ವಿಶ್ವ ಚಾಂಪಿಯನ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್‌ಗೆ ತವರಿನಲ್ಲಿ ಹೃದಯ ಸ್ಪರ್ಶಿ ಸ್ವಾಗತ
ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ 2024ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಭಾರತ ಚಾಂಪಿಯನ್ ಪಟ್ಟಕೇರಿದೆ. ಚಾಂಪಿಯನ್ ಆಟಗಾರರಿಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಹ ಸಿಕ್ಕಿದೆ. ಚಾಂಪಿಯನ್ ತಂಡದ ಕೋಚ್ ರಾಹುಲ್ ದ್ರಾವಿಡ್‌ಗೂ ಬೆಂಗಳೂರಿನಲ್ಲಿ ಸ್ವರಣೀಯ ಸ್ವಾಗತ ನೀಡಲಾಯಿತು.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ, ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಹರಿಣಗಳನ್ನು ಸದೆ ಬಡೆದಿತ್ತು. 2007ರ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡ, ನಾಲ್ಕು ದಿನಗಳ ಬಳಿಕ ತವರಿಗೆ ಆಗಮಿಸಿತ್ತು. ಈ ತಂಡವನ್ನು ತವರಿನ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಮುಂಬೈನ ಮರೀನ್ ಡ್ರೈವ್‌ನಿಂದ ವಾಂಖೇಡೆ ವರೆಗೆ ರೋಡ್ ಶೋ ಮೂಲಕ ಚಾಂಪಿಯನ್ಸ್‌ರನ್ನು ಬರ ಮಾಡಿಕೊಳ್ಳಲಾಯಿತು.

ಕನ್ನಡಿಗರಿಗೆ ಗೌರವ
ಟಿ20 ವಿಶ್ವಕಪ್ ತಂಡದಲ್ಲಿ ಕರ್ನಾಟಕದ ಒಬ್ಬರೇ ಒಬ್ಬ ಆಟಗಾರರ ಇರದೇ ಇರುವುದು ನಿಜಕ್ಕೂ ಬೇಸರ ತರಿಸಿತ್ತು. ಆದರೆ ಇಡೀ ಕರ್ನಾಟಕ ಸಮಾಧಾನ ಪಟ್ಟುಕೊಳ್ಳುವ ಸುದ್ದಿ ಎಂದರೆ, ಚಾಂಪಿಯನ್ ಪಟ್ಟಕ್ಕೇರಿಸಿದ ತಂಡದ ಗುರು ನಮ್ಮವರೇ. ಹೌದು.. ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್, ಭಾರತ ತಂಡದ ಕೋಚ್ ಆಗಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಟೀಮ್ ಇಂಡಿಯಾದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿರುವ ರಾಹುಲ್ ಅವರಿಗೆ ತವರಿನಲ್ಲಿ ಅರ್ಥಪೂರ್ಣ ಸ್ವಾಗತ ನೀಡಲಾಯಿತು.
ಮಕ್ಕಳಿಂದ ಸ್ವಾಗತ
ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಅಕಾಡಿಮಿ ಬೆಂಗಳೂರಿನಲ್ಲಿದೆ. ಈ ಅಕಾಡಮಿಗೆ ದ್ರಾವಿಡ್ ಸೋಮವಾರ ಭೇಟಿ ನಿಡಿದರು. ಈ ವೇಳೆ ವಿಶ್ವ ಚಾಂಪಿಯನ್ ಕೋಚ್‌ಗೆ ಮಕ್ಕಳು ಹೃದಯ ಸ್ವರ್ಷಿ ಸ್ವಾಗತ ನೀಡಿದರು. ದ್ರಾವಿಡ್ ಅವರು ಅಂಗಳಕ್ಕೆ ಬರುತ್ತಿದ್ದಂತೆ ಚಿಕ್ಕ ಮಕ್ಕಳು, ಬ್ಯಾಟ್ ಎತ್ತಿ ಗೌರವ ಸೂಚಿಸಿದರು.
Rahul Dravid receiving a hero's welcome and a guard of honour from young kids at a cricket academy in Bengaluru.
— Johns (@JohnyBravo183) July 8, 2024
What a lovely moment ❤ pic.twitter.com/vUWqxnDUhB
ವೃತ್ತಿ ಜೀವನ
ರಾಹುಲ್ ದ್ರಾವಿಡ್ ಸಹ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 1999ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ದ್ರಾವಿಡ್ 461 ರನ್ ಬಾರಿಸಿದ ರಾಹುಲ್, 2003ರಲ್ಲಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದರು. ದ್ರಾವಿಡ್ 2007ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೀರ್ತಿ ತಮ್ಮ ದಾಗಿಸಿಕೊಂಡಿದ್ದರು. ಆದರೆ ಈ ಟೂರ್ನಿಯಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿಯ ಕೊನೆಯ ಅಸೈನ್‌ಮೆಂಟ್ ಏಕದಿನ ವಿಶ್ವಕಪ್ 2023ರಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿತ್ತು. ಆದರೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿರಾಸೆಯನ್ನು ಕಂಡಿತ್ತು. ಆದರೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಗುರು ದ್ರಾವಿಡ್..












Click it and Unblock the Notifications