• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಡೆದ ಹೃದಯ'ಗಳ ಬಗ್ಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೆಸೇಜ್!

|
Google Oneindia Kannada News

ನವದೆಹಲಿ, ನವೆಂಬರ್ 08: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ದಾಂಪತ್ಯದಲ್ಲಿ ಬಿರುಕು ಮೂಡಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹಲ್-ಚಲ್ ಶುರು ಮಾಡಿದೆ.

ಪತಿಯೊಂದಿಗಿನ ಸಂಬಂಧ ಹಳಸಿರುವ ಕುರಿತು ಸುದ್ದಿಗಳು ಹರಿದಾಡುತ್ತಿರುವುದರ ಮಧ್ಯೆ ಸಾನಿಯಾ ಮಿರ್ಜಾ ಮಾಡಿರುವ ಪೋಸ್ಟ್, ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಟೆನ್ಷನ್ ಕ್ರಿಯೇಟ್ ಮಾಡಿದೆ.

ಈ ದಂಪತಿಯ ಪುತ್ರ ಇಜಾನ್ ಮಿರ್ಜಾ ಮಲಿಕ್ ಜೊತೆಗಿನ ಪೋಟೋಗಳ ಜೊತೆಗೆ ಬರೆದಿರುವ ಅದೊಂದು ಸಾಲು ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕುವಂತಿದೆ. ದಾಂಪತ್ಯ ಬದುಕಿನ ಕೊಂಡಿ ಇನ್ನೇನು ಕಳಚಿ ಹೋಯ್ತಾ ಎಂಬ ಅನುಮಾನವನ್ನು ಹೆಚ್ಚಿಸುತ್ತಿದೆ. ಹಾಗಿದ್ದಲ್ಲಿ ಸಾನಿಯಾ ಮಿರ್ಜಾ ಬರೆದುಕೊಂಡಿರುವ ಆ 'ಒಡೆದ ಹೃದಯಗಳ' ಕುರಿತಾದ ಸಾಲಿನ ಅರ್ಥವೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಸಾನಿಯಾ ಮೀರ್ಜಾ ಬರಹ ಹಿಂದಿನ ಸೀಕ್ರೆಟ್ ಏನು?

ಸಾನಿಯಾ ಮೀರ್ಜಾ ಬರಹ ಹಿಂದಿನ ಸೀಕ್ರೆಟ್ ಏನು?

ಭಾರತೀಯ ಟೆನಿಸ್ ತಾರೆ ಹಂಚಿಕೊಂಡ ರಹಸ್ಯ ಸಂದೇಶಗಳು ಹಲವು ಸುಳಿವುಗಳನ್ನು ನೀಡುತ್ತಿವೆ. ಅವುಗಳಲ್ಲಿ ತಮ್ಮ ಪುತ್ರನೊಂದಿಗೆ ಅವರು ಕ್ಲಿಕ್ಕಿಸಿಕೊಂಡಿರುವ ಫೋಟೋ ಸಹ ಸೇರಿಕೊಂಡಿದೆ. ಈ ಫೋಟೋವನ್ನು ಪೋಸ್ಟ್ ಮಾಡಿರುವ ಸಾನಿಯಾ ಮಿರ್ಜಾ, ಅದರ ಕೆಳಗೆ "ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಕ್ಷಣಗಳು" ಎಂದು ಬರೆದಿದ್ದಾರೆ. ಇದರ ಅರ್ಥವೇನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯೂ ಇಲ್ಲ.

ಒಡೆದ ಹೃದಯಗಳ ಕುರಿತು ಸಾನಿಯಾ ಮಿರ್ಜಾ ಟ್ವೀಟ್

ಒಡೆದ ಹೃದಯಗಳ ಕುರಿತು ಸಾನಿಯಾ ಮಿರ್ಜಾ ಟ್ವೀಟ್

"ಒಂದು ಬಾರಿ ಒಡೆದ ಹೃದಯಗಳು ಎಲ್ಲಿಗೆ ತಾನೇ ಹೋಗಲು ಸಾಧ್ಯ. ಅದು ಅಲ್ಲಾನ ಹುಡುಕಾಟದ ಹೊರತಾಗಿ," ಈ ರೀತಿ ಬರೆದುಕೊಂಡಿರುವ ಸಾಲಿನಲ್ಲಿ ಸಾನಿಯಾ ಮಿರ್ಜಾ ಲೈಫಿನಲ್ಲಿ ಏನೋ ಮಿಸ್ ಹೊಡೆಯುತ್ತಿರುವ ಕುರಿತು ಸುಳಿವು ನೀಡುತ್ತದೆ. ಅದು ದಾಂಪತ್ಯ ಬದುಕು ಆಗಿರಬಹುದು ಅಥವಾ ಬೇರೆ ಇನ್ಯಾವುದ್ದೇ ಸಮಸ್ಯೆ ಆಗಿರಬಹದು. ಫೈನಲಿ ಟೆನಿಸ್ ಸ್ಟಾರ್ ಲೈಫ್‌ನಲ್ಲಿ ಸಮಸ್ಯೆ ಇರುವುದಂತೂ ನಿಶ್ಚಿತ ಎಂಬುದನ್ನು ಈ ಪೋಸ್ಟ್ ಗಳು ಸಾರಿ ಹೇಳುತ್ತಿವೆ. ಇದರ ಮಧ್ಯೆ ಮಾಡಿರುವ ಇನ್ನೊಂದು ಸಂದೇಶವು ಭಾವನಾತ್ಮಕ ಶೈಲಿಯನ್ನು ಎತ್ತಿ ತೋರಿಸುತ್ತಿದೆ.

ಮಗನ ಕುರಿತಾಗಿ ಸಾನಿಯಾ ಮಿರ್ಜಾ ಭಾವನಾತ್ಮಕ ಮೆಸೇಜ್

ಮಗನ ಕುರಿತಾಗಿ ಸಾನಿಯಾ ಮಿರ್ಜಾ ಭಾವನಾತ್ಮಕ ಮೆಸೇಜ್

"ನಾನು ಈ ಜೀವನದಲ್ಲಿ ಅನೇಕ ಸಂದರ್ಭಗಳನ್ನು ನೋಡಿದ್ದೇನೆ, ಆದರೆ ಅದಲ್ಲಿ ನಿಮ್ಮ ಅಮ್ಮ ಎನಿಸಿಕೊಂಡಿರುವುದೇ ಅಚ್ಚುಮೆಚ್ಚಿನದ್ದಾಗಿದೆ. ನೀನು ಜನಿಸಿದ ದಿನವೇ ನನ್ನ ಬದುಕಿನ ಅತ್ಯುತ್ತಮ ದಿನವಾಗಿದೆ. ನೀನು ಅತ್ಯಂತ ಕರುಣಾಮಯಿ ಮತ್ತು ಅತ್ಯಂತ ಅಮೂಲ್ಯವಾದ ಹುಡುಗನಾಗಿ ಬೆಳೆಯುತ್ತಿದ್ದು, ನಿನ್ನ ಅಮ್ಮನಾಗಲು ನಾನು ಹೆಮ್ಮೆಪಡುತ್ತೇನೆ," ಎಂದು ಬರೆದುಕೊಂಡಿದ್ದಾರೆ.

ಸಾನಿಯಾ ಮಿರ್ಜಾ-ಶೋಯೆಬ್ ಪ್ರತಿಕ್ರಿಯೆ ನೀಡಿಲ್ಲ

ಸಾನಿಯಾ ಮಿರ್ಜಾ-ಶೋಯೆಬ್ ಪ್ರತಿಕ್ರಿಯೆ ನೀಡಿಲ್ಲ

ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿಸುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಅದಾಗ್ಯೂ, ಈ ದಂಪತಿಯು ಯಾವುದೇ ರೀತಿ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ತಮ್ಮ ದಾಂಪತ್ಯದ ಜೀವನ ಅಥವಾ ಬಿರುಕಿನ ಕುರಿತು ಸಾನಿಯಾ ಮಿರ್ಜಾ ಆಗಲಿ, ಶೋಯೆಬ್ ಮಲ್ಲಿಕ್ ಆಗಲಿ ಎಲ್ಲಿಯೂ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎನ್ನುವುದೇ ವಿಶೇಷ.

ಪುತ್ರನ ಬರ್ತ್ ಡೇಗಾಗಿ ದುಬೈಗೆ ಹಾರಿದ್ದ ದಂಪತಿ

ಪುತ್ರನ ಬರ್ತ್ ಡೇಗಾಗಿ ದುಬೈಗೆ ಹಾರಿದ್ದ ದಂಪತಿ

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ಏಪ್ರಿಲ್ ತಿಂಗಳಿನಲ್ಲಿ ವಿವಾಹವಾದರು. ಅವರಿಗೆ ನಾಲ್ಕು ವರ್ಷದ ಇಜಾನ್ ಎಂಬ ಪುತ್ರನಿದ್ದಾನೆ. ಅವರ ಹುಟ್ಟುಹಬ್ಬವನ್ನು ಆಚರಿಸಲು ದಂಪತಿಗಳು ಇತ್ತೀಚೆಗೆ ದುಬೈಗೆ ಪ್ರವಾಸ ತೆರಳಿದ್ದರು. ಶೋಯೆಬ್ ಮಲಿಕ್ ತಮ್ಮ ಪುತ್ರನ ಹುಟ್ಟುಹಬ್ಬದ ಸಂಭ್ರಮದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

English summary
''Where do broken hearts go, To find Allah' - Indian tennis player Sania Mirza shares cryptic post amid separation rumours with Shoaib Malik. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X