ಆರ್‌ಸಿಬಿ ಫೈನಲ್ ಮ್ಯಾಚ್ ನೋಡಲು ಮಾರುವೇಷ ಧರಿಸಿ ಬರ್ತಾರಾ ವಿಜಯ್ ಮಲ್ಯ?
ವಿಜಯ್ ಮಲ್ಯ ಮೈತುಂಬಾ ಸಾಲ ಮಾಡಿಕೊಂಡು ಊರು ಬಿಟ್ಟಿದ್ದಾರೆ. ಆದರೆ ಆರ್‌ಸಿಬಿ ತಂಡ ಕಟ್ಟಿದ್ದ ಈ ವ್ಯಕ್ತಿ ಇದೀಗ ಆರ್‌ಸಿಬಿ ತಂಡ ಫೈನಲ್ ತಲುಪಿದಾಗ, ಆ ಪಂದ್ಯವನ್ನು ನೋಡೋಕೆ ಖುದ್ದು ಭಾರತಕ್ಕೆ ಬರ್ತಾರಾ? ಈ ಬಗ್ಗೆ ಅಭಿಮಾನಿಗಳು ಏನ್ ಹೇಳ್ತಿದ್ದಾರೆ? ಅದರ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ ಬನ್ನಿ.
2008ರಲ್ಲಿ ಐಪಿಎಲ್ ಆರಂಭ ಆದಾಗ ವಿಜಯ್ ಮಲ್ಯ ಬಿಡ್ ಮಾಡಿ ಆರ್‌ಸಿಬಿ ಬೆಂಗಳೂರು ತಂಡವನ್ನು ಖರೀದಿ ಮಾಡಿದ್ದರು. ಹಾಗೇ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡುವ, ಮಹತ್ವದ ನಿರ್ಧಾರ ಕೈಗೊಂಡಿದ್ದು ಕೂಡ ಇದೇ ವಿಜಯ್ ಮಲ್ಯ ಅವರು. ಹೀಗಾಗಿ ಅವರ ಬಗ್ಗೆ ಇಂದಿಗೂ RCB ತಂಡದಲ್ಲಿ ಭಾರಿ ಗೌರವ ಇದೆ. ಹೀಗಿದ್ದರೂ, ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ವಿಜಯ್ ಮಲ್ಯ ಸಾಲ ಮಾಡಿಕೊಂಡು ದೇಶ ಬಿಟ್ಟು ಹೋಗುವಂತೆ ಆಗಿತ್ತು. ಆದರೆ ಈಗ, ಆರ್‌ಸಿಬಿ ತಂಡ ಕಪ್ ಗೆಲ್ಲುವ ಹಂತಕ್ಕೆ ತಲುಪುತ್ತಿದೆ. ಹೀಗಿದ್ದಾಗ ಆರ್‌ಸಿಬಿ ಫೈನಲ್ ರೀಚ್ ಆದರೆ, ವಿಜಯ್ ಮಲ್ಯ ಭಾರತಕ್ಕೆ ಬರ್ತಾರಾ?

ವಿಜಯ್ ಮಲ್ಯ ಭಾರತಕ್ಕೆ ಬರ್ತಾರಾ?
ಇದೀಗ ಅಭಿಮಾನಿಗಳು ಈ ಬಗ್ಗೆ ದೊಡ್ಡ ಚರ್ಚೆ ಶುರು ಮಾಡಿದ್ದಾರೆ. ಯಾಕಂದ್ರೆ ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡದ ಬಗ್ಗೆ ಅಪಾರ ಗೌರವ ಹೊಂದಿದ್ದು, ಆರ್‌ಸಿಬಿ ತಂಡಕ್ಕಾಗಿ ಅವರು ಬಂದೇ ಬರ್ತಾರೆ. ಮಾರುವೇಷ ಅಂದ್ರೆ ವೇಷ ಮರೆಮಾಚಿ ವಿಜಯ್ ಮಲ್ಯ ಅವರು ಆರ್‌ಸಿಬಿ ಮ್ಯಾಚ್ ನೋಡಲು ಬರ್ತಾರೆ. ಆರ್‌ಸಿಬಿ ತಂಡವು ಫೈನಲ್ ತಲುಪಿದರೆ ವಿಜಯ್ ಮಲ್ಯ ಅವರು ಭಾರತಕ್ಕೆ ಬಂದು ಮ್ಯಾಚ್ ನೋಡುವುದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್. ಆದರೆ, ಈ ಕುರಿತು ಯಾರೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಸ್ವತಃ ವಿಜಯ್ ಮಲ್ಯ ಅವರು ಕೂಡ ಈ ಬಗ್ಗೆ ಯಾವುದೇ ಮಾತನಾಡಿಲ್ಲ. ಹೀಗಾಗಿ ಕುತೂಹಲ ಕೆರಳಿದೆ.
ಮಹಿಳೆಯರ ತಂಡ ಕಪ್ ಗೆದ್ದಿದೆ!
ಒಟ್ನಲ್ಲಿ ಈಗಾಗಲೇ ಆರ್‌ಸಿಬಿ ಮಹಿಳೆಯರ ತಂಡವು ಕಪ್ ಗೆದ್ದಿದೆ, ಇದು ಪುರುಷರ ತಂಡ ಕಪ್ ಗೆಲ್ಲುವುದಕ್ಕೆ ದೊಡ್ಡ ಪ್ರೋತ್ಸಾಹ ನೀಡಿದಂತೆ ಕಾಣುತ್ತಿದೆ. ಹೀಗಾಗಿ ಆರ್‌ಸಿಬಿ ತಂಡ, ಕಪ್ ಗೆಲ್ಲಲು ಮತ್ತಷ್ಟು ಹತ್ತಿರವಾಗುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಈ ಬಗ್ಗೆ ಫಲಿತಾಂಶ ಹೊರಬೀಳಲಿದ್ದು, ಕೋಟ್ಯಂತರ ಅಭಿಮಾನಿಗಳು ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಹಾಗೇ ಈ ವಿಚಾರದ ಜೊತೆ ವಿಜಯ್ ಮಲ್ಯ ಭಾರತಕ್ಕೆ ಬರ್ತಾರಾ? ಅನ್ನೋ ಪ್ರಶ್ನೆ ಕೂಡ ಮೂಡಿದೆ. ಅದಕ್ಕೆಲ್ಲಾ ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ.












Click it and Unblock the Notifications