ಒಂದೆಡೆ ವಿರಾಟ್, ರೋಹಿತ್.. ಮತ್ತೊಂದೆಡೆ 15 ವರ್ಷದ ವೈಭವ್ ಸೂರ್ಯವಂಶಿ: ವೀರೇಂದ್ರ ಸೆಹ್ವಾಗ್ ಹಿಂಗ್ ಹೇಳಿದ್ಯಾಕೆ?

Vaibhav Sooryavanshi: ಟೀಮ್ ಇಂಡಿಯಾ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಂಯಿಂದಲೇ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ವೈಭವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು, ಉದಯೋನ್ಮುಖ ಬ್ಯಾಟಿಂಗ್ ಪ್ರತಿಭೆ ವೈಭವ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸೂರ್ಯವಂಶಿ ಅವರಲ್ಲಿ ತಮ್ಮದೇ ಆದ ಸ್ಫೋಟಕ ಬ್ಯಾಟಿಂಗ್ ಶೈಲಿ ಕಾಣಿಸುತ್ತಿದ್ದು, ಈ ಯುವ ಆಟಗಾರ ಭಾರತಕ್ಕಾಗಿ ಸುದೀರ್ಘ ವೃತ್ತಿಜೀವನವನ್ನು ರೂಪಿಸಿಕೊಳ್ಳುವತ್ತ ಸಂಪೂರ್ಣ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

Vaibhav Sooryavanshi Virender Sehwag Sees His Own Batting Style in 15-Year-Old India young Star

ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟ

ದೆಹಲಿಯಲ್ಲಿ ನಡೆದ 'ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ'ಯ ವಾರ್ಷಿಕ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಸೆಹ್ವಾಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,253 ರನ್‌ಗಳನ್ನು ಕಲೆಹಾಕಿದ ತಮ್ಮ ಅನುಭವದ ಹಿನ್ನೆಲೆಯಲ್ಲಿ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 15 ವರ್ಷದ ಸೂರ್ಯವಂಶಿ ಈವರೆಗೆ ಆಡಿರುವ 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 186ರ ಅದ್ಭುತ ಸ್ಟ್ರೈಕ್-ರೇಟ್‌ನೊಂದಿಗೆ 246 ರನ್ ಗಳಿಸಿ ಗಮನ ಸೆಳೆದಿದ್ದಾರೆ.

'ಮೊದಲ ಎಸೆತದಿಂದಲೇ ದಾಳಿ'

ಯುವ ಪ್ರತಿಭೆಯ ಕುರಿತು ಮಾತನಾಡಿದ 47 ವರ್ಷದ ಸೆಹ್ವಾಗ್, 'ವೈಭವ್ ಸೂರ್ಯವಂಶಿ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಎಸೆತದಿಂದಲೇ ಬೌಂಡರಿ-ಸಿಕ್ಸರ್ ಬಾರಿಸಿ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರುವ ಅವರ ಆಲೋಚನಾ ಶೈಲಿ ಬಹುತೇಕ ನನ್ನಂತೆಯೇ ಇದೆ. ಈಗ ಅವರಿಗೆ ಭಾರತ ತಂಡದಲ್ಲಿ ನಿರಂತರ ಅವಕಾಶಗಳು ಯಾವಾಗ ಸಿಗುತ್ತವೆ ಮತ್ತು ಅವರು ಎಷ್ಟು ಪಂದ್ಯಗಳಲ್ಲಿ ಜವಾಬ್ದಾರಿಯುತವಾಗಿ ಆಡುತ್ತಾರೆ ಎಂಬುದಷ್ಟೇ ಪ್ರಮುಖ ವಿಷಯ,' ಎಂದು ಹೇಳಿದರು.

'ಕ್ರಿಕೆಟ್‌ನಲ್ಲಿ ವಯಸ್ಸಲ್ಲ, ಪ್ರದರ್ಶನವೇ ಮುಖ್ಯ'

ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿದ್ದರೆ ವಯಸ್ಸು ಎಷ್ಟೇ ಇದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ ಎಂದು ಸೆಹ್ವಾಗ್ ಸ್ಪಷ್ಟಪಡಿಸಿದರು. 'ನೀವು ಅಂಡರ್-19 ಆಡುತ್ತಿದ್ದರೆ, ನಿಮ್ಮ ವಯಸ್ಸು 19ಕ್ಕಿಂತ ಕಡಿಮೆ ಇರುವುದು ನಿಯಮ. ಆದರೆ ಒಮ್ಮೆ ಐಪಿಎಲ್ ಅಥವಾ ಭಾರತ ರಾಷ್ಟ್ರೀಯ ತಂಡದ ಪರ ಅಂಗಳಕ್ಕಿಳಿದ ಮೇಲೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ಒಂದೆಡೆ 38 ಅಥವಾ 40 ವರ್ಷದ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ಇನ್ನೊಂದೆಡೆ 15 ವರ್ಷದ ವೈಭವ್ ಸೂರ್ಯವಂಶಿ ಆಡುತ್ತಿದ್ದಾರೆ. ಇಲ್ಲಿ ಅಂತಿಮವಾಗಿ ಪಂದ್ಯದ ಪ್ರದರ್ಶನವೊಂದೇ ಮುಖ್ಯವಾಗುತ್ತದೆ," ಎಂದು ಅವರು ಹೇಳಿದರು.

ನಾಯಕ ಶುಭಮನ್ ಗಿಲ್ ಸಾಧನೆಗೆ ಮೆಚ್ಚುಗೆ

ಇದೇ ಸಂದರ್ಭದಲ್ಲಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರ ಇತ್ತೀಚಿನ ಸರಣಿ ಶ್ರೇಷ್ಠ ಪ್ರದರ್ಶನ ಹಾಗೂ ಅವರ ಎರಡನೇ ದ್ವಿಶತಕದ ಸಾಧನೆಯನ್ನು ಸೆಹ್ವಾಗ್ ಕೊಂಡಾಡಿದರು. ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗಿಲ್ ಕೇವಲ 133 ಎಸೆತಗಳಲ್ಲಿ 223 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು.

'ಇತ್ತೀಚಿನ ದಿನಗಳಲ್ಲಿ ಅನೇಕ ಆಟಗಾರರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅವರಲ್ಲಿ ಶುಭಮನ್ ಗಿಲ್ ಒಬ್ಬರಾಗಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿ (2025ರಲ್ಲಿ 5 ಟೆಸ್ಟ್‌ಗಳಿಂದ 754 ರನ್ ಗಳಿಸಿ) ಗಿಲ್, ಸುನಿಲ್ ಗವಾಸ್ಕರ್ ಅವರ (1978-79 ರ 732 ರನ್‌ಗಳ) ಸಾರ್ವಕಾಲಿಕ ದಾಖಲೆಯನ್ನು ಮುರಿದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ದ್ವಿಶತಕ ಸಿಡಿಸುವುದು ಸುಲಭದ ಮಾತಲ್ಲ,' ಎಂದು ಹೇಳಿದರು.

2027ರ ವಿಶ್ವಕಪ್‌ಗೆ ಬೌಲಿಂಗ್ ಪಡೆಯೇ ಪ್ರಮುಖ ಶಕ್ತಿ

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಕುರಿತು ಮಾತನಾಡಿದ ಸೆಹ್ವಾಗ್, ಬೌಲರ್‌ಗಳ ಅತ್ಯುತ್ತಮ ಪ್ರದರ್ಶನವೇ ಭಾರತಕ್ಕೆ ಟ್ರೋಫಿ ತಂದುಕೊಡಲಿದೆ ಎಂದರು. 'ವೇಗದ ಬೌಲರ್‌ಗಳ ಪೈಕಿ ನಮ್ಮಲ್ಲಿ ಜಸ್‌ಪ್ರೀತ್ ಬುಮ್ರಾ ಅವರಂತಹ ಅತ್ಯುತ್ತಮ ಬೌಲರ್ ಇದ್ದಾರೆ. ವಿಶ್ವಕಪ್‌ನಲ್ಲಿ ನಮ್ಮ ಬೌಲಿಂಗ್ ವಿಭಾಗವು ಶಕ್ತಿಶಾಲಿಯಾಗಿದ್ದರೆ, ನಾವು ವಿಶ್ವಕಪ್ ಅನ್ನು ಅತ್ಯಂತ ಸುಲಭವಾಗಿ ಗೆಲ್ಲಬಹುದು,' ಎಂದು ಹೇಳಿದರು. ಒಟ್ಟಿನಲ್ಲಿ 'ವೀರು' ವೈಭವ್ ಸೂರ್ಯವಂಶಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವುದು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+