Vinesh Phogat: ವಿನೇಶ್ ಪೋಗಟ್ ಹೊರಬಿದ್ದ ತಕ್ಷಣ ಕುಣಿದಾಡಿದ ‘ಭಕ್ತರು’!

ಭಾರತೀಯರು ಇಂದು ಕಣ್ಣೀರು ಹಾಕುತ್ತಿದ್ದಾರೆ, ವಿನೇಶ್ ಪೋಗಟ್ ' ಪ್ಯಾರಿಸ್ ಒಲಿಂಪಿಕ್ಸ್' ಕ್ರೀಡಾಕೂಟದಿಂದ ಹೊರಬಿದ್ದ ನಂತರ ಶತಕೋಟಿ ಭಾರತೀಯರು ಕಂಬನಿ ಮಿಡಿದು ಕುಸ್ತಿ ಸ್ಟಾರ್ ವಿನೇಶ್ ಪೋಗಟ್‌ಗೆ ಧೈರ್ಯ ಹೇಳುತ್ತಿದ್ದಾರೆ. ಆದರೆ ಭಾರತ ಸೋತಿರುವ ಈ ನೋವಿನ ಸಮಯದಲ್ಲಿ ಕೂಡ 'ಭಕ್ತರು' ಸಂಭ್ರಮಿಸುತ್ತಿದ್ದಾರೆ. ವಿನೇಶ್ ಪೋಗಟ್ ಸೋಲು ಕೆಲವು 'ಭಕ್ತರಿಗೆ' ಖುಷಿ ಕೊಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ!

ಭಾರತೀಯ ಕ್ರೀಡಾ ಲೋಕಕ್ಕೆ ಇಂದಿನ ದಿನ ಮರೆಯಲು ಆಗದು. ಯಾಕಂದ್ರೆ ಆಗಸ್ಟ್ 6ರ ನಿನ್ನೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದಿದ್ದ ಮಹಿಳೆಯರ 50 ಕೆಜಿ ತೂಕ ವಿಭಾಗ ಕುಸ್ತಿ ಸ್ಪರ್ಧೆಯ, ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದರು ವಿನೇಶ್ ಫೋಗಟ್. ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಇಂದು ಸ್ಪರ್ಧೆಯಿಂದ ಅನರ್ಹ ಆಗಿದ್ದು, ಇದಕ್ಕೆ ಕಾರಣ ಅವರ ತೂಕದಲ್ಲಿ ಏರಿಕೆ ಆಗಿದ್ದು. ಆದರೆ ಇದೇ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ 'ಭಕ್ತರು' ಎನ್ನುವ ಪದ ಟ್ರೆಂಡ್ ಆಗುವಂತೆ ಮಾಡಿದೆ.

Vinesh Phogat Olympics News Is In Trend On Social Media For This Reason

50 ಕೆಜಿ ತೂಕ ವಿಭಾಗದ ಮಹಿಳಾ ಕುಸ್ತಿ ವಿಭಾಗದಲ್ಲಿ ಭಾಗವಹಿಸಿದ್ದ ವಿನೇಶ್ ಫೋಗಟ್ ಅವರ ತೂಕ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ಇದೇ ಹಿನ್ನೆಲೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರನ್ನು ಅನರ್ಹ ಎಂದು ಘೋಷಿಸಲಾಗಿದ್ದು, ಭಾರತೀಯರು ಈ ಸುದ್ದಿಯನ್ನ ಕೇಳಿ ಕಣ್ಣೀರು ಹಾಕುತ್ತಿದ್ದರೆ, ಕೆಲವು ಭಕ್ತರು ಮಾತ್ರ ಭಾರತ ಸೋತಿರುವ ಈ ನೋವಿನ ಸಮಯದಲ್ಲಿ ಕೂಡ ಸಂಭ್ರಮಿಸುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಬೇಕು ಅಂತಲೇ ಹೀಗೆ ಮಾಡಿದ್ದಾರಾ?

ಇಷ್ಟೆಲ್ಲದರ ನಡುವೆ ಯಾರೋ ನಿಗೂಢ ವ್ಯಕ್ತಿಗಳು ವಿನೇಶ್ ಫೋಗಟ್ ಗೆಲ್ಲಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ವಿಚಾರವನ್ನ ಭಾರತ ಇಲ್ಲಿಗೆ ಬಿಡಬಾರದು. ಈ ವಿಚಾರವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ. ಹಾಗೇ ಈ ವಿಚಾರದಲ್ಲಿ ರಾಜಕೀಯದ ರಾಡಿ ಕೂಡ ಬೆರೆತು ಹೋಗುತ್ತಿದೆ. ಹೀಗಾಗಿ ನಿಜವಾದ ಭಾರತೀಯರು ಈ ಸಮಯದಲ್ಲಿ, ಕುಸ್ತಿಪಟು ವಿನೇಶ್ ಫೋಗಟ್ ಅವರ ಬೆನ್ನಿಗೆ ನಿಂತು ಸಮಾಧಾನ ಹೇಳುತ್ತಿದ್ದಾರೆ.

ಮೇಲ್ಮನವಿ ಸಲ್ಲಿಸುತ್ತಾ ಭಾರತ?

ಭಾರತಕ್ಕೆ ಮತ್ತೊಮ್ಮೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರಿ ದೊಡ್ಡ ಆಘಾತ ಈಗ ಎದುರಾಗಿದೆ. ಅದ್ರಲ್ಲೂ ಭಾರತೀಯ ಕುಸ್ತಿಪಟು ಒಬ್ಬರು ಮೊಟ್ಟಮೊದಲ ಬಾರಿಗೆ ಹೀಗೆ, ಕುಸ್ತಿ ವಿಭಾಗದಲ್ಲಿ ಚಿನ್ನದ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಮತ್ತೊಂದ್ಕಡೆ ಭಾರತ ಕೂಡ ಘಟನೆಯನ್ನ ತುಂಬಾ ಆಕ್ರೋಶದಿಂದ ಸ್ವೀಕಾರ ಮಾಡಿದೆ. ಅಲ್ಲದೆ ಈ ಬಗ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಇದೇ ವಿಚಾರ ಇದೀಗ ಜಾಗತಿಕ ಕ್ರೀಡಾ ಲೋಕದಲ್ಲೂ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+