿಬಿ ಮತ್ತೆ ಖರೀದಿ ಮಾಡಿ, ಅವರಿಗೆ ಅವಕಾಶ ಕೊಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಕೂಡ ಆರ್ ಸಿಬಿಗೆ ಬರುತ್ತಾರಾ ಎನ್ನುವ ಪ್ರಶ್ನೆ ಎದುರಾಗಿದೆ.

Will Abhinav Manohar Join RCB in IPL 2025

ಅಭಿನವ್ ಮನೋಹರ್, ಕರ್ನಾಟಕದ ಸ್ಫೋಟಕ ಬ್ಯಾಟರ್. ಮಧ್ಯಮ ಕ್ರಮಾಂಕದಲ್ಲಿ ಆಡುವ ಅಭಿನವ್ ಮನೋಹರ್ ಈಗಾಗಲೇ ಗುಜರಾತ್ ಟೈಟಾನ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಎರಡು ವರ್ಷಗಳಲ್ಲಿ ಅವಕಾಶ ಸಿಕ್ಕಾಗೆಲ್ಲಾ ಅವರು ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಈ ಬಾರಿ ಅವರಿಗೆ ಹೆಚ್ಚಿನ ಅವಕಾಶ ಸಿಗದೇ ಇದ್ದರೂ, ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇದುವರೆಗೂ ಆಡಿರುವ 2 ಪಂದ್ಯಗಳಲ್ಲಿ 136 ರನ್ ಸಿಡಿಸಿದ್ದಾರೆ. 215.87 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುವ ಮೂಲಕ ಮಿಂಚಿದ್ದಾರೆ. ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, 11 ಸಿಕ್ಸರ್ ಸೇರಿವೆ. ಮಹಾರಾಜ ಕಪ್‌ನಲ್ಲಿ ಅವರು ಶಿವಮೊಗ್ಗ ಲಯನ್ಸ್ ಪರವಾಗಿ ಆಡುತ್ತಾರೆ.

ಶನಿವಾರ ನಡೆದ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಕೇವಲ 34 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದ್ದಾರೆ. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ 9 ಭರ್ಜರಿ ಸಿಕ್ಸರ್ ಕೂಡ ಸೇರಿವೆ.

ಆರ್ ಸಿಬಿ ತಂಡಕ್ಕೆ ಬರ್ತಾರ ಅಭಿನವ್?

2025ರ ಐಪಿಎಲ್‌ಗೆ ಮೊದಲು ಮೆಗಾ ಹರಾಜು ಇರುವ ಕಾರಣ ಗುಜರಾತ್ ಟೈಟಾನ್ಸ್ ಅಭಿನವ್ ಮನೋಹರ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಮೆಗಾ ಹರಾಜಿನಲ್ಲಿ ಆರ್ ಸಿಬಿ ಅಭಿನವ್ ಮನೋಹರ್ ಅವರನ್ನು ಖರೀದಿ ಮಾಡಿದರೆ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸದಂತಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಅವರು ಆರ್ ಸಿಬಿ ಬ್ಯಾಟಿಂಗ್ ಪಡೆಗೆ ಹೆಚ್ಚಿನ ಬಲ ತರುತ್ತಾರೆ. ಮುಖ್ಯವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಅನುಭವ ತಂಡಕ್ಕೆ ವರದಾನವಾಗಲಿದೆ. ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ಕಾರಣ, ಸ್ಥಳೀಯ ಆಟಗಾರರಿಗೆ ಈ ಬಾರಿ ಮಣೆ ಹಾಕಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+