ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರಿಗೆ ವಿಜಯ್ ಮಲ್ಯ ಕಡೆಯಿಂದ 01 ದೊಡ್ಡ... Vijay Mallya

ಕನ್ನಡಿಗರೇ ಕುಣಿದು ಕುಪ್ಪಳಿಸುವ ಸಮಯ ಬಂದೇ ಬಿಟ್ಟಿದೆ, ಕನ್ನಡಿಗರ ರಾಜಧಾನಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದು ಬೀಗಿದೆ. ಈ ಖುಷಿ ನಡುವೆ ಇಡೀ ಇಂಡಿಯಾ ಪೂರ್ತಿ ನಮ್ಮ ಆರ್‌ಸಿಬಿ ಗೆಲುವು ಸಂಭ್ರಮಿಸುತ್ತಿದ್ದಾರೆ ಕನ್ನಡ ನಾಡಿನ ಮಕ್ಕಳು. ಹೀಗಿದ್ದಾಗಲೇ, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರಿಗೆ ವಿಜಯ್ ಮಲ್ಯ ಕಡೆಯಿಂದ 01 ದೊಡ್ಡ...

ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ & ಪಂಜಾಬ್ ನಡುವಿನ ಮಹತ್ವದ ಐಪಿಎಲ್ 2025 ಫೈನಲ್ ಪಂದ್ಯ ಭಾರಿ ಕೂತೂಹಲ ಕೆರಳಿಸಿತ್ತು. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, ಆರ್‌ಸಿಬಿ ತಂಡದ ಸ್ಕೋರ್ 190 ರನ್‌ಗೆ ನಿಲ್ಲುವಂತೆ ಮಾಡಿತ್ತು. ಆದರೆ ಇದೇ ವಿಚಾವರನ್ನು ಚಾಲೆಂಜ್ ಆಗಿ ಆರ್‌ಸಿಬಿ ತೆಗೆದುಕೊಂಡು, ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತ್ತು. ಕೊನೆಗೆ ಪಂಜಾಬ್ ತಂಡವನ್ನು ಕೇವಲ 184 ರನ್‌ಗೆ ಕಟ್ಟಿಹಾಕುವ ಮೂಲಕ ಆರ್‌ಸಿಬಿ ತಂಡ ಭರ್ಜರಿಯಾಗಿ ಐಪಿಎಲ್ 2025 ಫೈನಲ್ ಪಂದ್ಯ ಗೆದ್ದು ಮೊಟ್ಟ ಮೊದಲ ಬಾರಿಗೆ ಕಪ್ ತನ್ನದಾಗಿಸಿಕೊಂಡಿದೆ. ಹೀಗಿದ್ದಾಗಲೇ, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರಿಗೆ ವಿಜಯ್ ಮಲ್ಯ ಕಡೆಯಿಂದಲೂ 01 ದೊಡ್ಡ...

Vijay Mallya Said This About RCB Victory In IPL 2025

ದವಿಜಯ್ ಮಲ್ಯ ಕಡೆಯಿಂದಲೂ 01 ದೊಡ್ಡ...

ಬೆಂಗಳೂರು ಕ್ರಿಕೆಟ್ ತಂಡ ಆರ್‌ಸಿಬಿ 18 ವರ್ಷಗಳ ಕನಸು ಇದೀಗ ನನಸು ಆಗಿದೆ. ಐಪಿಎಲ್ ಕಪ್ ಗೆಲ್ಲಬೇಕು, ಆ ಮೂಲಕ ಹೊಸ ಇತಿಹಾಸ ನಿರ್ಮಿಸಬೇಕು ಎಂಬ ಆಸೆ ಕೂಡ ಈಡೇರಿದೆ. ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಇದೀಗ ಜೂನ್ 3 ಮಂಗಳವಾರ ವಿಶೇಷ ದಿನ ಎಂದು ಆಚರಿಸಿದ್ದಾರೆ. ಹೀಗಿದ್ದಾಗಲೇ, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರಿಗೆ ವಿಜಯ್ ಮಲ್ಯ ಕಡೆಯಿಂದಲೂ 01 ದೊಡ್ಡ...

ಮಲ್ಯ ಹೆಸರು ಕೇಳಿದ್ರೆ ಸಾಕು ಎಷ್ಟು ಕೋಟಿ ರೂಪಾಯಿ ಸಾಲ ಮಾಡಿದ್ದಾರೆ? ವಿಜಯ್ ಮಲ್ಯ ಸಾಲ ತೀರಿಸಿದ್ರಾ? ಅನ್ನೋ ಪ್ರಶ್ನೆ ಜನರು ಕೇಳುತ್ತಾರೆ. ಆದರೆ ಇದೇ ವಿಜಯ್ ಮಲ್ಯ ಕನ್ನಡಿಗರ ರಾಜಧಾನಿ ಬೆಂಗಳೂರು ಹೆಸರಲ್ಲಿ ಐಪಿಎಲ್ ಟೀಂ ಕಟ್ಟಿದ್ದರು ಅನ್ನೋದು ಕ್ರಿಕೆಟ್ ಫ್ಯಾನ್ಸ್‌ಗೆ ಮಾತ್ರ ಗೊತ್ತು. ಬೆಂಗಳೂರು ತಂಡ ಆರ್‌ಸಿಬಿ ಮಾಲೀಕ ಆಗಿದ್ದ ವಿಜಯ್ ಮಲ್ಯ ಸಾಲ ಮಾಡಿ ದೇಶ ಬಿಟ್ಟಿದ್ರು ಎಂಬ ಆರೋಪ ಇತ್ತು. ಆದರೆ ಉದ್ಯಮಿ ವಿಜಯ್ ಮಲ್ಯ ವಿರುದ್ಧದ ಆರೋಪ ಇನ್ನೂ ಆರೋಪವಾಗಿಯೇ ಉಳಿದಿದೆ. ಇಂತಹ ಸಮಯದಲ್ಲೇ ಆರ್‌ಸಿಬಿ ತಂಡ 18 ವರ್ಷ ನಂತರ ಐಪಿಎಲ್ ಕಪ್ ಗೆದ್ದಿದ್ದು ಇದೀಗ ವಿಜಯ್ ಮಲ್ಯ ಕೂಡ ಶುಭಾಶಯ ಕೋರಿದ್ದಾರೆ.

2025 ಐಪಿಎಲ್ ಅಖಾಡದಲ್ಲಿ ಅದ್ಭುತ ಪ್ರದರ್ಶನ...

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರಿಗೆ ವಿಜಯ್ ಮಲ್ಯ ಭರ್ಜರಿಯಾಗಿ ಈಗ ಶುಭಾಶಯ ಕೋರಿದ್ದು, ಟ್ವೀಟ್ ಮೂಲಕ ಭಾರಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. '18 ವರ್ಷಗಳ ನಂತರ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ಐಪಿಎಲ್ ಅಖಾಡದಲ್ಲಿ ಅದ್ಭುತ ಪ್ರದರ್ಶನ. ಅತ್ಯುತ್ತಮ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಜೊತೆ ಉತ್ತಮ ಸಮತೋಲನ ಹೊಂದಿರುವ ತಂಡವಾಗಿದೆ. ಕಪ್ ಗೆದ್ದಿರುವ ಆರ್‌ಸಿಬಿ ತಂಡಕ್ಕೆ ಅಭಿನಂದನೆ! ಈ ಸಲ ಕಪ್ ನಮ್ದೆ!!' ಅಂತಾ ಇದೀಗ ಟ್ವೀಟ್ ಮಾಡಿದ್ದಾರೆ ಆರ್‌ಸಿಬಿ ತಂಡದ ಮಾಜಿ ಮಾಲೀಕ ಮತ್ತು ಉದ್ಯಮಿ ವಿಜಯ್ ಮಲ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+