T20 World Cup 2026: ಕೊನೆಗೂ ಟೀಂ ಇಂಡಿಯಾ ವಿರಾಟ್ ಕೊಹ್ಲಿ ದಾಖಲೆ ಚೇಸ್ ಮಾಡಿದ ಪಾಕಿಸ್ತಾನದ ಫರ್ಹಾನ್
T20 World Cup 2026: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಅವರು ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಚೇಸ್ ಮಾಸ್ಟರ್ ಅಂತಲೇ ಹೆಸರು ಗಳಿಸಿರುವ ವಿರಾಟ್ ಕೊಹ್ಲಿ ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದಾರೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಫೆಬ್ರವರಿ 28) ಟಿ20 ವಿಶ್ವಕಪ್ 2026 ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಪರ ಫರ್ಹಾನ್ ಸ್ಫೋಟಕ ಬ್ಯಾಟಿಂಗ್ ಮಾಡಿ ಉತ್ತಮ ಆರಂಭ ನೀಡಿದರು. ಅಲ್ಲದೆ, ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ.

ಉತ್ತಮ ಆರಂಭ ನೀಡಿದ ಫರ್ಹಾನ್
ಹೌದು.. ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಉತ್ತಮ ಆರಂಭವನ್ನು ನೀಡಿದ ಫರ್ಹಾನ್, ವಿರಾಟ್ ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ 2014ರ ಟಿ20 ವಿಶ್ವಕಪ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 106.33ರ ಸರಾಸರಿಯಲ್ಲಿ ಅಜೇಯ 319 ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಮಾರಕ ಬೌಲಿಂಗ್ ದಾಳಿ ವಿರುದ್ಧ ಅವರು ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಭಾರತವನ್ನು ಫೈನಲ್‌ಗೆ ತಲುಪಲು ಮಹತ್ವದ ಪಾತ್ರ ವಹಿಸಿತ್ತು.
ಕೊನೆಗೂ ಕೊಹ್ಲಿ ದಾಖಲೆ ಅಳಿಸಿದ ಫರ್ಹಾನ್
ಒಂದು ದಶಕಕ್ಕೂ ಹೆಚ್ಚು ಕಾಲ ಈ ದಾಖಲೆಯನ್ನೂ ಯಾರೂ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಪಾಕಿಸ್ತಾನದ 26 ವರ್ಷದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ 2026ರ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಪರ ಓಪನರ್ ಆಗಿ ಕಣಕ್ಕಿಳಿದ ಫರ್ಹಾನ್ 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 100 ರನ್ ಶತನ ಸಿಡಿಸಿ ಮಿಂಚಿದರು.
ನಾಮೀಬಿಯಾ ವಿರುದ್ಧ ಶತಕ
ಗುಂಪು ಹಂತದಲ್ಲಿ ನಾಮೀಬಿಯಾ ವಿರುದ್ಧ ಅವರು ಅಜೇಯ ಶತಕ (100*) ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದರು. ಬಳಿಕ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಅರ್ಧಶತಕ ಸೇರಿದಂತೆ ನಿರಂತರವಾಗಿ ಉಪಯುಕ್ತ ಕೊಡುಗೆ ನೀಡಿ ತಮ್ಮ ಅದ್ಭುತ ಪ್ರದರ್ಶನ ತೋರಿದ್ದಾರೆ.
ಶ್ರೀಲಂಕಾ ವಿರುದ್ಧದ ಆಕ್ರಮಣಕಾರಿ ಆಟ
ಹಾಗೆಯೇ ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಆಕ್ರಮಣಕಾರಿ ಆಟ ಆಡಿದರು. ಆರಂಭದಲ್ಲೇ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿ ರನ್‌ಗಳನ್ನು ಹೆಚ್ಚಿಸಿದರ ಅವರು ಟೀಂ ಇಂಡಿಯಾ ಚೇಸ್ ಮಾಸ್ಟರ್ ಅಂತಲೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿಯ ದಾಖಲೆಯನ್ನು ಮೀರಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಸಿಡಿಸಿದವರು
* ಸಾಹಿಬ್‌ಜಾದಾ ಫರ್ಹಾನ್ (ಪಾಕಿಸ್ತಾನ) - 323* (2026)
* ವಿರಾಟ್ ಕೊಹ್ಲಿ (ಭಾರತ) - 319 (2014)
* ತಿಲಕರತ್ನೆ ದಿಲ್ಷಾನ್ (ಶ್ರೀಲಂಕಾ) - 317 (2009)
* ಮೊಹಮ್ಮದ್ ಬಾಬರ್ ಆಜಂ (ಪಾಕಿಸ್ತಾನ) - 303 (2021)
* ಮಹೇಲ ಜಯವರ್ಧನೆ (ಶ್ರೀಲಂಕಾ) - 302 (2010)
* ವಿರಾಟ್ ಕೊಹ್ಲಿ (ಭಾರತ) - 296 (2022)
* ತಮೀಮ್ ಇಕ್ಬಾಲ್ (ಬಾಂಗ್ಲಾದೇಶ) - 295 (2016)
* ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) - 281 (2024)
* ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) - 265 (2007)
* ಶೇನ್ ವಾಟ್ಸನ್ (ಆಸ್ಟ್ರೇಲಿಯಾ) - 249 (2012)
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್











Click it and Unblock the Notifications