ವಿಕೆಟ್ ಕೀಪಿಂಗ್ ಬೇಡ.. ಬ್ಯಾಟಿಂಗ್‌ ಮೇಲಷ್ಟೇ ಗಮನಹರಿಸು: ಜೈಸ್ವಾಲ್‌ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಲಹೆ

Wasim Jaffer: ಭಾರತೀಯ ಟೆಸ್ಟ್ ಕ್ರಿಕೆಟ್‌ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ವಿಕೆಟ್‌ ಕೀಪಿಂಗ್ ಅನ್ನು ಕಲಿಯುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದಕ್ಕೆ ಮಾಜಿ ಕ್ರಿಕೆಟರ್ ವಾಸಿಮ್ ಜಾಫರ್ ಅಚ್ಚರಿ ವ್ಯಕ್ತಪಡಿಸಿದ್ದು, ಹೊಸ ಪ್ರಯೋಗಗಳಿಗೆ ಇಳಿಯುವ ಬದಲು ತಮ್ಮ ಬ್ಯಾಟಿಂಗ್ ಮೇಲಷ್ಟೇ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.

24 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು 2026-27ರ ದೇಶೀಯ ಕ್ರಿಕೆಟ್ ಸೀಸನ್‌ಗೆ ಮುನ್ನ ಮುಂಬೈ ರಣಜಿ ತಂಡದ ತರಬೇತಿ ಶಿಬಿರದಲ್ಲಿ ವಿಕೆಟ್‌ ಕೀಪಿಂಗ್ ಗ್ಲೌಸ್ ಧರಿಸಿ ಅಭ್ಯಾಸ ನಡೆಸಿದ್ದರು. ಮುಂಬೈ ತಂಡದ ನಾಯಕ ಸಿದ್ದೇಶ್ ಲಾಡ್ ಈ ಕುರಿತು ಮಾತನಾಡಿದ್ದಾರೆ.

Wasim Jaffer Advises Yashasvi Jaiswal to Focus on Batting Instead of Wicketkeeping in Test Team

ಮುಂಬೈ ತಂಡದ ನಾಯಕ ಹೇಳಿದ್ದೇನು?

'ಜೈಸ್ವಾಲ್ ಮುಂದಿನ ದಿನಗಳಲ್ಲಿ ಮುಂಬೈ ಅಥವಾ ಭಾರತ ತಂಡಕ್ಕೆ ಹೆಚ್ಚುವರಿ ವಿಕೆಟ್‌ ಕೀಪರ್ ಆಗಿ ಆಯ್ಕೆಯಾಗಲು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದಾರೆ,' ಎಂದು ಸಿದ್ದೇಶ್ ಲಾಡ್ ತಿಳಿಸಿದ್ದಾರೆ. ಅಲ್ಲದೆ, ಈಗಾಗಲೇ ಪಂದ್ಯವೊಂದರಲ್ಲಿ ಜೈಸ್ವಾಲ್ ಸುಮಾರು 10 ಓವರ್‌ಗಳ ಕಾಲ ವಿಕೆಟ್‌ ಕೀಪಿಂಗ್ ಕೂಡ ಮಾಡಿ ಗಮನ ಸೆಳೆದಿದ್ದಾರೆ.

ಜೈಸ್ವಾಲ್‌ಗೆ ವಾಸಿಮ್ ಜಾಫರ್ ಮಹತ್ವದ ಸಲಹೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ವಾಸಿಮ್ ಜಾಫರ್ ಅವರು, 'ಜೈಸ್ವಾಲ್ ನಿರ್ಧಾರವನ್ನು ಖಂಡಿತವಾಗಿಯೂ ಬೆಂಬಲಿಸಲು ಸಾಧ್ಯವಿಲ್ಲ. ವಿಕೆಟ್‌ ಕೀಪಿಂಗ್ ಎಂಬುದು ಅತ್ಯಂತ ಕಠಿಣದ ಕೆಲಸ. ಬಾಲ್ಯದಿಂದಲೇ ಅದನ್ನು ಅಭ್ಯಾಸ ಮಾಡಬೇಕು. ಈ ಹಂತದಲ್ಲಿ ಸುಲಭವಲ್ಲ, ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣವಾದ ಕೆಲಸ ಅದು,' ಎಂದಿದ್ದಾರೆ.

'ಜೈಸ್ವಾಲ್‌ಗೆ ವಿಕೆಟ್‌ ಕೀಪಿಂಗ್ ಅವಕಾಶ ಸಿಗುವುದು ಕಷ್ಟ'

'ಜೈಸ್ವಾಲ್ ಈಗಾಗಲೇ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಕದಿನ ಹಾಗೂ ಟಿ20 ತಂಡಗಳಲ್ಲಿ ನಿಯಮಿತ ಸ್ಥಾನ ಪಡೆಯಲು ಅವರು ಕೀಪಿಂಗ್ ಕೌಶಲ್ಯ ಬೆಳೆಸಿಕೊಳ್ಳಲು ತರಾತುರಿಪಡುತ್ತಿರುವಂತೆ ಕಾಣುತ್ತಿದೆ. ಒಂದು ವೇಳೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಕೀಪರ್-ಬ್ಯಾಟರ್ ಆಗಿ ಜಾಗ ಪಡೆಯಲು ಬಯಸಿದರೂ, ಈಗಾಗಲೇ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಪರಿಣಿತರಿದ್ದಾರೆ. ಹೀಗಿರುವಾಗ ಜೈಸ್ವಾಲ್‌ಗೆ ಈ ಅವಕಾಶ ಸಿಗುವುದು ಕಷ್ಟ,' ಅಂತಾ ಹೇಳಿದ್ದಾರೆ.

ಬ್ಯಾಟಿಂಗ್ ಮೇಲಷ್ಟೇ ಗಮನಹರಿಸಲು ಸಲಹೆ

ವಿಕೆಟ್‌ ಕೀಪಿಂಗ್‌ನಂತಹ ಹೊಸ ಮತ್ತು ಕಠಿಣ ಸವಾಲಿಗೆ ಕೈಹಾಕಿ ತಮ್ಮ ಮುಖ್ಯ ಗುರಿಯನ್ನು ಹಾದಿತಪ್ಪಿಸುವ ಬದಲು, ಮುಂಬರುವ ರಣಜಿ ಟ್ರೋಫಿ ಹಾಗೂ ನ್ಯೂಜಿಲೆಂಡ್ ಪ್ರವಾಸಕ್ಕೆ ಮುನ್ನ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವತ್ತ ಜೈಸ್ವಾಲ್ ಗಮನಹರಿಸಬೇಕು ಎಂದು ಜಾಫರ್ ಮಹತ್ವದ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಟೀಮ್ ಇಂಡಿಯಾದಲ್ಲಿ ಕೀಪರ್‌ಗಳ ಸಂಖ್ಯೆ ಜಾಸ್ತಿ ಇದೆ. ಆದ್ದರಿಂದ ಜೈಸ್ವಾಲ್‌ ಬರೀ ಬ್ಯಾಟಿಂಗ್‌ ಕಡೆಗೆ ಗಮನಹರಿಸುವುದು ಒಳಿತು ಎಂಬ ಅರ್ಥದಲ್ಲಿ ವಾಸಿಮ್ ಜಾಫರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+