14 ವರ್ಷದ ವೈಭವ್ ಸೂರ್ಯವಂಶಿಯನ್ನು ಕೊಂಡಾಡಿದ ರಾಹುಲ್ ದ್ರಾವಿಡ್ ಆದರೆ..

ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸಿದ್ದಾರೆ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಈ ಹುಡುಗ ಕ್ರಿಕೆಟ್ ಪಂದ್ಯದಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾನೆ. ತನ್ನ ಅದ್ಭುತ ಆಟಗಾರಿಕೆ ಮೂಲಕ ಭಾರತೀಯ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈಭವ್ ಸೂರ್ಯವಂಶಿ ಆಟಗಾರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಇದೀಗ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿ ಕ್ರಿಕೆಟ್ ಘಟಾನುಘಟಿಗಳನ್ನು ಹಿಂದಿರುಗಿ ನೋಡುವಂತೆ ಮಾಡಿದ್ದಾರೆ ವೈಭವ್ ಸೂರ್ಯವಂಶಿ. ಅಂದಹಾಗೆ ವೈಭವ್ ಸೂರ್ಯವಂಶಿ ಇದೀಗ ಕೇವಲ 14 ವರ್ಷ ವಯಸ್ಸು. ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಲು ಹೇಗೆ ಸಾಧ್ಯ ಇವರಿಗೆ ವಯಸ್ಸು ಹೆಚ್ಚಾಗಿರಬಹುದು ಎಂದು ಸುದ್ದಿಗಳು ಹರಿದಾಡುತ್ತಿವೆ. ಇದೆಲ್ಲದರ ನಡುವೆ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವೈಭವ್ ಸೂರ್ಯವಂಶಿ ಬಗ್ಗೆ ಕೆಲವೊಂದಿಷ್ಟು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Vaibhav Suryavanshi Performance is good Rahul Dravid Praised

ಸಂದರ್ಶನವೊಂದರಲ್ಲಿ ವೈಭವ್‌ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, 'ವೈಭವ್ ಸೂರ್ಯವಂಶಿ ಯುವ ಆಟಗಾರ. ಆತನಿಗೆ ಸಿಗುತ್ತಿರುವ ಪ್ರಶಂಸೆ ನಿಜಕ್ಕೂ ದೊಡ್ಡದು. ಈ ಹೊಗಳಿಕೆಯ ನಡುವೆ ಆತನನ್ನು ಹೇಗೆ ಬೆಳೆಸಬೇಕು ಎಂಬ ಬಗ್ಗೆ ಯೋಚಿಸುವುದು ಮುಖ್ಯ' ಎಂದು ಹೇಳಿದ್ದಾರೆ.

Take a Poll

ವೈಭವ್ ಮೂರು ಐಪಿಎಲ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆತನ ಅದ್ಭುತ ಆಟಗಾರಿಕೆಯನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ನಮ್ಮ ಪ್ರಶಂಸೆ ಅವರ ಕಲಿಕೆಯನ್ನು ನಿಲ್ಲಿಸಬಾರದು. ಮುಂದುವರೆಯುವತ್ತಾ ನಾವು ಅವರನ್ನು ಕೊಂಡೊಯ್ಯಬೇಕು. ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ. ಆದರೆ ಅವರು ಕಲಿಯುವುದು ತುಂಬಾ ಇದೆ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.

ಅಲ್ಲದೆ ದ್ರಾವಿಡ್ ವೈಭವ್ ಸೂರ್ಯವಂಶಿ ಬಗ್ಗೆ ವಿಶೇಷ ಗುಣಗಳನ್ನು ವರ್ಣಿಸಿದ್ದಾರೆ. 'ಆತನಿಗೆ ಭಯವಿಲ್ಲ. ಯಾವುದೇ ಸಂದರ್ಭಕ್ಕೂ ಆತ ಹೆದರದೆ ಮುನ್ನುಗ್ಗುತ್ತಾನೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಆಟ ನೋಡುವುದು ತುಂಬಾ ಅಪರೂಪ. ಆತ ಹೊಡೆಯುವ ಶಾಟ್‌ಗಳು ತುಂಬಾ ಅದ್ಭುತವಾಗಿವೆ ಎಂದು ದ್ರಾವಿಡ್ ವರ್ಣಿಸಿದ್ದಾರೆ.

Vaibhav Suryavanshi Performance is good Rahul Dravid Praised

ಜೊತೆಗೆ ವೈಭವ್ ಸೂರ್ಯವಂಶಿ ದೊಡ್ಡ ಆಟಗಾರನಲ್ಲ. ಆತ ಕಲಿಯುವುದು ತುಂಬಾ ಇದೆ. ಆತನನ್ನು ಯಾರೂ ದೊಡ್ಡ ಆಡಗಾರ ಎಂದು ಕರೆಯಬೇಡಿ. ವೈಭವ್‌ಗೆ ಸಿಕ್ಸ್ ಹೊಡೆಯುವ ಸಾಮರ್ಥ್ಯ ಇದೆ. ಆತನ ಬ್ಯಾಟ್ ವೇಗ, ಬಾಲ್‌ ಅನ್ನು ಗ್ರಹಿಸುವ ಸಾಮರ್ಥ್ಯ ನನಗೆ ಅಚ್ಚರಿ ತರಿಸಿದೆ. ಈ ಹೊಗಳಿಕೆಯಿಂದಾಗಿ ಮುಂದಿನ ಆಟಗಳಲ್ಲಿ ಆತ ಎದುರಾಳಿ ತಂಡಗಳನ್ನು ಎದುರಿಸಲು ವಿಫಲವಾಗುಬಹುದು ಎಂದು ದ್ರಾವಿಡ್ ಹೊಗಳಿದ್ದಾರೆ.

ಜೊತೆಗೆ ವೈಭವ್ ತಮ್ಮ ಅದ್ಭುತ ಆಟಗಾರಿಕೆಗೆ ದ್ರಾವಿಡ್ ಅವರೇ ಕಾರಣ ಎಂದು ಹೇಳಿದ್ದರು. ಆದರೆ ದ್ರಾವಿಡ್ ಅದನ್ನು ಅಲ್ಲಗಳಿದಿದ್ದಾರೆ. ವೈಭವ್ ಅವರ ಸಾಧನೆಗೆ ಅವರೇ ಕಾರಣ. ಅವರ ತಂದೆ ವೈಭವ್ ಅವರಿಗೆ ಬೆಂಬಲ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಅನೇಕ ಜನರು ಆತನಿಗೆ ಸಹಾಯ ಮಾಡಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+