ವಿರಾಟ್ ಕೊಹ್ಲಿ ಭರ್ಜರಿ ಸೆಂಚ್ಯುರಿ, ಹೊಸ ಇತಿಹಾಸ ನಿರ್ಮಾಣ! Virat Kohli
ಕನ್ನಡಿಗರ ಮನೆಮಗ... ಕನ್ನಡಿಗರ ಬೆಂಗಳೂರು ತಂಡದ ಜೀವ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರಿಗೆ ವಯಸ್ಸು ಆಯ್ತು, ಈಗ ನಿವೃತ್ತಿ ಘೋಷಣೆ ಮಾಡಿ ಹೊರಗೆ ಹೋಗಲಿ ಅಂತಾ ಬಾಯಿ ಬಡಿದುಕೊಳ್ಳುತ್ತಿದ್ದ ವಿರೋಧಿಗಳ ಬಾಯಿ ದಿಢೀರ್ ಬಂದ್ ಆಗುವಂತೆ ಮಾಡಿದ್ದಾರೆ.
ಅಭಿಮಾನಿಗಳ ಬಾಯಿಂದ ಕ್ರಿಕೆಟ್ ಕಿಂಗ್ & ಕ್ರಿಕೆಟ್ ಲೋಕದ ದೊರೆ ಅಂತಾನೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರು ಇದೀಗ ನ್ಯಾಯ ಒದಗಿಸಿದ್ದಾರೆ. ಭಾರತ ತಂಡವನ್ನು ಟೆಸ್ಟ್ ಸರಣಿಯಲ್ಲಿ ಭೀಕರವಾಗಿ ಸೋಲಿಸಿ ನಕ್ಕಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎದೆ ಬಡಿತ, ವಿರಾಟ್ ಕೊಹ್ಲಿ ಆಟದ ಎದುರು ನಿಂತು ಹೋಗಿತ್ತು!

ಕನ್ನಡಿಗರ ಮನೆಮಗ ವಿರಾಟ್ ಕೊಹ್ಲಿ...
ಹೌದು, ವಿರಾಟ್ ಕೊಹ್ಲಿ ಒಂದು ಬಾರಿ ಪ್ರೀತಿ ಕೊಟ್ಟರೆ ಸಾಯುವ ತನಕ ಅದನ್ನೇ ಇಟ್ಟುಕೊಂಡು ಬದುಕುತ್ತಾರೆ ಅನ್ನೋ ಮಾತಿದೆ. ಅದೇ ಒಂದು ಬಾರಿ ವಿರಾಟ್ ಕೊಹ್ಲಿ ಜೊತೆಗೆ ದ್ವೇಷ & ಸೇಡು ಇಟ್ಟುಕೊಂಡರೆ ಅವರ ಕಥೆ ಮುಗಿದೇ ಹೋಯ್ತು... ಹೀಗೆ ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಅವರ ವೀರಾವೇಶದ ಬಗ್ಗೆ ಅಭಿಮಾನಿಗಳು ಮಾತನಾಡುತ್ತಾರೆ. ಹೀಗಿದ್ದಾಗ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಲೇಬೇಕು ಅಂತಾ ಬಾಯಿ ಬಡಿದುಕೊಂಡಿದ್ದವರು ದಿಢೀರ್ ಅಂತಾ ಇವತ್ತು ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ!
ಶತಕೋಟಿ ಅಭಿಮಾನಿಗಳ ಕನಸು ನನಸು...
ಸೌತ್ ಆಫ್ರಿಕಾ ವಿರುದ್ಧ ಶತಕ ಬಾರಿಸಿ ವಿರೋಧಿಗಳಿಗೆ ಉತ್ತರ ಕೊಡಲೇ ಬೇಕು ಅನ್ನೋ ತೀರ್ಮಾನ ಮಾಡಿಕೊಂಡೇ ಕಿಂಗ್ ವಿರಾಟ್ ಕೊಹ್ಲಿ ಇವತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಂತೆ ಕಾಣುತ್ತಿತ್ತು. ಈ ಹಂತದಲ್ಲಿ ಆರಂಭದಲ್ಲೇ ಭರ್ಜರಿಯಾಗಿ ಬ್ಯಾಟಿಂಗ್ ಆರಂಭಿಸಿದ್ದ ವಿರಾಟ್ ಕೊಹ್ಲಿ, ಎದುರಾಳಿ ಬೌಲಿಂಗ್ ಪಡೆಯನ್ನ ಪುಡಿ ಪುಡಿ ಮಾಡಿ ಹಾಕಿದರು. ಹೀಗೆ ನೋಡ ನೋಡುತ್ತಲೇ ಬರೋಬ್ಬರಿ 5 ಸಿಕ್ಸರ್ ಬಾರಿಸಿ ಮಿಂಚಿದ್ದರು. ಅಲ್ಲದೆ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರು ಸೆಂಚ್ಯುರಿ ಬಾರಿಸೋದು ಕೂಡ ಗ್ಯಾರಂಟಿ ಅನ್ನೋ ಮುನ್ಸೂಚನೆ ಕೊಟ್ಟರು. ಅಂತಿಮವಾಗಿ, ಶತಕೋಟಿ ಭಾರತೀಯರ ಕನಸು ಇಂದು ನನಸಾಗಿ ಹೋಗಿತ್ತು. ವಿರಾಟ್ ಕೊಹ್ಲಿ ಅವರು ಇತ್ತೀಚಿನ ಮಾಹಿತಿ ಪ್ರಕಾರ, 108 ಬಾಲ್‌ಗೆ 123 ರನ್ ಬಾರಿಸಿದ್ದಾರೆ.












Click it and Unblock the Notifications