ಎಸ್‌ಆರ್‌ಎಚ್ ತಂಡ ಐಪಿಎಲ್‌ನಿಂದ ಬ್ಯಾನ್ ಸಾಧ್ಯತೆ..
IPl SRH Team: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಇದಾದ ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದು, ಇದು ಆರ್‌ಸಿಬಿ ಪಾಲಿಗೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಬಳಿಕ ತುಂಬಾ ಬೆಳವಣಿಗಗಳಿ ಆದ್ವು. ಈ ನಡುವೆಯೇ ಎಸ್‌ಆರ್‌ಎಚ್‌ಗೆ ರದ್ದಾಗುವ ಆತಂಕ ಎದುರಾಗಿದೆ. ಕಾರಣ ಇಲ್ಲಿದೆ ತಿಳಿಯಿರಿ.
ಆಡಿದ 17 ಸೀಸನ್‌ಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಸೀಸನ್‌ನಲ್ಲಿ ಫೈನಲ್ ಪಂದ್ಯ ಗೆದ್ದು ಟ್ರೋಫಿ ಇಲ್ಲ ಎನ್ನುವ ಕೊರಗನ್ನು ದೂರ ಮಾಡಿತು. ಇದಕ್ಕೆ ಕಾರಣ ಈ ಬಾರಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ತಂಡ ಬಲಿಷ್ಠವಾಗಿದ್ದು. ಆದರೆ, ಕಾಲ್ತುಳಿತ ಪ್ರಕರಣ ಬೆಂಗಳೂರು ತಂಡಕ್ಕೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು.

ಬಳಿಕ ಆರ್‌ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಬ್ಯಾನ್ ಆಗುವ ಎನ್ನುವ ವದಂತಿಗಳು ಹರಿದ್ದವು. ಆದರೆ, ಇದಕ್ಕೆ ಪ್ರಾಂಚೈಸಿ ಸ್ಪಷ್ಟನೆ ಕೊಡುವ ಮೂಲಕ ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಹೇಳಿತ್ತು. ಇದಾದ ಬಳಿಕವೂ ಆರ್‌ಸಿಬಿಗೆ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಲಿವೆ. ಈ ನಡುವೆಯೇ ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗಂಭೀರ ಆರೋಪವೊಂದು ಬಂದಿದ್ದು, ಈ ತಂಡ ಬ್ಯಾನ್ ಆಗುವ ಸಾಧ್ಯತೆಯಿದೆ ಎನ್ನುವ ಸುದ್ದಿಯೊಂದು ಭಾರೀ ಸದ್ದು ಮಾಡುತ್ತಿದೆ.
ಈಗಾಗಲೇ 2016ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಐಪಿಎಲ್‌ನಿಂದ ಅಮಾನತುಗೊಂಡಿದ್ದವು. ಇದೀಗ ಇದೇ ಪರಿಸ್ಥಿತಿ ಕಾವ್ಯಾ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಎದುರಾಗುವ ಆತಂಕ ಬಂದೊದಗಿದೆ.
ಈಗಾಗಲೇ 2016ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಐಪಿಎಲ್‌ನಿಂದ ಅಮಾನತುಗೊಂಡಿದ್ದವು. ಇದೀಗ ಇದೇ ಪರಿಸ್ಥಿತಿ ಕಾವ್ಯಾ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಎದುರಾಗುವ ಆತಂಕ ಬಂದೊದಗಿದೆ.
ತೆಲಂಗಾಣ ಕ್ರಿಕೆಟ್ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಐಪಿಎಲ್ ಟಿಕೆಟ್ ಹಗರಣ ಹಲವು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಎ ಜಗನ್ ಮೋಹನ್ ರಾವ್ ಮತ್ತು ಇತರ ನಾಲ್ವರು ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಸ್‌ಆರ್‌ಎಚ್ ಕೂಡ 2025ರ ಐಪಿಎಲ್‌ನಲ್ಲಿ ಉಚಿತ ಟಿಕೆಟ್‌ಗೊಸ್ಕರ ಬ್ಲ್ಯಾಕ್‌ಮೇಲ್ ಮಾಡಿದ ಬಗ್ಗೆಯೂ ಎಚ್‌ಸಿಎ ವಿರುದ್ಧ ದೂರು ನೀಡಿತ್ತು. ಈ ಎಲ್ಲಾ ಕಾರಣಗಳಿಂದ ಜೂನ್ 12ರಂದು ತೆಲಂಗಾಣ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಡುವೆಯೇ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಎಸ್‌ಸಿಎಯನ್ನು ವಿಸರ್ಜನೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದರ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಹಾಗೂ ಅದರ ಈಗಿನ ಆಡಳಿತವನ್ನು ತೆಗೆದುಹಾಕಬೇಕೆಂತಲೂ ಆಗ್ರಹಿಸಿದ್ದಾರೆ.
ಟಿಸಿಎ ಪ್ರಧಾನ ಕಾರ್ಯದರ್ಶಿ ಧರಮ್ ಗುರವಾ ರೆಡ್ಡಿ ಅವರು ಜೂನ್ 9ರಂದು ಜಗನ್ ಮೋಹನ್ ರಾವ್ ಅವರ ವಿರುದ್ಧ ಈ ದೂರು ದಾಖಲು ಮಾಡಿದ್ದರು. ಜಗನ್ ಮೋಹನ್ ರಾವ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಕಲಿ ದಾಖಲೆಗಳನ್ನು ಬಳಕೆ ಮಾಡಿದ್ದಾರೆಂದು ಈ ದೂರಿನಲ್ಲಿ ಆರೋಪ ಮಾಡಲಾಗಿದೆ. ಅಷ್ಟೇ ಅಲ್ಲದೆ, ಎಚ್‌ಸಿಎ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಸೇರಿ 2.3 ಕೋಟಿ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರನ್ವಯ ಸಿಐಡಿ ಪೊಲೀಸರು ಕೇಸ್ ದಾಖಲಿಸಿ ಜಗನ್ ಮೋಹನ್ ರಾವ್ ಅವರನ್ನು ಅವರ ಮನೆಯಲ್ಲಿ ಬಂಧಿಸಿದರು.












Click it and Unblock the Notifications