Vaibhav Sooryavanshi: ಟೀಮ್ ಇಂಡಿಯಾ ಪ್ಲೇಯಿಂಗ್‌ 11ನಲ್ಲಿ ವೈಭವ್ ಸೂರ್ಯವಂಶಿಗೆ ಯಾಕಿಲ್ಲ ಸ್ಥಾನ? ಇಲ್ಲಿದೆ ಮಾಹಿತಿ

Vaibhav Sooryavanshi: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20ಐ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ವಲಯದಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಸ್ಟೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆದಿರುವ ಈ ಯುವ ಬ್ಯಾಟರ್, ಪ್ರಸ್ತುತ ಟೀಮ್ ಇಂಡಿಯಾದಲ್ಲಿದ್ದರೂ ಪ್ಲೇಯಿಂಗ್ 11ನಲ್ಲಿ ಜಾಗ ಪಡೆಯಲು ಹೆಣಗಾಡುತ್ತಿರುವುದು ಕುತೂಹಲ ಮೂಡಿಸಿದೆ.

ಪ್ರಸ್ತುತ ಭಾರತ ಟಿ20 ತಂಡದ ಆರಂಭಿಕ ಜೋಡಿಯಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಸತತವಾಗಿ ರನ್ ಗಳಿಸುತ್ತಿದ್ದು, ತಂಡಕ್ಕೆ ಬಲವಾದ ತಡಿಪಾಯ ಹಾಕಿಕೊಡುತ್ತಿದ್ದಾರೆ. ಹೀಗಾಗಿ ಗೆಲ್ಲುವ ಯಾವುದೇ ಕಾರಣವಿಲ್ಲದೆ ತಂಡದಲ್ಲಿ ಬದಲಾವಣೆ ಮಾಡಲು ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬಯಸುತ್ತಿಲ್ಲ.

Vaibhav Sooryavanshi Why Is the Team india 15-Year-Old young Star Waiting for His T20I Debut

ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್‌ 11ನಲ್ಲಿ ಯಾಕೆ ಸ್ಥಾನ ಇಲ್ಲ?

ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿರುವಂತೆ, 'ಸತತವಾಗಿ ರನ್ ಗಳಿಸುತ್ತಿರುವ ಆಟಗಾರರಿರುವಾಗ ವೈಭವ್ ಸೂರ್ಯವಂಶಿಗೆ ಈಗಲೇ ನೇರ ಪ್ರವೇಶ ಸಿಗುವುದಿಲ್ಲ.' ವೈಭವ್‌ಗೆ ಪರಿಸ್ಥಿತಿಯ ಕಠಿಣ ಸತ್ಯವನ್ನು ಕೋಚ್ ಗೌತಮ್ ಗಂಭೀರ್ ಮನವರಿಕೆ ಮಾಡಿಕೊಟ್ಟಿದ್ದು, ಅವರನ್ನು ತಂಡದ ಯೋಜನೆಯಿಂದ ಹೊರಗಿಡಲಾಗಿಲ್ಲ. ಬದಲಿಗೆ ಸೂಕ್ತ ಸಮಯ ಬಂದಾಗ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.

ವೈಭವ್‌ಗೆ ತಾಳ್ಮೆಯಿಂದ ಇರುವಂತೆ ಸಲಹೆ

ವೈಭವ್ ಸೂರ್ಯವಂಶಿ ಇನ್ನು ಕೇವಲ 15 ವರ್ಷದ ಯುವ ಆಟಗಾರ. ಅವರಿಗೆ ಸುದೀರ್ಘ ಕ್ರಿಕೆಟ್ ವೃತ್ತಿಜೀವನ ಮುಂದಿದೆ. ಈ ಹಂತದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರ ಒತ್ತಡಕ್ಕೆ ಒಡ್ಡುವ ಬದಲು, ಹಿರಿಯ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಾ ಅನುಭವ ಪಡೆಯುವುದು ಅವರ ಭವಿಷ್ಯಕ್ಕೆ ಒಳ್ಳೆಯದು ಎಂಬುದು ಮ್ಯಾನೇಜ್‌ಮೆಂಟ್ ಲೆಕ್ಕಾಚಾರವಾಗಿದೆ.

ವೈಭವ್ ಸೂರ್ಯವಂಶಿಗೆ ಅವಕಾಶ ಯಾವಾಗ?

ಬೆಂಚ್ ಕಾಯಬೇಕಾಗಿ ಬಂದರೂ, ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಮುಂದಿನ ಭರವಸೆಯಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆರಂಭಿಕ ಬ್ಯಾಟರ್‌ಗಳಲ್ಲಿ ಯಾರಾದರೂ ಗಾಯಗೊಂಡರೆ ಅಥವಾ ಸತತವಾಗಿ ವಿಫಲರಾದರೆ ಮಾತ್ರ ವೈಭವ್ ಅವರಿಗೆ ಭಾರತದ ಪ್ಲೇಯಿಂಗ್ 11ನಲ್ಲಿ ಖಾಯಂ ಸ್ಥಾನ ಸಿಗಲಿದೆ. ಅಲ್ಲಿಯವರೆಗೆ ಈ ಯುವ ಪ್ರತಿಭೆ ತಾಳ್ಮೆಯಿಂದ ಅವಕಾಶಕ್ಕಾಗಿ ಕಾಯಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+