ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೋ ಬಾಕ್ಸಿಂಗ್: ಎದುರಾಳಿಯನ್ನು ನಾಕೌಟ್ ಮಾಡಿ ವಿಜೇಂದರ್ ರೀ ಎಂಟ್ರಿ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಪ್ರೋ ಬಾಕ್ಸಿಂಗ್‌ಗೆ ಭರ್ಜರಿಯಾಗಿ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ಪ್ರೊ ಬಾಕ್ಸಿಂಗ್ ಬೌಟ್‌ನಲ್ಲಿ ಎಲಿಯಾಸು ಸುಲ್ಲಿಯನ್ನು ನಾಕ್ ಔಟ್ ಮಾಡಿದ್ದಾರೆ.

ಬುಧವಾರದಂದು ಪ್ರೊ ಬಾಕ್ಸಿಂಗ್ ಈವೆಂಟ್ ಜಂಗಲ್ ರಂಬಲ್‌ನಲ್ಲಿ ಘಾನಾದ ಎಲಿಯಾಸು ಸುಲ್ಲಿ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಭಾರತಕ್ಕೆ ಮೊದಲ ಒಲಿಂಪಿಕ್ ಮತ್ತು ಪುರುಷರ ವಿಶ್ವ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಪದಕಗಳನ್ನು ಗೆದ್ದಿರುವ ವಿಜೇಂದರ್ ಸುಲ್ಲಿ(Sulley) ವಿರುದ್ಧ ಪ್ರಾಬಲ್ಯ ಸಾಧಿಸಿದರು.

ಒಟ್ಟು ಆರು ಸುತ್ತುಗಳ ಹೋರಾಟವಿದ್ದರೂ ಕೇವಲ ಎರಡನೇ ಸುತ್ತಿನಲ್ಲಿ ವಿಜೇಂದರ್ ನಾಕೌಟ್ ಹೊಡೆತದ ಮೂಲಕ ಎದುರಾಳಿ ನೆಲಕಚ್ಚುವಂತೆ ಮಾಡಿದರು. ವಿಜೇಂದರ್ ಪಂಚ್‌ಗಳು ಹಾಲಿ ರಾಷ್ಟ್ರೀಯ ಪಶ್ಚಿಮ ಆಫ್ರಿಕಾ ಬಾಕ್ಸಿಂಗ್ ಯೂನಿಯನ್ ಚಾಂಪಿಯನ್‌ನನ್ನು ಬೆರಗುಗೊಳಿಸಿತು.

Vijender Singh Knocks Out Eliasu Sulley in Pro Boxing Bout

36 ವರ್ಷದ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್, ಘಾನಾದ ಸ್ಪರ್ಧಿ ಎಲಿಯಾಸು ಸೋಲಿಸಲು ಕೇವಲ ಐದು ನಿಮಿಷ ಮತ್ತು ಏಳು ಸೆಕೆಂಡುಗಳನ್ನು ತೆಗೆದುಕೊಂಡರು, ಈ ಮೂಲಕ ದಾಖಲೆ ಬರೆದರು.

ಇದು ವಿಜೇಂದರ್ ಅವರ 13ನೇ ವೃತ್ತಿಪರ ಬಾಕ್ಸಿಂಗ್ ಗೆಲುವು. ವೃತ್ತಿಪರ ಸರ್ಕ್ಯೂಟ್‌ನಲ್ಲಿ ಅವರ ಏಕೈಕ ಸೋಲು ಕಳೆದ ಮಾರ್ಚ್‌ನಲ್ಲಿ ರಷ್ಯಾದ ಆರ್ಟಿಶ್ ಲೋಪ್ಸಾನ್‌ ವಿರುದ್ಧ ಕಂಡಿದ್ದರು.

"ಈ ರೀತಿ ಹಿಂತಿರುಗುತ್ತಿರುವುದು ಅದ್ಭುತವಾಗಿದೆ'' ಎಂದು ವಿಜೇಂದರ್ ಗೆಲುವಿನ ನಂತರ ಪ್ರತಿಕ್ರಿಯಿಸಿದ್ದಾರೆ. ಸುಲ್ಲಿಯನ್ನು ಜಯಿಸುವುದು ಅಷ್ಟು ಸುಲಭವಾಗಿರಲಿಲ್ಲ. "ನಾನು ಒಂದು ವಾರದಲ್ಲಿ ಜಿಮ್‌ಗೆ ಮರಳುತ್ತೇನೆ ಮತ್ತು ಡಿಸೆಂಬರ್ ಅಥವಾ ಜನವರಿಯಲ್ಲಿ ಮತ್ತೆ ಹೋರಾಡುತ್ತೇನೆ" ಎಂದು ವಿಜಯದ ನಂತರ ವಿಜೇಂದರ್ ಹೇಳಿದರು.

ಛತ್ತೀಸ್‌ಗಢದಲ್ಲಿ ಆಯೋಜನೆ
ಇದೇ ಮೊದಲ ಬಾರಿಗೆ ಛತ್ತೀಸ್‌ಗಢದ ರಾಯ್ ಪುರದಲ್ಲಿ ವೃತ್ತಿಪರ ಬೌಟ್ ಆಯೋಜನೆಗೊಂಡಿದೆ. ಪರ್ಪಲ್ ಗೋಟ್ ಸ್ಪೋರ್ಟ್ಸ್ ಟೈನ್ಮೆಂಟ್ ಎಲ್ ಎಲ್ ಪಿ ಆಯೋಜನೆಯಲ್ಲಿ ಬಲ್ಬೀರ್ ಸಿಂಗ್ ಜುನೇಜ ಸ್ಟೇಡಿಯಂನಲ್ಲಿ ಪ್ರೋ ಬಾಕ್ಸಿಂಗ್ ಪಂದ್ಯಾವಳಿ ನಡೆಯುತ್ತಿದೆ.

Vijender Singh

ಪಂದ್ಯಕ್ಕೂ ಮುನ್ನ ಮಾತನಾಡಿದ್ದ ವಿಜೇಂದರ್ ಸಿಂಗ್, "ನಾನು ಈ ಹೋರಾಟಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ, ಇದಕ್ಕಾಗಿ ನಾನು ವ್ಯಾಪಕವಾಗಿ ತರಬೇತಿ ಪಡೆದುಕೊಂಡಿದ್ದೇನೆ. ಮತ್ತೆ ವಿಜಯದ ಹಾದಿಗೆ ಮರಳಲು ಸಿಕ್ಕಿರುವ ಪರಿಪೂರ್ಣ ಅವಕಾಶ ಮತ್ತು ಸ್ಥಳ ಇದಾಗಿದೆ. ಕೊನೆಯ ಹೋರಾಟದಲ್ಲಿ ಸಣ್ಣದೊಂದು ಎಡವಟ್ಟು ಕಂಡುಬಂದಿದೆ. ಆದರೆ ನಾನು ನನ್ನೊಂದಿಗೆ ಸಜ್ಜಾಗುತ್ತಿದ್ದೇನೆ. ಎಲಿಯಾಸು ಸುಲ್ಲಿ ವಿರುದ್ಧ ಕಾರ್ಯತಂತ್ರ ರೂಪಿಸಲಾಗಿದೆ. ಮತ್ತು ನಾನು ಕಣಕ್ಕಿಳಿಯಲು ಕಾತುರನಾಗಿದ್ದೇನೆ.." ಎಂದು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದ್ದರು.

"ನನ್ನ ಸಾಮರ್ಥ್ಯ ಏನು ಎಂದು ನನಗೆ ತಿಳಿದಿದೆ ಮತ್ತು ನಾಕೌಟ್‌ನೊಂದಿಗೆ ಅವರ ಅಜೇಯ ವೃತ್ತಿಪರ ಸರಣಿಯನ್ನು ಮುರಿಯಲು ನನಗೆ ವಿಶ್ವಾಸವಿದೆ. ಸರಿಯಾದ ರೀತಿಯ ಬೆಂಬಲ ಮತ್ತು ತರಬೇತಿಯೊಂದಿಗೆ, ಕಠಿಣ ಪರಿಶ್ರಮವು ಫಲ ನೀಡುವ ಮೊದಲು ಇದು ಸಮಯದ ವಿಷಯವಾಗಿದೆ." ಎಂದು ಹೇಳಿದ್ದರು. ನುಡಿದಂತೆ ಸುಲ್ಲಿಯ ಅಜೇಯ ನಾಕೌಟ್ ಸರಣಿಯನ್ನು ವಿಜೇಂದರ್ ಮುರಿದು ದಾಖಲೆ ಬರೆದಿದ್ದಾರೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾತನಾಡಿ, ಈ ಪಂದ್ಯವನ್ನು ಆಯೋಜಿಸುವುದು ರಾಜ್ಯವನ್ನು ಕ್ರೀಡಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಛತ್ತೀಸ್‌ಗಢವನ್ನು ಕ್ರೀಡಾ ರಾಜ್ಯವನ್ನಾಗಿ ಪರಿವರ್ತಿಸುವುದು ನಾವು ಸ್ವಲ್ಪ ಸಮಯದಿಂದ ಮಾಡಲು ನೋಡುತ್ತಿದ್ದೇವೆ ಮತ್ತು ಅದು ಅಂತಿಮವಾಗಿ ಕಾರ್ಯರೂಪಕ್ಕೆ ಬರುತ್ತಿದೆ.

"ವಿಜೇಂದರ್ ಸಿಂಗ್ ಅವರ ವೃತ್ತಿಪರ ಹೋರಾಟವು ಈ ಯೋಜನೆಯನ್ನು ಮತ್ತಷ್ಟು ಬಲಪಡಿಸುತ್ತದೆ, ನಾವು ರಾಜ್ಯದೊಳಗಿನ ಜನರನ್ನು ಮಾತ್ರವಲ್ಲದೆ ಭಾರತದಾದ್ಯಂತ ಕ್ರೀಡಾಪಟುಗಳನ್ನು ಛತ್ತೀಸ್‌ಗಢವನ್ನು ಕ್ರೀಡೆಯ ಸೂಪರ್ ಪವರ್ ಎಂದು ಪರಿಗಣಿಸಲು ಪ್ರೋತ್ಸಾಹಿಸಬೇಕಾಗಿದೆ" ಎಂದು ಹೇಳಿದರು.

ಜಂಗಲ್ ರಂಬಲ್‌ನಲ್ಲಿ ಫೈಜಾನ್ ಅನ್ವರ್, ಸಚಿನ್ ನೌಟಿಯಾಲ್, ಕಾರ್ತಿಕ್ ಸತೀಶ್ ಕುಮಾರ್, ಆಶಿಶ್ ಶರ್ಮಾ, ಗುರ್‌ಪ್ರೀತ್ ಸಿಂಗ್ ಮತ್ತು ಶೈಖೋಮ್ ರೆಬಾಲ್ಡೊ ಅಂಡರ್‌ಕಾರ್ಡ್ ಫೈಟ್‌ಗಳಾಗಿ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ರಾಷ್ಟ್ರೀಯ ವೆಸ್ಟ್ ಆಫ್ರಿಕಾ ಬಾಕ್ಸಿಂಗ್ ಯೂನಿಯನ್ ಚಾಂಪಿಯನ್ ಸುಲ್ಲಿ ಅವರು ಸ್ಪರ್ಧಿಸಿದ್ದ ಎಂಟು ಪಂದ್ಯಗಳಲ್ಲಿ 100 ಪ್ರತಿಶತ ನಾಕೌಟ್ ದಾಖಲೆಯನ್ನು ಹೊಂದಿದ್ದರು ಅಜೇಯ ದಾಖಲೆಯನ್ನು ವಿಸ್ತರಿಸಲು ಬಯಸಿದ್ದರು.

English summary
Indian boxer, Vijender Singh returned to winning ways at the pro boxing event Jungle Rumble over Ghana's Eliasu Sulley here on Wednesday. Vijender, who delivered India's first Olympic and men's world championship boxing medals, dominated Sulley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X