Virat Kohli: ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ವಿದಾಯ ಘೋಷಣೆ; ಕಿಂಗ್ ಸಿಡಿಸಿದ ಶತಕ, ಅರ್ಧಶತಕಗಳೆಷ್ಟು?
Virat Kohli: ಇತ್ತೀಚೆಗಷ್ಟೇ ಭಾರತದ ಕ್ರಿಕೆಟ್ ತಂಡ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಅವರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ಸಹ ವಿದಾಯ ಘೋಷಣೆ ಮಾಡುವ ಮೂಲಕ ಬಿಸಿಸಿಐಗೆ ಶಾಕ್ ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ಮಂಡಳಿಯು ಹೊಸ ನಾಯಕನ ಹುಡುಕಾಟದಲ್ಲಿದ್ದು, ಈ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವ ಯೋಜನೆಯಲ್ಲಿತ್ತು. ಇದಕ್ಕೂ ಮುಂಚೆಯೇ ಸ್ವತಃ ರೋಹಿತ್ ಶರ್ಮಾ ಅವರೇ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರು. ಇದರ ಬೆನ್ನಲ್ಲೇ ಇಂದು (ಮೇ 12) ಮತ್ತೊಬ್ಬ ಸ್ಟಾರ್ ಪ್ಲೆಯರ್ ವಿರಾಟ್ ಕೊಹ್ಲಿ ಸಹ ಟೆಸ್ಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಇದರಿಂದ ಬಿಸಿಸಿಐಗೆ ಎರಡು ದೊಡ್ಡ ಹೊಡೆತ ಬಿದ್ದಂತಾಗಿದೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಅಭಿಮಾನಿಗಳಿಗೆ ತುಂಬಾ ಬೇಸರ ಆದಂತಾಗಿದೆ. ಮತ್ತೊಂದೆಡೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ದೊಡ್ಡ ಆಘಾತ ಆದಂತಾಗಿದೆ.
ವಿರಾಟ್ ಕೊಹ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 14 ವರ್ಷಗಳ ವೃತ್ತಿಯಲ್ಲಿ ಅವರು 123 ಟೆಸ್ಟ್ ಪಂದ್ಯಗಳಲ್ಲಿ 9,230 ರನ್‌ಗಳನ್ನು ಕಲೆ ಹಾಕಿದ್ದಾರೆ. ಸರಾಸರಿ 46.85. 30 ಶತಕಗಳು ಮತ್ತು 31 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್‌ಗಳನ್ನು ಸಿಡಿಸಿದ ಆಟಗಾರ ಎಂಬ ಪಟ್ಟವನ್ನು ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಇತಿಹಾಸ
ಟೆಸ್ಟ್‌ಗೆ ಪಾದಾರ್ಪಣೆ: 2011
ಪಂದ್ಯಗಳು: 123
ರನ್‌ಗಳು: 9,230
ಶತಕ: 30
ಅರ್ಧ ಶತಕ: 31
ವಿರಾಟ್ ಕೊಹ್ಲಿ ಅವರು 68 ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದಾರೆ. 40 ಗೆಲುವುಗಳೊಂದಿಗೆ ಅವರು ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿ ಹೊರಹೊಮ್ಮಿದವರಾಗಿದ್ದಾರೆ. 2016-2019ರ ನಡುವೆ, 2016ರಲ್ಲಿ 75.93, 2017ರಲ್ಲಿ 75.64, 2018 ರಲ್ಲಿ 55.08 ಹಾಗೂ 2019ರಲ್ಲಿ 68.00 ಸರಾಸರಿಯೊಂದಿಗೆ 35 ಟೆಸ್ಟ್‌ಗಳಲ್ಲಿ 14 ಶತಕಗಳೊಂದಿಗೆ 3,596 ರನ್‌ಗಳನ್ನು ಬಾರಿಸಿ ಇಡೀ ವಿಶ್ವದ ಗಮನ ಸೆಳೆದಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸಾಧನೆ
* ಸಚಿನ್ ತೆಂಡೂಲ್ಕರ್ - 15,921 ರನ್
* ರಾಹುಲ್ ದ್ರಾವಿಡ್ - 13,265 ರನ್
* ಸುನಿಲ್ ಗವಾಸ್ಕರ್ 10,122 ರನ್
* ವಿರಾಟ್ ಕೊಹ್ಲಿ - 9,230 ರನ್
ವಿರಾಟ್ ಕೊಹ್ಲಿ ಹೇಳಿದ್ದೇನು?: ನಿವೃತ್ತಿ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. "ಟೆಸ್ಟ್ ಕ್ರಿಕೆಟ್‌ನ ಪ್ರಯಾಣವು ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಎಂದು ನಾನು ಊಹಿಸಿಯೂ ಇರಲಿಲ್ಲ. ಅದು ನನಗೆ ತುಂಬಾ ತುಂಬಾ ಪಾಠಗಳನ್ನು ಕಲಿಸಿತು. ಯಾವಾಗಲೂ ನನ್ನ ಟೆಸ್ಟ್ ವೃತ್ತಿ ಜೀವನವನ್ನು ಸಂತೋಷದಿಂದ ನೋಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications