Virat Kohli: ರಾಜಸ್ಥಾನ ವಿರುದ್ಧದ ಎಲಿಮಿನೇಟರ್‌ ಪಂದ್ಯಕ್ಕೆ ವಿರಾಟ್‌ ಕೊಹ್ಲಿ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ಏನು?

ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿರಾಟ್‌ ಕೊಹ್ಲಿ, ಎಲಿಮಿನೇಟರ್‌ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಈ ಪಂದ್ಯ ಆರಂಭವಾಗಲಿದ್ದು, ರಾಜಸ್ಥಾನ ವಿರುದ್ಧದ ಪಂದ್ಯಕ್ಕಾಗಿ ಆರ್‌ಸಿಬಿ ಸಿದ್ಧತೆ ನಡೆಸಿದೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ವಿರಾಟ್ ಕೊಹ್ಲಿ ಭರ್ಜರಿ ಮಾಸ್ಟರ್‌ ಪ್ಲ್ಯಾನ್ ಒಂದನ್ನು ಸಿದ್ಧ ಪಡಿಸಿದ್ದಾರೆ.

ಆರ್‌ಸಿಬಿ ಈಗಗಾಲೇ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಆರ್‌ಸಿಬಿ ಮಹತ್ವದ ಪಂದ್ಯಕ್ಕೆ ಮಾಸ್ಟರ್‌ ಪ್ಲ್ಯಾನ್‌ ಒಂದನ್ನು ತಯಾರಿ ಮಾಡಿದ್ದಾರೆ. ಹಾಗಿದ್ದರೆ ವಿರಾಟ್ ಕೊಹ್ಲಿ ಪ್ಲ್ಯಾನ್ ಪ್ರಕಾರ ಆರ್‌ಸಿಬಿ ಸಂಯೋಜನೆ ಹೇಗಿರಲಿದೆ. ಇನ್ನು ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ, ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎಂಬ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

Unlock Virat Kohli s Secret Strategy for the Upcoming Eliminator Match

ಹೇಗಿರಲಿದೆ ತಂಡದ ಸಂಯೋಜನೆ?

ವಿರಾಟ್ ಕೊಹ್ಲಿ, ಫಾಫ್‌ ಡುಪ್ಲೇಸಿಸ್‌, ರಜತ್ ಪಟಿದಾರ್, ಕ್ಯಾಮರೂನ್‌ ಗ್ರೀನ್‌, ದಿನೇಶ್ ಕಾರ್ತಿಕ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಹಿಪಾಲ್‌ ಲೋಮ್ರೊರ್‌, ಕರಣ್‌ ಶರ್ಮಾ, ಯಶ್‌ ದಯಾಳ್‌, ಮೊಹಮ್ಮದ್‌ ಸಿರಾಜ್‌, ಲಾಕಿ ಫಾರ್ಗ್ಯೂಸನ್‌ ಎಂದಿನಂತೆ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು?

ಸದ್ಯ ಆರ್‌ಸಿಬಿ ತಂಡದ ಆರಂಭಿಕರಾದ ವಿರಾಟ್ ಕೊಹ್ಲಿ, ಫಾಫ್ ಡುಪ್ಲೇಸಿಸ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಜೋಡಿಯನ್ನು ಕಟ್ಟಿ ಹಾಕಲು ಆರ್‌ಆರ್‌ ಪ್ಲ್ಯಾನ್ ಮಾಡಿಕೊಳ್ಳಲಿದೆ. ಈ ಸ್ಟಾರ್‌ ಆಟಗಾರರು ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.

Unlock Virat Kohli s Secret Strategy for the Upcoming Eliminator Match

ರಜತ್‌ ಪಟಿದಾರ್‌ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಆರ್‌ಸಿಬಿ ತಂಡ ಇವರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಅಂದಹಾಗೆ ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ರನ್‌ ರೇಟ್‌ ಹಿಗ್ಗಿಸಲು ನೆರವಾಗಬಲ್ಲ ಪ್ಲೇಯರ್‌. ಇವರು ವೇಗದ ಬೌಲಿಂಗ್ ಹಾಗೂ ಸ್ಪಿನ್ ಬೌಲಿಂಗ್‌ನ್ನು ಸಮರ್ಥವಾಗಿ ಎದುರಿಸಬಲ್ಲರು. ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಮರೂನ್‌ ಗ್ರೀನ್‌ ಆಡಲಿದ್ದು, ಇವರು ತಮ್ಮ ಅನುಭವವನ್ನು ಧಾರೆ ಎರೆಯುವ ಅವಶ್ಯಕತೆ ಇದೆ.

ಐದನೇ ಕ್ರಮಾಂಕದಲ್ಲಿ ಯಾರು?

ಈ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಪರಿಸ್ಥಿತಿಯಾಗಿದೆ. ಒಂದು ವೇಳೆ ಹೆಚ್ಚಿನ ಓವರ್‌ಗಳ ಲಭ್ಯತೆ ಇದ್ದಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ ಬರಬಹುದು. ಇಲ್ಲದೆ ಇದ್ದಲ್ಲಿ ದಿನೇಶ್ ಕಾರ್ತಿಕ್‌ ಬಂದು ರನ್‌ ವೇಗಕ್ಕೆ ಚುರುಕು ಮುಟ್ಟಿಸಬಹುದು.

Unlock Virat Kohli s Secret Strategy for the Upcoming Eliminator Match

ಮೊದಲು ಬ್ಯಾಟ್ ಮಾಡಿದ್ದೇ ಆದಲ್ಲಿ ಯಾರಿಗೆ ಅವಕಾಶ?

ಒಂದು ವೇಳೆ ಆರ್‌ಸಿಬಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದು, ಒಬ್ಬ ಬ್ಯಾಟರ್‌ ಅವಶ್ಯಕತೆ ತಂಡಕ್ಕೆ ಬಿದ್ದಲ್ಲಿ ಮಹಿಪಾಲ್‌ ಲೋಮ್ರೊರ್‌ ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ನಂತರ ಕರಣ್‌ ಶರ್ಮಾ, ಸಿರಾಜ್, ಯಶ್ ದಯಾಳ್, ಲಾಕಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲರು. ಅಲ್ಲದೆ ಡಿಫೆಂಡ್ ಮಾಡಿಕೊಳ್ಳುವಾಗ ಸ್ವಪ್ನಿಲ್‌ ಸಿಂಗ್ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

ಮೊಹಮ್ಮದ್ ಸಿರಾಜ್‌, ಯಶ್‌ ದಯಾಳ್‌ ಅವರು ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿಗಳಿಗೆ ಕಾಟ ನೀಡಲು ರಣ ತಂತ್ರ ಹೆಣೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+