ವಿರಾಟ್‌ ಕೊಹ್ಲಿ-ರೋಹಿತ್ ಶರ್ಮಾ ನಿವೃತ್ತಿಗೆ ಅಗರ್ಕರ್ ಕಾರಣನಾ? ಹೊಸ ತಿರುವು ಪಡೆದ ಸುನಿಲ್ ಗವಾಸ್ಕರ್ ಹೇಳಿಕೆ

Sunil Gavaskar: ಅಜಿತ್ ಅಗರ್ಕರ್ ಅವರ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆಯ ಅವಧಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಬಿಸಿಸಿಐ ಇವರ ಸ್ಥಾನಕ್ಕೆ ಹೊಸಬರನ್ನು ತರುವ ತಯಾರಿ ನಡೆಸುತ್ತಿದೆ. ಇದೇ ಸಮಯದಲ್ಲಿ ಭಾರತದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರು ಆಯ್ಕೆಗಾರರ ಜವಾಬ್ದಾರಿ ಮತ್ತು ಎದುರಾಗುವ ಕಠಿಣ ಸನ್ನಿವೇಶಗಳ ಕುರಿತು ನೀಡಿರುವ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

1983ರ ವಿಶ್ವಕಪ್ ವಿಜೇತ ಆಟಗಾರ, ಅತ್ಯಂತ ಉನ್ನತ ಮಟ್ಟದ ಈ ಹುದ್ದೆಯು ತನ್ನದೇ ಆದ ಸವಾಲುಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಭಾರಿ ಸ್ಪರ್ಧೆ ಇರುವುದರಿಂದ, ತಂಡವನ್ನು ಆಯ್ಕೆ ಮಾಡುವ ಕಠಿಣ ಕೆಲಸ ನಿರ್ವಹಿಸುವ ವ್ಯಕ್ತಿಯು ಕೆಲವು ಅರ್ಹ ಆಟಗಾರರನ್ನು ಹೊರಗಿಡಬೇಕಾಗಿ ಬರುತ್ತದೆ ಎಂದು ಹೇಳಿದ್ದಾರೆ. ಇದು ರೋ-ಕೊ ಅವರಿಗೆ ಲಿಂಕ್ ಆಗುವಂತಿದೆ.

Sunil Gavaskar on Selectors Is His Remark Linked to Rohit Sharma And Virat Kohli s Cricket Future

'ವೈಯಕ್ತಿಕ ಮನಸ್ತಾಪಗಳನ್ನ ಎದುರಿಸಬೇಕಾಗುತ್ತದೆ'

ತಮ್ಮ ಇತ್ತೀಚಿನ ಅಂಕಣದಲ್ಲಿ ಬರೆದುಕೊಂಡಿರುವ ಗವಾಸ್ಕರ್, ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಯು ಕೇವಲ ಗೌರವ ಮಾತ್ರವಲ್ಲದೆ, ಅಪಾರ ಸವಾಲುಗಳಿಂದ ಕೂಡಿರುತ್ತದೆ. ಭಾರತೀಯ ಕ್ರಿಕೆಟ್‌ನಲ್ಲಿ ಉದ್ಭವಿಸುವ ತೀವ್ರ ಪೈಪೋಟಿಯಿಂದಾಗಿ, ಹಲವು ಬಾರಿ ಅರ್ಹ ಮತ್ತು ಶ್ರೇಷ್ಠ ಆಟಗಾರರನ್ನೇ ತಂಡದಿಂದ ಹೊರಗಿಡಬೇಕಾದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಧ್ಯಕ್ಷರು ಆಟಗಾರರೊಂದಿಗೆ ವೈಯಕ್ತಿಕ ಮನಸ್ತಾಪಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ ಪಾಲಿಗೆ ಸುಳಿವೇ?

ಸುನೀಲ್ ಗವಾಸ್ಕರ್ ಅವರ ಈ ಮಾತುಗಳು ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮುಂದಿನ ಕ್ರಿಕೆಟ್ ಭವಿಷ್ಯಕ್ಕೆ ಪರೋಕ್ಷವಾಗಿ ಲಿಂಕ್ ಆಗುತ್ತಿವೆ. ಈಗಾಗಲೇ ಟಿ-20, ಟೆಸ್ಟ್‌ ಮಾದರಿಯಿಂದ ದೂರವಾಗಿರುವ ಈ ದಿಗ್ಗಜ ಆಟಗಾರರ ಏಕದಿನ ವೃತ್ತಿಜೀವನದ ಮುಂದಿನ ಹಂತದ ಕುರಿತು ಹೊಸ ಆಯ್ಕೆ ಸಮಿತಿಯು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯನ್ನು ಗಾವಸ್ಕರ್ ಅವರ ಹೇಳಿಕೆ ಸೂಚಿಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮುಂದುವರಿದು ಮಾತನಾಡಿದ ಗವಾಸ್ಕರ್, 'ಕೆಲವು ಬಾರಿ ಆಯ್ಕೆಗಾರರೇ ತುಂಟತನ ಅಥವಾ ಗೊಂದಲ ಉಂಟುಮಾಡುವವರು ಆಗಿರುತ್ತಾರೆ. ಆದರೆ ಅಂತಿಮವಾಗಿ ಟೀಕೆ ಮತ್ತು ನಿಂದನೆಗಳನ್ನು ಎದುರಿಸಬೇಕಾಗಿ ಬರುವುದು ಮಾತ್ರ ಸಮಿತಿಯ ಅಧ್ಯಕ್ಷರೇ,' ಎಂದು ಹೇಳಿದರು.

'ಆಯ್ಕೆ ಸಮಿತಿಯ ಅಧ್ಯಕ್ಷರಾಗುವುದು ಸುಲಭದ ವಿಚಾರವಲ್ಲ'

'ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗುವುದು ನಿಜಕ್ಕೂ ಗೌರವದ ವಿಷಯ. ಆದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ಅಂಪೈರಿಂಗ್, ವಿಕೆಟ್‌ ಕೀಪಿಂಗ್ ಮತ್ತು ಈಗಿನ ಕಾಮೆಂಟರಿಯಂತೆಯೇ, ಇಲ್ಲಿ ನೀವು ಮಾಡಿದ ಒಂಬತ್ತು ಒಳ್ಳೆಯ ಕೆಲಸಗಳನ್ನು ಜನ ಮರೆತುಬಿಡುತ್ತಾರೆ. ಆದರೆ, ತಪ್ಪು ಎಂದು ಕರೆಯಲ್ಪಡುವ ಒಂದೇ ಒಂದು ನಿರ್ಧಾರವನ್ನು ನೂರು ಪಟ್ಟು ಹಿಗ್ಗಿಸಿ, ಪದೇ ಪದೇ ಚರ್ಚಿಸಲಾಗುತ್ತದೆ,' ಎಂದು ಗಾವಸ್ಕರ್ ಮಿಡ್-ಡೇ ದಿನಪತ್ರಿಕೆಯ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.

'ಹೆಚ್ಚಿನ ಜನರಿಗೆ ತಿಳಿಯದಿರುವ ವಿಷಯವೆಂದರೆ, ಅನೇಕ ನಿರ್ಧಾರಗಳನ್ನು ಇತರ ಆಯ್ಕೆಗಾರರು ಅಧ್ಯಕ್ಷರ ಮೇಲೆ ಬಲವಂತವಾಗಿ ಹೇರಿರಬಹುದು. ಆದರೆ ಮಾಧ್ಯಮಗಳನ್ನು ಎದುರಿಸಬೇಕಾದವರು ಅಧ್ಯಕ್ಷರೇ ಆಗಿರುವುದರಿಂದ, ನಿಂದನೆ ಅಥವಾ ಆಪಾದನೆ ಅವರ ಮೇಲೆಯೇ ಬೀಳುತ್ತದೆ. ಆದ್ದರಿಂದ ಗೊಂದಲ ಅಥವಾ ತರಲೆ ಮಾಡುವವರು ಇತರರಾಗಿದ್ದರೂ ಅಂತಿಮವಾಗಿ ಟೀಕೆಗೆ ಗುರಿಯಾಗುವುದು ಮಾತ್ರ ಅವರೇ,' ಎಂದು ತಿಳಿಸಿದರು.

ಅಜಿತ್ ಅಗರ್ಕರ್ ಸಾಧನೆ

ಭಾರತದ ಮಾಜಿ ವೇಗಿ ಆಗಿರುವ ಅಜಿತ್ ಅಗರ್ಕರ್ ಅವರು 2023ರಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಭಾರತ ತಂಡವು 50 ಓವರ್‌ಗಳ ವಿಶ್ವಕಪ್ ಫೈನಲ್ ತಲುಪಿದ್ದಲ್ಲದೆ, 2024 ಮತ್ತು 2026ರ ಟಿ20 ವಿಶ್ವಕಪ್ ಹಾಗೂ 2026ರ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಮುಂದಿನ ಮುಖ್ಯ ಆಯ್ಕೆಗಾರರಾಗಿ ಯಾರು ಆಯ್ಕೆಯಾದರೂ, ಅವರು ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳಿಗಿಂತ ಹೆಚ್ಚಾಗಿ ಅವರ ತಪ್ಪುಗಳ ಆಧಾರದ ಮೇಲೆಯೇ ಅವರನ್ನು ಅಳೆಯಲಾಗುತ್ತದೆ ಎಂದು ಗಾವಸ್ಕರ್ ಹೇಳಿದ್ದಾರೆ. ಬಿಸಿಸಿಐ ಮುಂದಿನ ತಿಂಗಳು ಅಗರ್ಕರ್ ಅವರ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ.

'ಮುಂದಿನ ಅಧ್ಯಕ್ಷರಾಗಿ ಯಾರೇ ಬಂದರೂ ಮತ್ತು ಅವರು ತಮ್ಮ ಆಟದ ದಿನಗಳಲ್ಲಿ ಎಷ್ಟೇ ಶ್ರೇಷ್ಠ ಹಾಗೂ ಜನಪ್ರಿಯ ಆಟಗಾರನಾಗಿದ್ದರೂ ಸಹ, ತಮ್ಮ ಅಧಿಕಾರಾವಧಿ ಮುಗಿದು ನಿರ್ಗಮಿಸುವಾಗ, ಅವರ ಹೆಸರಿನ ಮುಂದೆ ಧನಾತ್ಮಕ ಅಂಶಗಳಿಗಿಂತ ಹೆಚ್ಚಾಗಿ, ತಪ್ಪು ತಿಳುವಳಿಕೆಯಿಂದ ಋಣಾತ್ಮಕ ಅಂಶಗಳೇ ಹೆಚ್ಚಾಗಿ ಉಳಿದುಕೊಂಡಿರುತ್ತವೆ,' ಎಂದು ತಿಳಿಸಿದ್ದಾರೆ.

ನೆಟ್ಟಿಗರು ಹೇಳೋದೇನು?

ಗವಾಸ್ಕರ್ ಅವರ ಈ ಅಂಕಣಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದು, 'ನೀವು ಹೇಳಿದ್ದು ಸತ್ಯ ಸಾರ್, ಆಯ್ಕೆಗಾರರಿಗೆ ತುಂಬಾ ಸವಾಲುಗಳಿರುತ್ತವೆ. ಆದರೆ ಅಜಿತ್ ಅಗರ್ಕರ್ ಅವರು ನೀವು ಹೇಳಿದಂತೆ ಯಾವುದೋ ವಿಚಾರಕ್ಕೆ ಮನಸ್ತಾಪ ಮಾಡಿಕೊಂಡು ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರನ್ನು ಬಲವಂತವಾಗಿ ಟಿ20, ಟೆಸ್ಟ್‌ಗೆ ನಿವೃತ್ತಿ ಕೊಡಿಸಿದರು,' ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+