Vinesh Phogat: ಬೆಳ್ಳಿ ಪದಕಕ್ಕಾಗಿ ನ್ಯಾಯಾಲಯದ ಮೊರೆ ಹೋದ ವಿನೇಶ್ ಪೋಗಟ್
ಬುಧವಾರ ಬೆಳಗ್ಗೆ ಎಲ್ಲರೂ ಇಂದು ಸಂಜೆ ಒಂದು ಒಳ್ಳೆಯ ಕುಸ್ತಿ ಮ್ಯಾಚ್ ನೋಡಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಕ್ರೀಡಾಭಿಮಾನಿಗಳ ಆಸೆ ನಿಜವೂ ಆಗಿತ್ತು. ಆದರೆ ಸಮಯ ಕಳೆದಂತೆ ಪ್ಯಾರಿಸ್ ನಗರದಿಂದ ಬರುತ್ತಿದ್ದ ಸುದ್ದಿ ನಿಜಕ್ಕೂ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ವಿನೇಶ್ ಪೋಗಟ್ ಅವರನ್ನು ಅನರ್ಹ ಗೊಳಿಸಲಾಗಿತ್ತು.
ಈ ಸುದ್ದಿ ಪ್ಯಾರಿಸ್‌ನಿಂದ ಹೊರ ಬೀಳುತ್ತಿದ್ದಂತೆ ಭಾರತದಲ್ಲಿ ಸಂಚಲನ ಮೂಡಿಸಿತು. ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ಅರ್ಹತೆ ಪಡೆದಿದ್ದ, ವಿನೇಶ್ ಪೋಗಟ್ ಅವರ ತೂಕ ನಿಗದಿತ ತೂಕಕ್ಕಿಂತ ನೂರು ಗ್ರಾಮ್ ಹೆಚ್ಚಿದ್ದರಿಂದ ಇವರನ್ನು ಅನರ್ಹ ಗೊಳಿಸಲಾಗಿತ್ತು. ಈ ಸುದ್ದಿ ಭಾರತದಲ್ಲಿ ವ್ಯಾಪಕವಾಗಿ ಹಬ್ಬಿತು. ಈಗ ವಿನೇಶ್ ಪೋಗಟ್ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ವಿನೇಶ್ ಪೋಗಟ್ ಫೈನಲ್‌ನಿಂದ ಅನರ್ಹ ಗೊಂಡ ಬಳಿಕ ಈಗ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರು ಈ ಸಂಬಂಧ ಈಗ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತಾದ ಮಹತ್ವದ ನಿರ್ಧಾರವನ್ನು ಕೋರ್ಟ್ ಗುರುವಾರ ಕೈಗೊಳ್ಳಲಿದೆ. ವಿನೇಶ್ ಕೋರ್ಟ್‌ನಲ್ಲಿ ಫೈನಲ್ ಪಂದ್ಯವನ್ನೇ ನಿಲ್ಲಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಅವರ ಮನವಿಗೆ ಕೋರ್ಟ್‌ನಿಂದ ಮನ್ನಣೆ ಸಿಕ್ಕಿರಲಿಲ್ಲ. ಈಗ ವಿನೇಶ್ ತಮ್ಮ ಹಕ್ಕನ್ನು ಕೇಳಿ ಕೋರ್ಟ್ ಮೊರೆ ಹೋಗಿದ್ದಾರೆ.
ಸ್ವಿಟ್ಜರ್ಲೆಂಡ್‌ನಲ್ಲಿರುವ ಕ್ರೀಡಾ ನ್ಯಾಯಾಲಯವು ವಿನೇಶ್ ಅವರ ಅರ್ಜಿಯನ್ನು ಕೈಗೊಂಡು ಶೀಘ್ರದಲ್ಲಿ ತನ್ನ ನಿರ್ಧಾರವನ್ನು ಕೈಗೊಳ್ಳಲಿದೆ. ಇದೇ ವೇಳೆ ವಿನೇಶ್ ಅವರು ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.
ಈ ನ್ಯಾಯಾಲಯ ಯಾವುದು?
ಕ್ರೀಡೆಗಾಗಿ ಆರ್ಬಿಟ್ರೇಶನ್ ನ್ಯಾಯಾಲಯವು 1984 ರಲ್ಲಿ ಸ್ಥಾಪಿಸಲಾಯಿತು. ಕ್ರೀಡಾ ವಿವಾದಗಳನ್ನು ಇತ್ಯರ್ಥಗೊಳಿಸಲು ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದರ ಪ್ರಧಾನ ಕಛೇರಿ ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿದೆ.
ಬೆಳ್ಳಿ ಪದಕ ನೀಡಿ
ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿದ್ದ ವಿನೇಶ್ ಪೋಗಟ್ ಅವರಿಗೆ ಬೆಳ್ಳಿ ಪದಕವನ್ನು ನೀಡಬೇಕೆಂದು ಹಲವು ಅಥ್ಲೀಟ್‌ಗಳು ಧ್ವನಿ ಎತ್ತಿದ್ದರು. ಇದರಲ್ಲಿ ಅಮೆರಿಕದ ಕುಸ್ತಿಪಟು ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಜೋರ್ಡಾನ್ ಬರೋಸ್ ಪ್ರಥಮರು. ಇವರು ವಿನೇಶ್ ಪೋಗಟ್ ಅವರಿಗೆ ಬೆಳ್ಳಿ ಪದಕ ನೀಡಬೇಕು ಎಂದು ಮನವಿಯನ್ನು ಇಟ್ಟಿದ್ದಾರೆ. ಜೋರ್ಡಾನ್ ಬೇಡಿಕೆಗೆ ಬಜರಂಗ್ ಪುನಿಯಾ ಸಹ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications