Vaibhav Sooryavanshi: ಮೈದಾನದಲ್ಲೇ ವೈಭವ್ ಸೂರ್ಯವಂಶಿಗೆ ತಿಲಕ್ ವರ್ಮಾ ತರಾಟೆ, ಆಡಿಯೋ ಭಾರೀ ವೈರಲ್

Vaibhav Sooryavanshi: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನವೇ ದಕ್ಷಿಣ ವಲಯ ಹಾಗೂ ಪೂರ್ವ ವಲಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ವೇಳೆ ಪೂರ್ವ ವಲಯದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಮುಂದುವರೆಸಿದ್ದು, ಅವರನ್ನು ಎದುರಾಳು ತಂಡದ ತಿಲಕ್ ವರ್ಮಾ ಅವರು ಕೆಣಕಲು ಪ್ರಯತ್ನಿಸಿದರು. ಈ ವಿಡಿಯೋ ಇದೀಗ ಸಾಮಾಜಿ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ನಡೆದಿದ್ದೇನು ಎಂದು ಇಲ್ಲಿ ತಿಳಿಯಿರಿ.

ಈ ಪಂದ್ಯದಲ್ಲಿ ಪೂರ್ವ ವಲಯದ ಉಪನನಾಯಕ ವೈಭವ್ ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್‌ಗೆ ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಸ್ಲೆಡ್ಜಿಂಗ್ ತಂತ್ರದ ಮೊರೆ ಹೋದರು. ಆದರೂ ತಗ್ಗದ ವೈಭವ್ ಆಕ್ರಮಣಕಾರಿ ಬ್ಯಾಟಿಂಗ್‌ ಮುಂದುವರೆಸಿದ್ದು, ಕೊನೆಗೆ ತಿಲಕ್ ಅವರ ಯೋಜನೆ ಫಲ ಕೊಟ್ಟಿತು. ಇದು ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

Vaibhav Sooryavanshi vs Tilak Varma Sledging Goes Viral on Social media Duleep Trophy Final 2026

ಉತ್ತಮ ಆರಂಭ ನೀಡಿದ ಈಶ್ವರನ್, ವೈಭವ್

ಈಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ಅದ್ಭುತ ಆರಂಭ ಒದಗಿಸಿಕೊಟ್ಟಿತು. ಆರಂಭಿಕ ಓವರ್‌ಗಳಲ್ಲಿ ಬೌಲರ್‌ಗಳಿಗೆ ನೆರವು ಸಿಗುವ ನಿರೀಕ್ಷೆಯಿತ್ತು. ಆದರೂ ಸೂರ್ಯವಂಶಿ ಎದುರಾಳಿ ತಂಡದ ಪ್ರಮುಖ ವೇಗಿ ಮಹಮ್ಮದ್ ಸಿರಾಜ್ ಅವರ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸುವ ಮೂಲಕ ಕೇವಲ 15 ಓವರ್‌ಗಳಲ್ಲಿ ಶತಕ (100 ರನ್) ಮುಟ್ಟಿಸಿದರು.

ವೈಭವ್ ಸೂರ್ಯವಂಶಿ ಕೆಣಕಿದ ತಿಲಕ್ ವರ್ಮಾ

ವೇಗದ ಬೌಲರ್‌ಗಳು ರನ್ ನಿಯಂತ್ರಿಸಲು ವಿಫಲರಾದಾಗ ಹಾಗೂ ಮೈದಾನದ ಫೀಲ್ಡಿಂಗ್ ತಂತ್ರ ಫಲ ನೀಡದಿದ್ದಾಗ, ನಾಯಕ ತಿಲಕ್ ವರ್ಮಾ ತಾವೇ ಖುದ್ದಾಗಿ ಬ್ಯಾಟರ್‌ನ ಏಕಾಗ್ರತೆ ಭಂಗಗೊಳಿಸಲು ಯತ್ನಿಸಿದರು. ಪಂದ್ಯದ 10ನೇ ಓವರ್ ವೇಳೆ ವೈಭವ್ ಹತ್ತಿರ ಬಂದ ತಿಲಕ್, ಸ್ಟಂಪ್ ಮೈಕ್‌ನಲ್ಲಿ 'ಕ್ಯಾ ರೇ ಯೇ ವೈಸ್ ಕ್ಯಾಪ್ಟನ್?' (ಏನಪ್ಪಾ ವೈಸ್ ಕ್ಯಾಪ್ಟನ್?) ಎಂದು ತಮಾಷೆಯಾಗಿ ಕಾಡಿಸಿದರು.

ಬಿಹಾರ ಮೂಲದ 15 ವರ್ಷದ ವೈಭವ್ ಸೂರ್ಯವಂಶಿ ಅವರು ಪೂರ್ವ ವಲಯ ತಂಡದ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಆದ್ದರಿಂದ ಎದುರಾಳಿ ತಂಡದ ನಾಯಕ ತಿಲಕ್ ವರ್ಮಾ ಅವರು ಈ ರೀತಿಯ ಕಮೆಂಟ್ ಮಾಡಿದ್ದರು. ಮೈದಾನದಲ್ಲಿ ನಡೆದ ಈ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಫಲ ನೀಡಿದ ತಿಲಕ್ ವರ್ಮಾ ತಂತ್ರ

ತಿಲಕ್ ಅವರ ಈ ತಂತ್ರ ಅಥವಾ ಸ್ಲೆಡ್ಜಿಂಗ್ ಸೂರ್ಯವಂಶಿ ಅವರ ರನ್ ವೇಗವನ್ನು ತಕ್ಷಣವೇ ತಡೆಯದಿದ್ದರೂ, ಶೀಘ್ರದಲ್ಲೇ ಫಲ ನೀಡಿತು. ಅರ್ಧಶತಕದತ್ತ ಸಾಗುತ್ತಿದ್ದ ಸೂರ್ಯವಂಶಿ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದ್ದಾಗ ಎಡಗೈ ವೇಗಿ ಸಿ.ವಿ.ಮಿಲಿಂದ್ ಅವರ ಶಾರ್ಟ್ ಬಾಲ್ ಎದುರಿಸುವಾಗ ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಅನುಭವಿ ಬ್ಯಾಟರ್ ಅಭಿಮನ್ಯು ಈಶ್ವರನ್ 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೂ ನಂತರದ ಓವರ್‌ನಲ್ಲಿ ರನ್‌ಔಟ್‌ಗೆ ಬಲಿಯಾದರು. ಮೊದಲ ಸೆಷನ್ ಅಂತ್ಯದ ವೇಳೆಗೆ ಪೂರ್ವ ವಲಯ ತಂಡ 2 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತ್ತು. ಒಟ್ಟಿನಲ್ಲಿ ಇದೀಗ ದಕ್ಷಿಣ ವಲಯ ತಂಡದ ನಾಯಕ ತಿಲಕ್ ವರ್ಮಾ ಅವರು ಪೂರ್ವ ವಲಯ ಉಪನಾಯಕ ವೈಭವ್ ಸೂರ್ಯವಂಶಿ ಅವರನ್ನು ಕಣಕಿದ್ದು ಈಗ ಸಾಮಾಜಿಕ ಜಾಲತಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಿಲಕ್ ಕೆಣಕದಿದ್ದರೆ, ವೈಭವ್ ಇನ್ನೂ ರನ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದರು ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+