Viral Video: WWE ಕುಸ್ತಿಪಟು 'ಸಂಗ' ಪುಷ್ಪಾ ಶೈಲಿ ಸಂಭ್ರಮ ವೈರಲ್

ಭಾರತೀಯ ಕುಸ್ತಿಪಟು ಸೌರವ್ ಗುರ್ಜಾರ್, ತಮ್ಮ ರಿಂಗ್ ನೇಮ್ 'ಸಂಗ' ಹೆಸರಿನಿಂದಲೇ ಚಿರಪರಿಚಿತರಾಗಿದ್ದಾರೆ, ಪ್ರಸ್ತುತ WWE NXT 2.0 ಬ್ರ್ಯಾಂಡ್‌ನಲ್ಲಿ ಕುಸ್ತಿ ಪಂದ್ಯಗಳನ್ನಾಡುವ ಸಂಗ ತಮ್ಮ ಅಜೇಯ ದಾಖಲೆಯನ್ನು ಮುಂದುವರೆಸಿದ್ದಾರೆ. ಇತ್ತೀಚೆಗೆ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ ಬಳಿಕ ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ ರೀತಿಯಲ್ಲಿ ಸಂಭ್ರಮಿಸಿದ್ದಾರೆ.

ಇತ್ತೀಚಿನ ಪಂದ್ಯವೊಂದರಲ್ಲಿ, ವಿಶ್ವಪ್ರಸಿದ್ಧ WWE NXT ಕುಸ್ತಿಪಟು ಸಂಗ, 'ಮೈ ಜುಕೇಗಾ ನಹಿ' ಅಥವಾ ತಗ್ಗೆದೇಲೆ ಅಭಿನಯ ಅನುಕರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಅಭಿನಯದ ಈ ಝಲಕ್ ದೇಶ, ಭಾಷೆ, ಗಡಿ ಮೀರಿ ಹಬ್ಬಿದೆ. ಅನೇಕ ಸೆಲೆಬ್ರಿಟಿಗಳು ಅನುಕರಣೆ ಮಾಡಿ ವಿಡಿಯೋ ಮಾಡಿ ಹಂಚಿಕೊಂಡಿದ್ದು, ಇಂಟರ್ನೆಟ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಪುಷ್ಪಾ ಡೈಲಾಗ್, ಅಲ್ಲು ಅರ್ಜುನ್ ಮ್ಯಾನರಿಸಂ, ಹಾಡುಗಳಿಗೆ ಡ್ಯಾನ್ಸ್ ವೈರಲ್ ಆಗುತ್ತಲೇ ಇದೆ.

Viral Video: WWE NXT Wrestler Sanga Pushpas Thaggedele Celebratio

ಡಿಸೆಂಬರ್ 17, 2021 ರಂದು ಥಿಯೇಟರ್‌ಗಳಿಗೆ ಬಂದ ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್ ಚಲನಚಿತ್ರವು ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವರು ನಟನ ಅಭಿನಯ ಮತ್ತು ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.


ಬಿಡುಗಡೆಯಾದ ತಿಂಗಳುಗಳ ನಂತರವೂ, ಅಭಿಮಾನಿಗಳು ಮತ್ತು ಕೆಲವು ಸೆಲೆಬ್ರಿಟಿಗಳು ಚಿತ್ರದ ಸಾಂಪ್ರದಾಯಿಕ ಡೈಲಾಗ್‌ಗಳನ್ನು ಅನುಕರಿಸುತ್ತಿದ್ದರು. ಮತ್ತೊಂದೆಡೆ, ಈ ಜನಪ್ರಿಯ ಚಿತ್ರದ ಮುಂದುವರಿದ ಭಾಗವು ಈಗ ನಿರ್ಮಾಣ ಹಂತದಲ್ಲಿದ್ದು, ಅಭಿಮಾನಿಗಳು ಅದರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ.

''ಪುಷಾ ದಿ ರೈಸ್'' ಬಿಡುಗಡೆಯಾದ ಆರು ತಿಂಗಳ ನಂತರ, ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಎರಡನೇ ಭಾಗದ ಆರಂಭದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪುಷ್ಪ 2 ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿಲ್ಲ.

ನಿರ್ದೇಶಕ ಸುಕುಮಾರ್ ಇನ್ನೂ ಎರಡನೇ ಭಾಗದ ವಿಚಾರಗಳ ಕುರಿತು ಯೋಚಿಸುತ್ತಿರುವಾಗ, ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಚಿತ್ರೀಕರಣದ ದಿನಾಂಕವನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆ ಎಂಬುದು ಚಿತ್ರತಂಡದ ಇತ್ತೀಚಿನ ಮಾಹಿತಿ ಹೊರ ಬಂದಿದೆ. ನಂತರ ಬಿಡುಗಡೆಯ ಯೋಜನೆಗಳು ಬದಲಾಗಿವೆ. ಡಿಸೆಂಬರ್ 2023 ಒಂದು ಆಯ್ಕೆಯಾಗಿದೆ. ಇನ್ನೊಂದು ಯೋಜನೆ 2024ರಲ್ಲಿ ಬಿಡುಗಡೆ ಮಾಡುವುದು ಎಂದು ನಿರ್ಧರಿಸಲಾಗಿದೆ.

Recommended Video

      HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada

      ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ''ಪುಷ್ಪ 2'' ಅದ್ದೂರಿ ಬಜೆಟ್‌ನಲ್ಲಿ ತಯಾರಾಗಲಿದೆ. ಮೊದಲ ಭಾಗ 150 ಕೋಟಿ ರೂ. ಎರಡನೇ ಭಾಗಕ್ಕೆ 400 ಕೋಟಿ ಬಜೆಟ್‌ ಎಂದು ಅಂದಾಜಿಸಲಾಗಿದೆ. ಎರಡನೇ ಭಾಗಕ್ಕೆ ಹಿಂದಿ ಪ್ರೇಕ್ಷಕರೇ ಪ್ರಮುಖ ಗುರಿಯಾಗಿದ್ದಾರೆ. ಹೀಗಾಗಿ ಸ್ಕ್ರಿಪ್ಟ್ ಕೆಲಸ ವಿಳಂಬವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+