DPL T20: ಸನ್‌ರೈಸರ್ಸ್ ಹೈದರಾಬಾದ್ ದಾಖಲೆ ಉಡೀಸ್; 20 ಓವರ್ 31 ಸಿಕ್ಸರ್, 19 ಬೌಂಡರಿ 308 ರನ್
ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 2024ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಿರ್ಮಿಸಿದ್ದ ಗರಿಷ್ಠ ರನ್‌ಗಳ ದಾಖಲೆ ಇದೀಗ ಹಳೆಯದಾಗಿದೆ. ಭಾರತ ಟಿ20 ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ತಂಡವೊಂದು 300 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿದೆ. ಸದ್ಯ ನಡೆಯುತ್ತಿರುವ ದೆಹಲಿ ಪ್ರೀಮಿಯರ್ ಲೀಗ್ (DPL) ಟಿ20 ಪಂದ್ಯಾವಳಿಯಲ್ಲಿ ಭಾರತದ ಕ್ರಿಕೆಟಿಗರು ಹೊಸ ದಾಖಲೆ ಬರೆದಿದ್ದಾರೆ.
ಶಿಖರ್ ಧವನ್ ಮಾಲಿಕತ್ವದ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಜ್ (SDS) ತಂಡವು ಉತ್ತರ ದೆಹಲಿ ಸ್ಟ್ರೈಕರ್ಸ್ (NDS) ವಿರುದ್ಧ ತಮ್ಮ 20 ಓವರ್‌ಗಳಲ್ಲಿ 308 ರನ್‌ಗಳನ್ನು ಗಳಿಸಿದ್ದು ಹೊಸ ದಾಖಲೆ ಬರೆದಿದೆ. ಈ ಮೂಲಕ ಭಾರತದಲ್ಲಿ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ದಾಖಲೆಯನ್ನು ಮುರಿದಿದೆ.

ಆಯುಶ್ ಬದೋನಿ-ಆರ್ಯ ಶತಕ
ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡದ ಪ್ರಿಯಾಂಶ್ ಆರ್ಯ ಮತ್ತು ಆಯುಷ್ ಬದೋನಿ ಇಬ್ಬರ ಅಬ್ಬರಕ್ಕೆ ದಾಖಲೆಗಳು ಪುಡಿಯಾದವು. ಇಬ್ಬರು ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 99 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 286 ರನ್ ಕಲೆ ಹಾಕಿದರು. ಇಬ್ಬರ ಆಟ ನೋಡಿದ ಎದುರಾಳಿ ತಂಡದ ಬೌಲರ್ ಗಳು ಸಂಪೂರ್ಣ ಕಕ್ಕಾಬಿಕ್ಕಿಯಾಗಿದ್ದರು.
ಎಡಗೈ ಸ್ಪಿನ್ನರ್ ಮನನ್ ಭಾರದ್ವಾಜ್ ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿದ ಪ್ರಿಯಾಂಶ್ ಆರ್ಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಪ್ರಾಂಶು ವಿಜಯರನ್ ಹೊರತುಪಡಿಸಿ, ಉತ್ತರ ದೆಹಲಿಯ ಯಾವ ಬೌಲರ್ ಕೂಡ 10 ಕ್ಕಿಂತ ಕಡಿಮೆ ಎಕಾನಮಿ ದರವನ್ನು ಹೊಂದಿರಲಿಲ್ಲ. ಸಿದ್ಧಾರ್ಥ್ ಸೋಲಂಕಿ ಕೊನೆಯ ಓವರ್‌ನಲ್ಲಿ ಕೇವಲ 9 ರನ್‌ಗಳನ್ನು ಬಿಟ್ಟುಕೊಟ್ಟರು, ಇಲ್ಲದಿದ್ದರೆ ನೇಪಾಳ ಮಾಡಿದ್ದ ವಿಶ್ವದಾಖಲೆ ಕೂಡ ಇಂದು ಮುರಿಯುತ್ತಿತ್ತು.
50 ಬೌಂಡರಿ ದಾಖಲು
ಮೊದಲ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡಿದ 120 ಎಸೆತಗಳಲ್ಲಿ 31 ಸಿಕ್ಸರ್ ಬಂದರೆ 19 ಬೌಂಡರಿ ಬಂದವು. ಒಟ್ಟು 50 ಬೌಂಡರಿಗಳು ದಾಖಲಾಗಿದ್ದು ಕೂಡ ಹೊಸ ದಾಖಲೆಯಾಗಿದೆ. ಆಯುಷ್ ಬದೋನಿ 55 ಎಸೆತಗಳಲ್ಲಿ ಬರೋಬ್ಬರಿ 165 ರನ್ ಗಳಿಸಿದರು. ಇದು ಭಾರತೀಯ ಕ್ರಿಕೆಟಿಗ ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ ಗರಿಷ್ಠ ರನ್ ಆಗಿದೆ. ಪ್ರಿಯಾಂಶ್ ಆರ್ಯ 50 ಎಸೆತಗಳಲ್ಲಿ 120 ರನ್ ಗಳಿಸಿದರು.
ಪುರುಷರ ಟಿ20 ಕ್ರಿಕೆಟ್‌ನಲ್ಲಿ ನೇಪಾಳ ಮೊಂಗೋಲಿಯಾ ವಿರುದ್ಧ 20 ಓವರ್ ಗಳಲ್ಲಿ 314 ರನ್ ಗಳಿಸಿರುವುದು ಈವರೆಗೆ ದಾಖಲಾದ ಅತ್ಯಧಿಕ ಟಿ20 ಸ್ಕೋರ್ ಆಗಿದೆ. ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ಈಗ 308 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐಪಿಎಲ್‌ನಲ್ಲಿ 287 ರನ್ ಗಳಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications