ಮೊಣಕಾಲಿನಲ್ಲಿ ತಿರುಮಲ ಬೆಟ್ಟ ಹತ್ತಿದ ಟೀಂ ಇಂಡಿಯಾ ಕ್ರಿಕೆಟಿಗ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸೋಲು ಕಂಡ ಭಾರತ ತಂಡದ ಆಟಗಾರರು ತವರಿಗೆ ಮರಳಿದ್ದು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಬಳಿಕ, ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು ಫೆಬ್ರವರಿ 18ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಹಲವು ಆಟಗಾರರು ಈಗಾಗಲೇ ಸಿದ್ಧತೆ ಆರಂಭಿಸಿದ್ದರೆ ಇನ್ನೂ ಕೆಲವು ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡಕ್ಕೆ ಸಿಕ್ಕಿರುವ ಭರವಸೆಯ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಜನವರಿ 22 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಭ್ಯಾಸ ಆರಂಭಿಸುವ ಮುನ್ನ ತಿರುಪತಿಯ ತಿರುಮಲ ಬೆಟ್ಟವನ್ನು ಮೊಣಕಾಲಿನಲ್ಲಿ ಹತ್ತುವ ಮೂಲಕ ದೇವರ ಹರಕೆ ಪೂರೈಸಿದ್ದಾರೆ.

team india all rounder nitish kumar reddy climbs tirupati stairs

ವಿಡಿಯೋ ಹಂಚಿಕೊಂಡ ಕ್ರಿಕೆಟಿಗ

ನಿತೀಶ್ ಕುಮಾರ್ ರೆಡ್ಡಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಮೊಣಕಾಲಿನಲ್ಲಿ ತಿಮ್ಮಪ್ಪನ ಬೆಟ್ಟದ ಮೆಟ್ಟಿಲುಗಳನ್ನು ಮೊಣಕಾಲಿನಲ್ಲಿ ಹತ್ತುವುದನ್ನ ನೋಡಬಹುದು. ಬಾರ್ಡರ್ ಗವಾಸ್ಕರ್‍ ಟ್ರೋಫಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ವಾಪಸಾದ ನಿತೀಶ್ ಕುಮಾರ್ ರೆಡ್ಡಿಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ನಿತೀಶ್ ಕುಮಾರ್ ತಮ್ಮ ಹುಟ್ಟೂರಾದ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು ಹಾರ ಹಾಕಿ ಸ್ವಾಗತ ಕೋರಿದರು. ಹಲವು ಮಂದಿ ಅವರ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದರು. ನಿತೀಶ್ ಕುಮಾರ್ ರೆಡ್ಡಿ ವಿಶಾಖಪಟ್ಟಣದ ಗಜ್ವುವಾಕಾದ ನಿವಾಸಿಯಾಗಿದ್ದಾರೆ. ತೆರೆದ ವಾಹನದಲ್ಲಿ ಅಭಿಮಾನಿಗಳು ಮೆರವಣಿಗೆ ಮಾಡಿದರು.

ಟೀಂ ಇಂಡಿಯಾದ ಭರವಸೆಯ ಆಲ್‌ರೌಂಡರ್

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ 1-3 ಅಂತರದಲ್ಲಿ ಸೋಲು ಕಂಡರೂ ನಿತೀಶ್ ಕುಮಾರ್ ರೆಡ್ಡಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಮಿಂಚಿದರು. ರವಿಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೂಡ ನಿತೀಶ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಿಜಿಟಿ ಸರಣಿಯ ಐದು ಟೆಸ್ಟ್ ಪಂದ್ಯಗಳಲ್ಲಿ ನಿತೀಶ್ ರೆಡ್ಡಿ 37.25 ರ ಸರಾಸರಿಯಲ್ಲಿ 298 ರನ್ ಗಳಿಸಿದ್ದರು. 44 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಅತ್ಯುತ್ತಮ ಪ್ರದರ್ಶನದ ಬಳಿಕ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೂ ಆಯ್ಕೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+