Get Updates
Get notified of breaking news, exclusive insights, and must-see stories!

ವಿರಾಟ್ ಕೊಹ್ಲಿ ಹೊಸ ದೇವರು, ಕ್ರಿಕೆಟ್ ಲೋಕದ ಸಚಿನ್ ತೆಂಡುಲ್ಕರ್ ಸ್ಥಾನ... Virat Kohli

ಭಾರತ 146 ಕೋಟಿ ಜನಸಂಖ್ಯೆ ಹೊಂದಿದ್ದು, ನಮ್ಮ ದೇಶದಲ್ಲಿ ಕ್ರಿಕೆಟ್ ಆಟಗಾರರನ್ನು ಪೂಜೆ ಮಾಡುವ ಮಟ್ಟಕ್ಕೆ ಜನಪ್ರಿಯತೆ ಇದೆ. ಅದರಲ್ಲೂ ವಿರಾಟ್ ಕೊಹ್ಲಿ ಬರೋದಕ್ಕಿಂತ ಮೊದಲು ಒಂದು ಲೆಕ್ಕ, ವಿರಾಟ್ ಕೊಹ್ಲಿ ಬಂದ ನಂತರ ಮತ್ತೊಂದು ಲೆಕ್ಕ ಎನ್ನುವಂತೆ ಆಗಿದೆ. ಸಾಲು ಸಾಲು ಕ್ರಿಕೆಟ್ ಶತಕ ಬಾರಿಸುತ್ತಾ ವಿರಾಟ್ ಕೊಹ್ಲಿ ತಮ್ಮ ವಿರೋಧಿಗಳಿಗೆ ಖಡಕ್ ಉತ್ತರ ಕೊಡ್ತಾ ಇದ್ದಾರೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಹೊಸ ದೇವರು, ಕ್ರಿಕೆಟ್ ಲೋಕದ ಸಚಿನ್ ತೆಂಡುಲ್ಕರ್ ಸ್ಥಾನ...

ಕನ್ನಡಿಗರ ಮನೆ ಮಗ ವಿರಾಟ್ ಕೊಹ್ಲಿ ಬೆಂಗಳೂರು ತಂಡ ಆರ್‌ಸಿಬಿ ಪರವಾಗಿ ಕಳೆದ 18 ವರ್ಷ ನಿರಂತರವಾಗಿ ಆಡುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ ಅಂದ್ರೆ ಬೆಂಗಳೂರು ತಂಡ, ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಬೇಕೆ ಬೇಕು ಅಂತಾ ಕೋಟಿ ಕೋಟಿ ಅಭಿಮಾನಿಗಳು ಡಿಮ್ಯಾಂಡ್ ಕೂಡ ಮಾಡುತ್ತಾರೆ. ಹಾಗೇ ಭಾರತೀಯ ಕ್ರಿಕೆಟ್ ತಂಡಕ್ಕೂ ವಿರಾಟ್ ಕೊಹ್ಲಿ ಅವರ ಅಗತ್ಯತೆ ಇದ್ದೇ ಇದ್ದು, ವಿರಾಟ್ ಕೊಹ್ಲಿ ಇಲ್ಲದೆ ಅಭಿಮಾನಿಗಳು ಕೂಡ ಮ್ಯಾಚ್ ನೋಡೋದೆ ಇಲ್ಲ ಅನ್ನೋ ಮಾತು ಹೇಳುತ್ತಾರೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಹೊಸ ದೇವರು, ಕ್ರಿಕೆಟ್ ಲೋಕದ ಸಚಿನ್ ತೆಂಡುಲ್ಕರ್ ಸ್ಥಾನ...

Virat Kohli Fans Are Saying This And It Is Become Trend Now

ವಿರಾಟ್ ಕೊಹ್ಲಿ ಹೊಸ ದೇವರು...

ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಏಕದಿನ ಮ್ಯಾಚ್‌ನಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿಯಾಗಿ ಸೆಂಚ್ಯುರಿ ಬಾರಿಸಿ ಮೆರೆದರು. ಈ ಮೂಲಕ ಒನ್ ಡೇ ಮ್ಯಾಚ್ ಅಖಾಡ ಅಲ್ಲಾಡಿ ಹೋಗುವಂತೆ ಮಾಡಿರುವ ವಿರಾಟ್ ಕೊಹ್ಲಿ 53ನೇ ಶತಕ ಬಾರಿಸಿ ಮಿಂಚಿದರು. ಹೀಗೆ ವಿರಾಟ್ ಕೊಹ್ಲಿ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟಾರೆ 84 ಶತಕ ಬಾರಿಸಿದಂತೆ ಆಗಿದೆ ಈಗ. ಈ ಮೂಲಕ ಸಚಿನ್ ತೆಂಡುಲ್ಕರ್ ದಾಖಲೆ ಪುಡಿ ಪುಡಿ ಆಗಿದೆ. ಇಂತಹ ಸಮಯದಲ್ಲೇ, ವಿರಾಟ್ ಕೊಹ್ಲಿ ಹೊಸ ದೇವರು, ಕ್ರಿಕೆಟ್ ಲೋಕದ ಸಚಿನ್ ತೆಂಡುಲ್ಕರ್ ಸ್ಥಾನ...

ವಿರಾಟ್ ಕೊಹ್ಲಿ ಹೊಸ ದೇವರು...

ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ 53ನೇ ಶತಕ ಬಾರಿಸಿ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಪಡೆಯನ್ನ ಪುಡಿ ಪುಡಿ ಮಾಡಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಇದೀಗ ಸೃಷ್ಟಿಯಾಗಿದೆ. ಕ್ರಿಕೆಟ್ ಲೋಕಕ್ಕೆ ವಿರಾಟ್ ಕೊಹ್ಲಿ ಹೊಸ ದೇವರು ಆಗಿದ್ದಾರೆ, ಹೀಗಾಗಿ ಇನ್ನು ಮುಂದೆ ವಿರಾಟ್ ಕೊಹ್ಲಿ ಅವರೇ ಕ್ರಿಕೆಟ್ ಲೋಕದ ದೇವರು... ಹೀಗಂತಾ ಕಿಂಗ್ ಕೊಹ್ಲಿ ಅವರ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ವಿರಾಟ್ ಕೊಹ್ಲಿ ಹೊಸ ದೇವರು, ಕ್ರಿಕೆಟ್ ಲೋಕದ ಸಚಿನ್ ತೆಂಡುಲ್ಕರ್ ಸ್ಥಾನ ಹೋಯ್ತಾ? ಅನ್ನೋ ಗಂಭೀರವಾದ ಚರ್ಚೆ ಕೂಡ ಶುರುವಾಗಿದೆ. ಮತ್ತೊಂದು ಕಡೆ ಸಚಿನ್ ತೆಂಡುಲ್ಕರ್ ಎಂದೆಂದಿಗೂ ಕ್ರಿಕೆಟ್ ದೇವರು ಅಂತಾ ಕೂಡ ಕೆಲವರು ವಾದ ಮಾಡುತ್ತಿದ್ದಾರೆ, ಈ ಮೂಲಕ ಕ್ರಿಕೆಟ್ ದೇವರು ಯಾರು ಈಗ? ಅನ್ನೋ ವಿಚಾರಕ್ಕೆ ತಿಕ್ಕಾಟ ಶುರುವಾಗಿದೆ...

ಕನ್ನಡಿಗರ ಮನೆಮಗ ವಿರಾಟ್ ಕೊಹ್ಲಿ...

ಹೌದು, ವಿರಾಟ್ ಕೊಹ್ಲಿ ಒಂದು ಬಾರಿ ಪ್ರೀತಿ ಕೊಟ್ಟರೆ ಸಾಯುವ ತನಕ ಅದನ್ನೇ ಇಟ್ಟುಕೊಂಡು ಬದುಕುತ್ತಾರೆ ಅನ್ನೋ ಮಾತಿದೆ. ಅದೇ ಒಂದು ಬಾರಿ ವಿರಾಟ್ ಕೊಹ್ಲಿ ಜೊತೆಗೆ ದ್ವೇಷ & ಸೇಡು ಇಟ್ಟುಕೊಂಡರೆ ಅವರ ಕಥೆ ಮುಗಿದೇ ಹೋಯ್ತು... ಹೀಗೆ ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಅವರ ವೀರಾವೇಶದ ಬಗ್ಗೆ ಅಭಿಮಾನಿಗಳು ಮಾತನಾಡುತ್ತಾರೆ. ಹೀಗಿದ್ದಾಗ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಲೇಬೇಕು ಅಂತಾ ಬಾಯಿ ಬಡಿದುಕೊಂಡಿದ್ದವರು ದಿಢೀರ್ ಅಂತಾ ಇವತ್ತು ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ! ಅದರಲ್ಲೂ ವಿರಾಟ್ ಕೊಹ್ಲಿ ಅಬ್ಬರ ನೋಡಿ ಕೋಚ್ ಗೌತಮ್ ಗಂಭೀರ್ ಕೂಡ ಸೈಲೆಂಟ್ ಆಗಿದ್ದಾರೆ ಅಂತಾ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+