1 ಲಕ್ಷ ಕೋಟಿ ರೂಪಾಯಿ ಎಣ್ಣೆ ಬ್ಯುಸಿನೆಸ್, ಪಕ್ಕಾ ಲೆಕ್ಕ ಹಾಕಿ ಆರ್‌ಸಿಬಿ ಖರೀದಿಸಿದ್ದ ವಿಜಯ್ ಮಲ್ಯ! Vijay Mallya
ವಿಜಯ್ ಮಲ್ಯ ಶತಕೋಟಿ ಭಾರತೀಯರ ಕಣ್ಣಿಗೆ ವಿಲನ್ ಆಗಿದ್ದರು, ವಿಜಯ್ ಮಲ್ಯ ಸಾಲ ಮಾಡಿ ಓಡಿ ಹೋಗಿದ್ದಾರೆ ಅನ್ನೋ ಕಳಂಕ ಅವರಿಗೆ ಮೆತ್ತಿಕೊಂಡಿತ್ತು. ಕನ್ನಡ ನಾಡಿನ ಅತಿದೊಡ್ಡ ಉದ್ಯಮಿ ಆಗಿದ್ದ ವಿಜಯ್ ಮಲ್ಯ ಅವರಿಗೆ ಈ ಕೆಟ್ಟ ಹೆಸರು ಕಂಗಾಲಾಗುವ ರೀತಿ ಮಾಡಿತ್ತು. ಇದೆಲ್ಲವನ್ನೂ ಮೀರಿ ನಿಂತಿದ್ದ ವಿಜಯ್ ಮಲ್ಯ ಕೊನೆಗೆ ದೇಶವನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬಂತು. ಆದರೆ ಇದೀಗ ತಮ್ಮ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಖಾಸಗಿ ಸಂದರ್ಶನ ನೀಡಿರುವ ಇದೇ ವಿಜಯ್ ಮಲ್ಯ ಅವರು, ಆರ್‌ಸಿಬಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ...
ವಿಜಯ್ ಮಲ್ಯ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದವು, ವಿಜಯ್ ಮಲ್ಯ ಹಂಗೆ & ಹಿಂಗೆ ಅಂತಾನೂ ಮಾತು ಆಡುತ್ತಿದ್ದರು ಜನ. ಆದರೆ ಇದೀಗ ತಮ್ಮ ಜೀವನದ ಸತ್ಯ ಘಟನೆ ಬಿಚ್ಚಿಟ್ಟಿರುವ ಉದ್ಯಮಿ ವಿಜಯ್ ಮಲ್ಯ ಆ ಎಲ್ಲಾ ಸತ್ಯವನ್ನೂ ಜಗತ್ತಿನ ಎದುರು ತಿಳಿಸಿದ್ದಾರೆ. ಅದರಲ್ಲೂ ಆರ್‌ಸಿಬಿ ತಂಡವನ್ನು ಕಟ್ಟಿದ್ದು ಯಾಕೆ? ಬೆಂಗಳೂರು ತಂಡ ಖರೀದಿ ಮಾಡಿದ ಉದ್ದೇಶ ಏನು? ಅನ್ನೋ ಸತ್ಯವನ್ನು ಪ್ರಪಂಚದ ಎದುರು ಒಪ್ಪಿಕೊಂಡಿದ್ದಾರೆ ಮಲ್ಯ...

1 ಲಕ್ಷ ಕೋಟಿ ರೂಪಾಯಿ ಎಣ್ಣೆ ಬ್ಯುಸಿನೆಸ್!
ಹೌದು, ಭಾರತದಲ್ಲಿ ಸುಮಾರು 1.75 ಲಕ್ಷ ಕೋಟಿ ಅಂದ್ರೆ ಒಂದೂ ಮುಕ್ಕಾಲು ಲಕ್ಷ ಕೋಟಿ ರೂಪಾಯಿ ಮೊತ್ತದ ಬೃಹತ್ ಮದ್ಯದ ಉದ್ಯಮ ಕಟ್ಟಿದ್ದ ವಿಜಯ್ ಮಲ್ಯ ಆರ್‌ಸಿಬಿ ತಂಡ ಖರೀದಿ ಮಾಡಿದ್ದರು. 2008ರ ಸಮಯದಲ್ಲಿ ಆರ್‌ಸಿಬಿ ತಂಡ ಕಟ್ಟಿದ್ದ ವಿಜಯ್ ಮಲ್ಯ ದೊಡ್ಡ ಹೆಸರು ಮಾಡಿದ್ದರು. ಹೀಗಿದ್ದಾಗಲೇ, 1 ಲಕ್ಷ ಕೋಟಿ ರೂಪಾಯಿ ಎಣ್ಣೆ ಬ್ಯುಸಿನೆಸ್, ಪಕ್ಕಾ ಲೆಕ್ಕ ಹಾಕಿ ಆರ್‌ಸಿಬಿ ಖರೀದಿಸಿದ್ದ ವಿಜಯ್ ಮಲ್ಯ! ಅನ್ನೋ ಸತ್ಯ ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ...
ಎಣ್ಣೆ ಬ್ಯುಸಿನೆಸ್ ಪ್ರಮೋಷನ್‌ಗೆ ತಂಡ ಖರೀದಿ!
ವಿಜಯ್ ಮಲ್ಯ ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಮದ್ಯದ ದೊರೆ ಅಂತಾನೇ ಹೆಸರು ಮಾಡಿದ್ದವರು. ವಿಜಯ್ ಮಲ್ಯ ಭಾರತದ ಬಹುದೊಡ್ಡ ಉದ್ಯಮಗಳನ್ನು ಕಟ್ಟಿ ಬೆಳೆಸಿದರು, ಅದರಲ್ಲೂ ವಿಜಯ್ ಮಲ್ಯ ಭಾರತದಲ್ಲಿ ಮದ್ಯ ಅಂದ್ರೆ ಲಿಕ್ಕರ್ ಬ್ಯುಸಿನೆಸ್‌ಗೆ ಹೊಸ ರೂಪ ನೀಡಿದ್ದರು. ಹೀಗೆ ವಿಜಯ್ ಮಲ್ಯ ಇಡೀ ಜಗತ್ತೇ ತಿರುಗಿ ನೋಡುವ ರೀತಿ ಭಾರತೀಯ ಮದ್ಯ ಉದ್ಯಮ ಬೆಳೆಸುವ ಗುರಿ ಹೊಂದಿದ್ದರು. ಹೀಗಿದ್ದಾಗಲೇ ತಮ್ಮ ಮದ್ಯದ ಬ್ರಾಂಡ್ ಆಗಿದ್ದ ರಾಯಲ್ ಚಾಲೆಂಜರ್‌ಗೆ ದೊಡ್ಡ ಮಾರುಕಟ್ಟೆ ಒದಗಿಸಲು ವಿಜಯ್ ಮಲ್ಯ ಆರ್‌ಸಿಬಿ ತಂಡ ಖರೀದಿ ಮಾಡಿದ್ದರಂತೆ. ಹೀಗೆ ಅವರು ತಮ್ಮ ಬ್ರಾಂಡ್‌ನ ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಸಿ ಸಕ್ಸಸ್ ಕೂಡ ಆಗಿದ್ದರು ಎಂಬುದನ್ನ ಅವರೇ ತಿಳಿಸಿದ್ದಾರೆ.












Click it and Unblock the Notifications