Virat Kohli: ಏಳಿ.. ಎದ್ದೇಳಿ ವಿರಾಟ್ ಕೊಹ್ಲಿ... ಪಾಕಿಸ್ತಾನದ ಮಾಜಿ ಸ್ಟಾರ್ ಆಟಗಾರ ಕೊಟ್ಟ ಸಲಹೆ ಏನು?
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಕಿಂಗ್ ಮಾತ್ರವಲ್ಲ, ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ರಾಯಭಾರಿ ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ ಆಟ ನೋಡಿ ನೂರಾರು ಕೋಟಿ ಫ್ಯಾನ್ಸ್ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದಾರೆ. ಹೀಗಿದ್ದಾಗ ಕಳೆದ 1 ವರ್ಷದಿಂದ ಸತತವಾಗಿ ವಿರಾಟ್ ಕೊಹ್ಲಿ ಹಿಂದುಳಿಯುತ್ತಿದ್ದು, ಭಾರತೀಯ ಕ್ರಿಕೆಟ್ ತಂಡದಲ್ಲಿ ಈ ಬಗ್ಗೆ ಚಿಂತೆ ಶುರುವಾಗಿದೆ. ಹೀಗೆ ಪರಿಸ್ಥಿತಿ ಬಿಗಡಾಯಿಸಿರುವ ಸಮಯದಲ್ಲೇ ಪಾಕ್ ಮಾಜಿ ಸ್ಟಾರ್ ಆಟಗಾರ ಸಲಹೆ ಒಂದನ್ನ ಕೊಟ್ಟಿದ್ದಾರೆ!
ಭಾರತೀಯ ಕ್ರಿಕೆಟ್ ಸ್ವರೂಪ ಬದಲಾಗುತ್ತಿದೆ, ಆಧುನಿಕ ಕಾಲಕ್ಕೆ ತಕ್ಕಂತೆ ಆಟ ಆಡಬೇಕು. ಆಟ ಆಡದೇ ಇದ್ದರೆ ತಂಡದಿಂದ ಗೇಟ್‌ಪಾಸ್ ಗ್ಯಾರಂಟಿ ಅಂತಾ ಹೇಳಲಾಗುತ್ತಿದೆ. ಇಂತಹ ಸಮಯದಲ್ಲಿ ವಿರಾಟ್ ಕೊಹ್ಲಿ ಸರಿಯಾಗಿ ಆಡುತ್ತಿಲ್ಲ, ಅವರನ್ನು ತಂಡದಿಂದ ಹೊರಗಡೆ ಹಾಕಬೇಕು ಎಂಬ ಒತ್ತಡ ಜಾಸ್ತಿಯಾಗುತ್ತಿದೆ. ಇಷ್ಟೆಲ್ಲದರ ನಡುವೆ ವಿರಾಟ್ ಕೊಹ್ಲಿಯನ್ನು ಎಚ್ಚರಿಸಬೇಕು ಅಂದ್ರೆ ಏನು ಮಾಡಬೇಕು? ಅನ್ನೋದಕ್ಕೆ ಪಾಕಿಸ್ತಾನದ ಮಾಜಿ ಆಟಗಾರ ಈ ರೀತಿ ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯ ಏನು?
ಕಿಂಗ್ ಅನ್ನೋ ಬಿರುದು ಪಡೆದಿರುವ ವಿರಾಟ್ ಕೊಹ್ಲಿ ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಎದುರಿಸಬೇಕಿದೆ. ಹೀಗಿದ್ದಾಗ, ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್‌ರ ಆಟ ನೋಡಿ ಅಭಿಮಾನಿಗಳು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ. ಇಂತಹ ಸಮಯದಲ್ಲೇ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂಬ ಬಿರುದು ಪಡೆದಿದ್ದ ಪಾಕಿಸ್ತಾನದ ಮಾಜಿ ಆಟಗಾರ ಮಹತ್ವದ ಮಾತುಗಳನ್ನ ಆಡಿದ್ದಾರೆ. ಹಾಗಾದ್ರೆ ಭಾರತದ ಶತ್ರು ಪಾಕ್ ಆಟಗಾರ ಹೇಳಿದ್ದೇನು?
ಕಿಂಗ್ ಕೊಹ್ಲಿ ವಿರೋಧಿಗಳು ಅಲರ್ಟ್!
ವಿರಾಟ್ ಕೊಹ್ಲಿ 2024ರ ಸೆಪ್ಟೆಂಬರ್ ತಿಂಗಳಿಂದ 10 ಟೆಸ್ಟ್ ಮ್ಯಾಚ್‌ನ ಆಡಿದ್ದರೂ ಕೇವಲ 22.47 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ಪೈಕಿ ಕೇವಲ 1 ಶತಕ ಮತ್ತು 1 ಅರ್ಧ ಶತಕ ಬಾರಿಸಿದ್ದಾರೆ. 36 ವರ್ಷದ ಆಟಗಾರ ವಿರಾಟ್ ಕೊಹ್ಲಿ ಅವರ ಆಟ ಸಪ್ಪೆಯಾಗುತ್ತಿದೆ ಎಂಬ ಮಾತುಗಳು ಹರಿದಾಡುವ ಸಮಯದಲ್ಲೇ ಅವರ ಅಭಿಮಾನಿಗಳು ಬೆನ್ನಿಗೆ ನಿಂತಿದ್ದಾರೆ. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರ ತಪ್ಪು ಏನೂ ಇಲ್ಲ, ಮತ್ತೆ ವಾಪಸ್ ಟ್ರ್ಯಾಕ್‌ಗೆ ಬರ್ತಾರೆ ಅನ್ನೋ ನಂಬಿಕೆಯ ಮಾತುಗಳನ್ನ ಆಡುತ್ತಿದ್ದಾರೆ. ಇಂತಹ ಸಮಯದಲ್ಲೇ, ಪಾಕಿಸ್ತಾನದ ಮಾಜಿ ಸ್ಟಾರ್ ಬೌಲರ್ ಸಲಹೆ ಒಂದನ್ನ ನೀಡಿದ್ದಾರೆ.
ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, ವಿರಾಟ್ ಕೊಹ್ಲಿ ಅವರ ನಿಜ ಆಟವನ್ನು ನೀವು ನೋಡಬೇಕಾದರೆ ಅವರಿಗೆ ಪಾಕಿಸ್ತಾನದ ಎದುರು ಮ್ಯಾಚ್ ಇದೆ ಎಂದು ಹೇಳಿ. ಈಗಾಗಲೇ ಮೆಲ್ಬರ್ನ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ವಿರಾಟ ರೂಪ ತೋರಿಸಿ ಮಿಂಚಿದ್ದರು. ಅದೇ ರೀತಿ ಮತ್ತೆ ಮಿಂಚುತ್ತಾರೆ ಎಂದಿದ್ದಾರೆ ಅಖ್ತರ್. ಅಲ್ಲದೆ ಭಾರತೀಯ ಆಟಗಾರರ ಬಗ್ಗೆ ಕೂಡ ಹೆಮ್ಮೆಯ ಮಾತುಗಳನ್ನು ಆಡಿರುವ ಶೋಯೆಬ್ ಅಖ್ತರ್, ಬುಮ್ರಾ ಬೌಲಿಂಗ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆದರೂ ನನಗೆ ಪಾಕಿಸ್ತಾನ ಗೆಲ್ಲಬೇಕು ಎಂಬ ಮಾತು ಹೇಳಿದ್ದಾರೆ ಅಖ್ತರ್.












Click it and Unblock the Notifications