Shubman Gill: ₹450 ಕೋಟಿ ವಂಚನೆ ಹಗರಣ; ಟೀಂ ಇಂಡಿಯಾ ಆಟಗಾರ ಶುಭಮನ್‌ ಗಿಲ್‌ಗೆ ಸಮನ್ಸ್ ನೀಡಿದ ಸಿಐಡಿ

ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್, ಸದ್ಯ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡಕ್ಕಾಗಿ ಆಡುತ್ತಿದ್ದಾರೆ. ಮೆಲ್ಬೋರ್ನ್‌ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಅವರು, ಸಿಡ್ನಿ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಐದನೇ ಟೆಸ್ಟ್‌ನಲ್ಲಿ ಆಡಲು ಸಜ್ಜಾಗುತ್ತಿದ್ದ ಬೆನ್ನಲ್ಲೇ ಗುಜರಾತ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಶುಭಮನ್‌ ಗಿಲ್‌ಗೆ ಶಾಕ್ ಕೊಟ್ಟಿದೆ.

ಬಿಝಡ್ ಫೈನನ್ಷಿಯಲ್ ಸರ್ವಿಸ್‌ ವಂಚನೆ ಹಗರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಅಪರಾಧ ತನಿಖಾ ಇಲಾಖೆ (ಸಿಐಡಿ) ನಾಲ್ವರು ಗುಜರಾತ್ ಟೈಟಾನ್ಸ್ (ಜಿಟಿ) ಆಟಗಾರರಿಗೆ ಸಮನ್ಸ್ ನೀಡಿದೆ. ಶುಭಮನ್ ಗಿಲ್, ಸಾಯಿ ಸುದರ್ಶನ್, ಮೋಹಿತ್ ಶರ್ಮಾ ಮತ್ತು ರಾಹುಲ್ ತೆವಾಟಿಯಾ ಅವರಿಗೆ ಸಿಐಡಿ ಸಮನ್ಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಕೇಳಿದೆ.

Shubman gill summoned by cid rs 450 crore scam

ಏನಿದು ಹಗರಣ?

ಅಹಮದಾಬಾದ್ ಮಿರರ್ ವರದಿ ಮಾಡಿರುವ ಪ್ರಕಾರ, ಈಗ ವಂಚನೆ ಆರೋಪ ಎದುರಿಸುತ್ತಿರುವ ಕಂಪನಿಯಲ್ಲಿ ಶುಭಮನ್ ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಉಳಿದ ಮೂವರು ಆಟಗಾರರು ಕೂಡ 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಿದ್ದಾರೆ. ಕಂಪನಿಯಲ್ಲಿ ಹೂಡಿಕೆ ಮಾಡಿದವರನ್ನು ವಿಚಾರಣೆ ನಡೆಸಲು ಸಿಐಡಿ ಮುಂದಾಗಿದ್ದು ಈ ನಾಲ್ವರು ಆಟಗಾರರಿಗೂ ಸಮನ್ಸ್ ನೀಡಿದೆ.

ಶುಭಮನ್ ಗಿಲ್ ಈಗ ಆಸ್ಟ್ರೇಲಿಯಾದಲ್ಲಿದ್ದರೆ ಉಳಿದ ಮೂವರು ಆಟಗಾರರು ಭಾರದಲ್ಲಿದ್ದಾರೆ. ತನಿಖೆಗೆ ಸಹಕರಿಸಲು ಎಲ್ಲರೂ ಗುಜರಾತ್‌ನ ಸಿಐಡಿ ಕಚೇರಿಗೆ ಹಾಜರಾಗಬೇಕಿದೆ. ನಾಲ್ವರ ಲಭ್ಯತೆ ಆಧಾರದ ಮೇಲೆ ವಿಚಾರಣೆಗೆ ಕರೆಯಲಾಗುವುದು ಎಂದು ಹೇಳಾಗಿದೆ.

ಬಿಝಡ್ ಸಂಸ್ಥೆಯು ಜನರಿಗೆ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕೊಟ್ಟ ಭರವಸೆಯಂತೆ ಬಡ್ಡಿದರ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಹಣ ಹೂಡಿಕೆ ಮಾಡಿದ್ದವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಬಿಝಡ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭೂಪೇಂದ್ರಸಿನ್ಹ್ ಝಾಲಾ 6000 ಕೋಟಿ ರೂಪಾಯಿ ಚಿಟ್-ಫಂಡ್ ವಂಚನೆ ಮಾಡಿದ್ದಾರೆ ಎಂದು ಗುಜರಾತ್ ಸಿಐಡಿ ಹೇಳಿತ್ತು, ಹೆಚ್ಚಿನ ತನಿಖೆ ಬಳಿಕ ಇದೀಗ 450 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ಹೇಳಿದೆ.

ಶುಭಮನ್ ಗಿಲ್ ಸಿಡ್ನಿ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಕೊನೆಯ ಟೆಸ್ಟ್‌ನಲ್ಲಿ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅವರ ಸ್ಥಾನದಲ್ಲಿ ಗಿಲ್ ಕಣಕ್ಕಿಳಿಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+