300 ಕೋಟಿ ರೂಪಾಯಿ ಪರಿಹಾರ ನೀಡಲಿದ್ದಾರಾ ವಿರಾಟ್ ಕೊಹ್ಲಿ... Virat Kohli
ವಿರಾಟ್ ಕೊಹ್ಲಿ ಸಂಸಾರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ, ವಿರಾಟ್ ಕೊಹ್ಲಿ ಕೂಡ ಇನ್ನೇನು ಡಿವೋರ್ಸ್ ಪಡೆದು ಸಂಸಾರ ಮುರಿದುಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಯಾವುದೋ ನಟಿ ಹಾಕಿದ್ದ ಹಾಟ್ ಹಾಟ್ ಫೋಟೋಗೆ ಲೈಕ್ ಕೊಟ್ಟು ವಿರಾಟ್ ಕೊಹ್ಲಿ ಸಂಸಾರ ಹಾಳು ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಿದ್ದಾಗಲೇ, 300 ಕೋಟಿ ರೂಪಾಯಿ ಪರಿಹಾರ ನೀಡಲಿದ್ದಾರಾ ವಿರಾಟ್ ಕೊಹ್ಲಿ...
ಸಚಿನ್ ತೆಂಡೂಲ್ಕರ್ ಅವರನ್ನ ಬಿಟ್ಟರೆ ವಿರಾಟ್ ಕೊಹ್ಲಿ ಅವರಿಗೆ ಮಾತ್ರ ಕ್ರಿಕೆಟ್ ಲೋಕದಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಬೆಂಬಲ ಸಿಗುತ್ತಿದೆ, ಯಾಕಂದ್ರೆ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಕಿಂಗ್. ವಿರಾಟ್ ಕೊಹ್ಲಿ ಕಿಂಗ್ ರೀತಿ ಬದುಕುತ್ತಿದ್ದು, ಕ್ರಿಕೆಟ್ ಮಾತ್ರವಲ್ಲದೆ ಸಂಸಾರದಲ್ಲೂ ಇದೇ ವಿರಾಟ್ ಕೊಹ್ಲಿ ನೆಮ್ಮದಿಯಾಗಿ ಇದ್ದರು. ಅನುಷ್ಕಾ ಶರ್ಮಾ ಜೊತೆಗೆ ಮದುವೆ ಆಗಿರುವ, 2 ಮಕ್ಕಳ ತಂದೆ ಆಗಿರುವ ವಿರಾಟ್ ಕೊಹ್ಲಿ ಅವರನ್ನ ನೋಡಿ ಅದೆಷ್ಟೋ ಜನರ ಹೊಟ್ಟೆ ಕೂಡ ಉರಿದಿತ್ತು. ಆದರೆ ಇದೀಗ ಅಲ್ಲೋಲ & ಕಲ್ಲೋಲ ಶುರುವಾಗಿದೆ...

300 ಕೋಟಿ ರೂಪಾಯಿ ಪರಿಹಾರ...
ಅನುಷ್ಕಾ ಶರ್ಮಾ ಅವರ ಜೊತೆ ಹೃದಯ ಹಂಚಿಕೊಂಡ ವಿರಾಟ್ ಕೊಹ್ಲಿ 2017ರ ಡಿಸೆಂಬರ್ 11ಕ್ಕೆ ಅದ್ಧೂರಿಯಾಗಿ ಮದುವೆ ಆಗಿದ್ದರು. ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಅತ್ಯಂತ ಆತ್ಮೀಯ ಸಂಬಂಧವನ್ನ ಹೊಂದಿದ್ದು, ಇಬ್ಬರ ನಡುವೆ ಗೆಳೆತನ ಕೂಡ ಹಾಗೇ ಇತ್ತು. ಆದರೆ ಇದೀಗ ವಿರಾಟ್ ಕೊಹ್ಲಿ ಬಾಳಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿ, ಎಲ್ಲೆಡೆಯೂ ಭಾರಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಹೀಗಿದ್ದಾಗಲೇ, 300 ಕೋಟಿ ರೂಪಾಯಿ ಪರಿಹಾರ ನೀಡಲಿದ್ದಾರಾ ವಿರಾಟ್ ಕೊಹ್ಲಿ...
ವಿರಾಟ್ ಕೊಹ್ಲಿ ಅವರು, ಬಾಲಿವುಡ್ ಹಾಟ್ ನಟಿ & ಹಾಟ್ ಹಾಟ್ ಡಾನ್ಸರ್ ಅವನೀತ್ ಕೌರ್ ಅವರ ಹಾಟ್ ಆಗಿರುವ ಫೋಟೋಗೆ ಲೈಕ್ ಕೊಟ್ಟಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ನಟಿ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ಹಾಟ್ ಫೋಟೊಗೆ ಕೊಹ್ಲಿ ಲೈಕ್ ಮಾಡಿದ್ದಾರೆ ವಿರಾಟ್ ಕೊಹ್ಲಿ ಎಂಬ ಸುದ್ದಿ ಹಬ್ಬಿತ್ತು. ಕೊನೆಗೆ ಖುದ್ದಾಗಿ ಈ ಬಗ್ಗೆ ವಿರಾಟ್ ಕೊಹ್ಲಿ ಅವರೇ ಸ್ಪಷ್ಟನೆಯನ್ನ ಕೂಡ ನೀಡಿದ್ದರೂ ಸಂಚಲನ ಕಡಿಮೆ ಆಗಿಲ್ಲ.
ವಿರಾಟ್ ಕೊಹ್ಲಿ ಹೀಗೆ ನಟಿ ಅವನೀತ್ ಕೌರ್ ಹಾಟ್ & ಬೋಲ್ಡ್ ಫೋಟೋಗೆ ಲೈಕ್ ಕೊಟ್ಟಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ತಾಂತ್ರಿಕ ದೋಷದಿಂದ ಆಗಿರುವುದು ನನ್ನ ತಪ್ಪು ಇಲ್ಲ. ಯಾವ ಉದ್ದೇಶದಿಂದ ಆಗಿರುವ ತಪ್ಪು ಅಲ್ಲ ಎಂಬ ಸ್ಪಷ್ಟನೆ ಕೂಡ ನೀಡಿದ್ದರು ವಿರಾಟ್ ಕೊಹ್ಲಿ. ಈ ಎಲ್ಲಾ ಬೆಳವಣಿಗೆ ನಂತರ, ವಿರಾಟ್ ಕೊಹ್ಲಿ ಸಂಸಾರದಲ್ಲಿ ದೊಡ್ಡ ಬಿರುಗಾಳಿಯೇ ಎದ್ದು ಬಿಟ್ಟಿದೆಯಂತೆ...
ಡಿವೋರ್ಸ್ ಬಗ್ಗೆ ಭಯ.. ಭಯ..
ಅನುಷ್ಕಾ ಶರ್ಮಾ ಇದೀಗ ವಿರಾಟ್ ಕೊಹ್ಲಿ ಅವರ ಜೊತೆಗೆ ಮಾತು ಬಿಟ್ಟಿದ್ದಾರೆ. ಅಲ್ಲದೇ ವಿಚ್ಛೇದನ ಅಂದ್ರೆ ಡಿವೋರ್ಸ್ ಪಡೆಯಲು ಕೂಡ ಮುಂದಾಗಿದ್ದರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಗಡೆ ಬಿದ್ದಿಲ್ಲ, ಹೀಗಿದ್ದಾಗಲೇ ಅಕಸ್ಮಾತ್ ವಿರಾಟ್ ಕೊಹ್ಲಿ ಅವರಿಗೆ ವಿಚ್ಛೇದನ ನಡೆದರೆ ಅಂದ್ರೆ ಡಿವೋರ್ಸ್ ಕೊಟ್ಟರೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ 300 ಕೋಟಿ ರೂಪಾಯಿ ಪರಿಹಾರ ನೀಡಲಿದ್ದಾರಾ? ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಬಾಳಲ್ಲಿ ಈ ರೀತಿಯ ಘಟನೆ ನಡೆಯದೇ ಇರಲಿ ಅಂತಾ ಅಭಿಮಾನಿಗಳು ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಗಡಿಯಲ್ಲಿ ಕ್ರಿಕೆಟ್ ಆಟಗಾರರ ಯುದ್ಧ?
ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಅವ್ರು ಭಾರತೀಯ ಸೇನೆಯಲ್ಲಿ ಇರುವುದರಿಂದ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಕೂಡ ಜೋರಾಗಿದೆ. ಆದರೆ, ಇದಕ್ಕೆ ಉತ್ತರ ಏನಂದ್ರೆ ಧೋನಿ, ಸಚಿನ್ ತೆಂಡೂಲ್ಕರ್ & ಕಪಿಲ್ ದೇವ್ ಅವರು ಭಾರತೀಯ ಸೇನೆ ಸೇವೆಯಲ್ಲಿ ಇದ್ದಾರೆ ನಿಜ, ಆದ್ರೆ ಭಾರತೀಯ ಕ್ರಿಕೆಟಿಗರು ಪ್ರಾದೇಶಿಕ ಸೇನೆ ಭಾಗವಾಗಿದ್ದಾರೆ ಎನ್ನಬಹುದು.
ಇದರ ಅರ್ಥ ಧೋನಿ, ಸಚಿನ್ ತೆಂಡೂಲ್ಕರ್ & ಕಪಿಲ್ ದೇವ್ ಅವರು ಭಾರತೀಯ ಸೇನೆಯಲ್ಲಿ ಇರುವುದು ಸ್ವಯಂ ಸೇವಕ ನಾಗರಿಕರಿಗೆ ತರಬೇತಿ ನೀಡಲು ಮತ್ತು ತುರ್ತು ಪರಿಸ್ಥಿತಿಗೆ ಅವರನ್ನ ಸಿದ್ಧರಾಗುವಂತೆ ಮಾಡಲು. ಹೀಗಾಗಿ ಕ್ರಿಕೆಟ್ ಆಟಗಾರರು ಸೇನೆಯಲ್ಲಿ ಇದ್ದರೂ ಗಡಿಗೆ ಬಂದು ಯುದ್ಧ ಮಾಡುವ ಅನಿವಾರ್ಯತೆ ಇರುವುದಿಲ್ಲ ಎನ್ನಲಾಗಿದೆ. ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೇ ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಭಾರತೀಯ ಸೇನೆಯಲ್ಲಿ ಸ್ಥಾನ ಪಡೆದಿದ್ದರು.












Click it and Unblock the Notifications