WI vs Aus: ವಿಕೆಟ್ ಪಡೆದು ವಿಚಿತ್ರವಾಗಿ ಸಂಭ್ರಮಿಸಿದ ವೆಸ್ಟ್ ಇಂಡೀಸ್ ಬೌಲರ್: ವಿಡಿಯೋ ವೈರಲ್
ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೆವಿನ್ ಸಿಂಕ್ಲೇರ್ ತಮ್ಮ ಮೊದಲ ಟೆಸ್ಟ್ ವಿಕೆಟ್ ಪಡೆದ ನಂತರ ತಮ್ಮ ಪ್ರಭಾವಶಾಲಿ ಕಾರ್ಟ್‌ವೀಲ್ ಸಂಭ್ರಮದಿಂದ ಎಲ್ಲರನ್ನು ಬೆರಗುಗೊಳಿಸಿದರು.
ಸಿಂಕ್ಲೇರ್ ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆದರು, ಅಲಿಕ್ ಅಥಾನಾಜೆ ಅವರು ಮೊದಲ ಸ್ಲಿಪ್‌ನಲ್ಲಿ ಕ್ಯಾಚ್ ಅನ್ನು ಹಿಡಯುವ ಮೂಲಕ ಖವಾಜಾರನ್ನು ಪೆವಿಲಿಯನ್‌ಗೆ ವಾಪಸ್ ಕಳಿಸಿದರು. ಕೆವಿನ್ ಸಿಂಕ್ಲೇರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಸಂಭ್ರಮಿಸಿದರು.

ಸಾಧನೆಯನ್ನು ಆಚರಿಸಲು ಅವನು ಎರಡು ಕಾರ್ಟ್‌ವೀಲ್ ಬ್ಯಾಕ್-ಫ್ಲಿಪ್‌ಗಳನ್ನು ಪೂರ್ಣಗೊಳಿಸಿದರು. ಅವರ ಸಂಭ್ರಮಾಚರಣೆ ನೋಡಿ ಕಾಮೆಂಟೇಟರ್‌ಗಳು ಮಂತ್ರಮುಗ್ಧರಾಗಿದ್ದರು ಮತ್ತು ಸಿಂಕ್ಲೇರ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಅವರ ಅಥ್ಲೆಟಿಸಿಸಂಗಾಗಿ ಹೊಗಳಿದ್ದಾರೆ.
Cartwheel celebration by Kevin Sinclair after taking his first Test wicket. 🔥🤯pic.twitter.com/wftfxUAtMa
— Johns. (@CricCrazyJohns) January 26, 2024
ಶುಕ್ರವಾರ ಬ್ರಿಸ್ಬೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಎರಡನೇ ದಿನದಾಟದ ಕೊನೆಯಲ್ಲಿ ಆಸ್ಟ್ರೇಲಿಯಾವು ಟಗೆನರೈನ್ ಚಂದ್ರಪಾಲ್ ಅವರ ವಿಕೆಟ್ ಪಡೆದುಕೊಂಡರು.
ರೋಚಕ ಘಟ್ಟದತ್ತ ಟೆಸ್ಟ್
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್ ಆದ ಬಳಿಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡು ಅಚ್ಚರಿ ಮೂಡಿಸಿತು. ಉಸ್ಮಾನ್ ಖವಾಜ 75 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 25 ರನ್ ಗಳಿಸಿದರು. ಅಲೆಕ್ಸ್ ಕ್ಯಾರಿ 65 ಮತ್ತು ನಾಯಕ ಪಾಟ್ ಕಮ್ಮಿನ್ಸ್ 64 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ನೆರವಾದರು.
ಕೆಮರ್ ರೋಚ್ 3 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ 4 ವಿಕೆಟ್ ಪಡೆದರು. ಶಮರ್ ಜೋಸೆಫ್ ಮತ್ತು ಕೆವಿನ್ ಸಿಂಚ್ಲೆರ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 13 ರನ್ ಗಳಿಸಿದೆ. ಕೊನೆಯ ಓವರ್‌ನಲ್ಲಿ ಜೋಶ್ ಹೇಜಲ್‌ವುಡ್ ಚಂದ್ರಪಾಲ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಸದ್ಯ ವೆಸ್ಟ್ ಇಂಡೀಸ್ 35 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಿದರೆ ಈ ಪಂದ್ಯವನ್ನು ಗೆಲ್ಲುವ ಬಗ್ಗೆ ರಣತಂತ್ರ ರೂಪಿಸಬಹುದು.












Click it and Unblock the Notifications