ಇಂದೇ ಲೋಕಾರ್ಪಣೆಯಾದ ಸಾಯಿ ಕೃಷ್ಣನ್ ಸ್ಟೇಡಿಯಂನಲ್ಲಿ ದಿಗ್ಗಜರ ನಡುವೆ ಸೌಹಾರ್ದ ಪಂದ್ಯ ಆರಂಭ
ಚಿಕ್ಕಬಳ್ಳಾಪುರ ಜನವರಿ 18: ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಇಂದು ಅಂತಾರಾಷ್ಟ್ರೀಯ ಮಟ್ಟದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂ ಕ್ರಿಕೆಟ್ ದಿಗ್ಗಜರ ಟಿ 20 ಕ್ರಿಕೆಟ್ ಪಂದ್ಯದ ಮೂಲಕ ಲೋಕಾರ್ಪಣೆಗೊಂಡಿದೆ.
ಒಂದು ಪ್ರಪಂಚ ಒಂದು ಕುಟುಂಬ ಕಪ್ ಎಂಬ ಹೆಸರಿನಡಿ ಸೌಹಾರ್ದಯುತ ಪಂದ್ಯಾವಳಿಯಲ್ಲಿ 8 ದೇಶಗಳ 24 ದಿಗ್ಗಜ ಆಟಗಾರರು ಆಡಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ನಾಯಕತ್ವದ ಎರಡು ತಂಡಗಳ ನಡುವೆ ಈ ಪಂದ್ಯ ನಡೆಯಲಿದೆ.

ಭಾರತದ ಮೂಲ ಧೈಯ ವಾಕ್ಯ ವಸುಧೈವ ಕುಟುಂಬಕಂ ಎಂಬ ಮಾತಿಗೆ ಪ್ರತಿರೂಪವೆಂಬಂತೆ ಪಂದ್ಯಾವಳಿ ಆಯೋಜಿಸಲಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಪಂದ್ಯಾವಳಿಗೆ ಬೇಕಾದ ಎಲ್ಲ ತಯಾರಿಗಳು ನಡೆದಿವೆ. ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯ ಸೂರ್ಯ, ಮುತ್ತಯ್ಯ ಮುರಳೀಧರನ್ ಚಮಿಂಡಾ ವಾಸ್ ಸೇರಿದಂತೆ 24 ಮಂದಿ ಮಾಜಿ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಸ್ಟೇಡಿಯಂ ಉದ್ಘಾಟನೆಯಾಗಿದೆ. 11ಗಂಟೆಯಿಂದ 1ರವರೆಗೆ ಮೊದಲ ಇನ್ನಿಂಗ್ಸ್ 1 ರಿಂದ 1:30 ಗಂಟೆಗೆ ಭೋಜನ ವಿರಾಮ ವಿರಲಿದ್ದು, 1:30ಗಂಟೆಯಿಂದ 3:30 ಗಂಟೆ ವರೆಗೆ ಎರಡನೇ ಇನ್ನಿಂಗ್ಸ್ ನಡೆಯಲಿದೆ. ತದನಂತರ 4 ಗಂಟೆಗೆ ಸಾಯಿ ಸಿಂಪೋನಿ ಆರ್ಕೆಸ್ಟ್ರಾ ತಂಡದಿಂದ ವಾದ್ಯಗೋಷ್ಠಿ ನಡೆಯಲಿದೆ.
ಈ ಪಂದ್ಯ ವೀಕ್ಷಣೆಗೆ ಆಮಂತ್ರಿತರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸುಮಾರು 10 ಸಾವಿರ ಮಂದಿಗೆ ಆಮಂತ್ರಣ ನೀಡಲಾಗಿದೆ. ಸತ್ಯಸಾಯಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳು, ಭಕ್ತರು ಭಾಗಿಯಾಗಲಿದ್ದಾರೆ.
ಪ್ರಶಸ್ತಿಗಾಗಿ ಸೇಣೆಸಲಿರುವ ತಂಡಗಳು:-
ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ, ಉಪುಲ್ ತರಂಗಾ, ಅಲ್ವಿರೋ ಪೀಟರ್‌ಸನ್, ಸುಬ್ರಹ್ಮಣಿಯನ್ ಬದ್ರೀನಾಥ್, ಇರ್ಫಾನ್ ಪಠಾಣ್, ಅಶೋಕ್ ದಿಂಡಾ, ಅಜಂತಾ ಮೆಂಡಿಸ್, ಹರಭಜನ್ ಸಿಂಗ್, ಮಾಂಟಿ ಪನೇಸರ್, ಆರ್.ಪಿ.ಸಿಂಗ್, ಡ್ಯಾನಿ ಮೊರಿಸನ್.
ಯುವರಾಜ್ ಸಿಂಗ್ (ನಾಯಕ), ಪೃಥ್ವಿ ಪಟೇಲ್, ಮೊಹಮದ್ ಕೈಫ್, ಡರೇನ್ ಮ್ಯಾಡಿ, ಅಲೋಕ್ ಕಪಿಲ್, ರೊಮೇಶ್ ಕಲವಿತರಣ, ಯೂಸಫ್ ಪಠಾಣ್, ಜಾಸನ್ ಕ್ರೇಜಾ, ಮುತ್ತಯ್ಯ ಮುರ ಳೀಧರನ್, ಮಕಾಯಾ ನಿಟ್ಟಿ, ಚಮಿಂಡಾ ವಾಸ್, ವೆಂಕಟೇಶ್ ಪ್ರಸಾದ್.












Click it and Unblock the Notifications